Advertisement

ಬಿಸಿಸಿಐನಲ್ಲಿ ಕಾಸ್ಟ್ ಕಟ್ಟಿಂಗ್: ಬ್ಯುಸಿನೆಸ್‌ ಕ್ಲಾಸ್‌ ವಿಮಾನ ಪ್ರಯಾಣಕ್ಕೂ ಬಂತು ಸಂಚಕಾರ

12:29 PM Mar 19, 2020 | keerthan |

ನವದೆಹಲಿ: ದೇಶಿ ವಿಮಾನ ಪ್ರಯಾಣದಲ್ಲಿ ಭಾರತ ಕ್ರಿಕೆಟ್‌ ಆಯ್ಕೆ ಸಮಿತಿ ಮುಖಸ್ಥರಿಗೆ ಮಾತ್ರ ಬ್ಯುಸಿನೆಸ್‌ ಕ್ಲಾಸ್‌ ಪ್ರಯಾಣ ಮಾಡುವ ಅವಕಾಶವಿದೆ. ಉಳಿದಂತೆ ಎಲ್ಲ ಪದಾಧಿಕಾರಿಗಳು ಎಕಾನಮಿ ಕ್ಲಾಸ್‌ನಲ್ಲಿಯೇ ಪ್ರಯಾಣ ಮಾಡಬೇಕು ಎಂದು ಬಿಸಿಸಿಐ ನಿಯ ಮಾವಳಿ ರೂಪಿಸಿದೆ.

Advertisement

ಕಿರಿಯರ ಆಯ್ಕೆ ಸಮಿತಿಗೂ ಇದೇ ನಿಯಮ ಅನ್ವಯ ವಾಗಲಿದೆ. ಈ ಪ್ರಕಾರವಾಗಿ ಹೊಸ ದಾಗಿ ಬಿಸಿಸಿಐ  ಆಯ್ಕೆ ಸಮಿತಿಗೆ ಮುಖ್ಯಸ್ಥರಾಗಿ ಆಯ್ಕೆ ಯಾಗಿರುವ ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣ ಮಾಡಲಿದ್ದಾರೆ.

ಉಳಿದಂತೆ ಸಮಿತಿಯಲ್ಲಿರುವ ಇತರರಾದ ಸರಣ್‌ದೀಪ್‌ ಸಿಂಗ್‌, ಹರ್ವಿಂದರ್‌ ಸಿಂಗ್‌, ದೇವಾಂಗ್‌ ಗಾಂಧಿ ಹಾಗೂ ಜತಿನ್‌ ಪರಾಂಜಪೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಲಿ ದ್ದಾರೆ. ಆದರೆ ವಿದೇಶಕ್ಕೆ ತೆರಳುವ ವೇಳೆ ಸುದೀರ್ಘ‌ ಪ್ರಯಾಣ ಇರುವುದ ರಿಂದ ಎಲ್ಲರಿಗೂ ಬ್ಯುಸಿನೆಸ್‌ ಕ್ಲಾಸ್‌ ಸೇವೆ ಬಳಸಿಕೊಳ್ಳುವ ಅವಕಾಶವಿದೆ. 7 ಗಂಟೆಗೂ ಹೆಚ್ಚಿನ ಪ್ರಯಾಣಕ್ಕೆ ಮಾತ್ರ ಬಿಸಿಸಿಐ ನಿಯಮದಲ್ಲಿ ಸಡಿಲಿಕೆ ಮಾಡಿದೆ

Advertisement

Udayavani is now on Telegram. Click here to join our channel and stay updated with the latest news.

Next