Advertisement

ಕಾಫಿ ಡೇ ರಾಲಿಯಲ್ಲಿ ಕುಡ್ಲದ ಪ್ರತಿಭೆ

06:15 AM Nov 17, 2017 | Harsha Rao |

ಮಂಗಳೂರು: ಚಿಕ್ಕಮಗಳೂರಿನಲ್ಲಿ ನ. 24ರಿಂದ 26ರ ವರೆಗೆ ನಡೆಯಲಿರುವ “ಕಾಫಿ ಡೇ ಇಂಡಿಯನ್‌ ರಾಲಿ’ಯಲ್ಲಿ ಮಂಗಳೂರಿನ ಡೀನ್‌ ಮಸ್ಕರೇನಸ್‌ ಅವರು ಭಾಗ ವಹಿಸಲಿದ್ದಾರೆ.

Advertisement

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಸ್‌ನಲ್ಲಿ ಐಎನ್‌ಆರ್‌ಸಿಯ ಮೂರನೇ ವಿಭಾಗಗಳಲ್ಲಿ ಭಾಗವಹಿಸಲಿದ್ದೇನೆ. ವೋಕ್ಸಾ ವಾಗನ್‌ ಪೋಲೊ ಕಾರು ಬಳಸುತ್ತಿದ್ದು, ಇಲ್ಲಿಯವರೆಗೆ 18 ರಾಷ್ಟ್ರೀಯ ಮಟ್ಟದ ರಾಲಿಯಲ್ಲಿ ಭಾವಹಿಸಿದ್ದು, 14ರಲ್ಲಿ ಮೊದಲ ಸ್ಥಾನ ಸಂಪಾದಿಸಿದ್ದೇನೆ. ಅಲ್ಲದೆ, 20 ಸಕೂìÂಟ್‌ ರೇಸ್‌ನಲ್ಲಿ ಭಾಗವಹಿಸಿ 15 ರಲ್ಲಿ ಪ್ರಥಮ ಗಳಿಸಿದ್ದೇನೆ ಎಂದರು.

ನನಗೆ ಬಾಲ್ಯದಿಂದಲೇ ಕಾರು ರೇಸ್‌ ಬಗ್ಗೆ ಆಸಕ್ತಿ. ತಂದೆ ಕೂಡ ಕಾರು ರಾಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸುಮಾರು 8 ವರ್ಷದಲ್ಲಿರುವಾಗಲೇ ತಂದೆಯ ಜೊತೆ ರೇಸ್‌ನಲ್ಲಿ ಭಾಗವಹಿಸಿದ್ದೆ. ಈ ವರ್ಷ ಜುಲೈನಲ್ಲಿ ಕೊಯಮತ್ತೂರಿನಲ್ಲಿ ನಡೆದ ಸ್ಪರ್ಧೆ, ಆಗಸ್ಟ್‌ನಲ್ಲಿ ರಾಜಸ್ಥಾನದಲ್ಲಿ ನಡೆದ ಕಾರ್‌ ರೇಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇದೀಗ ಚಿಕ್ಕಮಗಳೂರಿನಲ್ಲಿ ನಡೆಯುವ  ಕಾಫಿ ಡೇ ಇಂಡಿಯನ್‌ ರಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇದಾದ ಬಳಿಕ ಬೆಂಗಳೂರು, ಅರುಣಾಚಲ ಪ್ರದೇಶದಲ್ಲಿ ನಡೆಯುವ ಸ್ಪರ್ಧೆಗೆ ತಯಾರಿಯಲ್ಲಿದ್ದೇನೆ ಎಂದರು.

ಸದ್ಯಕ್ಕೆ ನಾನು ಯಾವುದೇ ತಂಡದ ಮೂಲಕ ಗುರುತಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದರ ಬದಲು ವೈಯುಕ್ತಿಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಲಿಯಲ್ಲಿ ನನ್ನ ನ್ಯಾವಿಗೇಟರ್‌ ಆಗಿ ಶೃಪ್ತ ಪಡಿವಾಳ್‌ ಅವರು ಭಾಗವಹಿಸುತ್ತಿದ್ದಾರೆ. ಕಾರ್‌ ರೇಸ್‌ನಲ್ಲಿ ಮೊದಲನೇ ಸ್ಥಾನಕ್ಕೇರಿ ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಹರಿಸಬೇಕೆಂಬ ಗುರಿ ನನ್ನದು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next