Advertisement

Harish Poonja ಭ್ರಷ್ಟ ಕುಟುಂಬದಿಂದ ಬಂದವರಿಂದ ಭ್ರಷ್ಟಾಚಾರದ ಪಾಠ: ಹರೀಶ್‌ ಪೂಂಜ

10:02 PM Aug 13, 2024 | Team Udayavani |

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ಆಮದು ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ ನನ್ನ ಮೇಲೆ ಮಾಡಿರುವ ಐಬಿ ಹಗರಣ, ರಾಷ್ಟ್ರೀಯ ಹೆದ್ದಾರಿ ಕಿಕ್‌ ಬ್ಯಾಕ್‌ ಆರೋಪ, ಬಿಮಲ್‌ನಲ್ಲಿ ನನ್ನ ಪಾಲುದಾರಿಕೆ ಈ ಎಲ್ಲ ಆರೋಪಕ್ಕೆ ಪ್ರತ್ಯುತ್ತರವಾಗಿ ನಾನು ಆ. 14ರಂದು ಬೆಳ್ತಂಗಡಿ ಮಾರಿಗುಡಿಯಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಇದರಲ್ಲಿ ನನ್ನ ಯಾವುದೇ ಶಾಮೀಲು ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ.

Advertisement

ಜತೆಗೆ ಇವರದೇ ಸರಕಾರ ಎಸ್‌ಐಟಿ ತನಿಖೆ ನಡೆಸಲಿ ಎಂದು ಶಾಸಕ ಹರೀಶ್‌ ಪೂಂಜ ನೇರ ಸವಾಲೆಸೆದರು.

ಉಜಿರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಿಟಿಷರ ಬಗ್ಗೆ ಸಹಾನುಭೂತಿಯುಳ್ಳ ವ್ಯಕ್ತಿ ಬ್ರಿಟೀಷರ ಬಂಗಲೆ ಕೆಡವಿದರು ಎಂದು ಹೇಳಿದ್ದಾರೆ. ಅಲ್ಲಿ ಸೋರುತ್ತಿದ್ದ ಕಟ್ಟಡ, ಗಬ್ಬು ನಾರುತ್ತಿದ್ದ ವ್ಯವಸ್ಥೆ ಬಗ್ಗೆ, ಒಬ್ಬ ಅಧಿಕಾರಿ ಬಂದರೆ ಉಳಿದುಕೊಳ್ಳಲಾಗದ ಸ್ಥಿತಿಯ ಬಗ್ಗೆ ಮಾತನಾಡಿಲ್ಲ. ಪ್ರವಾಸೋಧ್ಯಮ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯಡಿ ಸುಂದರ ಐಬಿ ನಿರ್ಮಾಣ ಕೆಲಸವಾಗಿದೆ. ಶೇ. 60 ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದ್ದಾರೆ.

ಅದರಲ್ಲಿ ನಾನು 1 ರೂ. ತೆಗೆದುಕೊಂಡಿಲ್ಲ. ಬಿಮಲ್‌ನಲ್ಲಿ ನನ್ನ ಯಾವುದೇ ಪಾಲುದಾರಿಕೆಯಿಲ್ಲ. ರೆಖ್ಯದಲ್ಲಿ ತಡೆಗೋಡೆ ಬಿದ್ದ ವಿಚಾರದಲ್ಲಿ ಗುಣಮಟ್ಟ ಪರಿಶೀಲಿಸಿಯೇ ಬಿಲ್‌ ಪಾಸ್‌ ಅಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಡಿ.ಪಿ.ಜೈನ್‌ ಗುತ್ತಿಗೆಯಡಿ 3 ಕೋಟಿ.ರೂ. ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂಬ ಆರೋಪ ಮಾಡಿರುವ ರಕ್ಷಿತ್‌ಗೆ ಬೆಳ್ತಂಗಡಿ ಕುಗ್ರಾಮ ಸ್ಥಿತಿಯಲ್ಲಿರಬೇಕೆಂಬುದು ಅವರ ಚಿಂತನೆ. ಅಭಿವೃದ್ಧಿ ಯೋಚನೆಯಿಲ್ಲದ ರಾಜಕೀಯ ವ್ಯಕ್ತಿ ಎಂದು ಆರೋಪಿಸಿದರು.

Advertisement

ಮಳೆಗಾಲದ ವಿಚಾರದಲ್ಲಿ ರಾಜಕೀಯ ಮಾಡಿದ ರಕ್ಷಿತ್‌ ಶಿವರಾಮ್‌ ಕಳೆದ 2019ರಲ್ಲಿ ನೆರೆ ಬಂದಾಗ ಇದೇ ಬೆಳ್ತಂಗಡಿಯಲ್ಲಿ ಹುಟ್ಟಿದ್ದೇನೆ ಎಂದು ತಿರುಗಾಡುತ್ತಿದ್ದ ವ್ಯಕ್ತಿ ಯಾರಿಗೆ ಏನು ಸಹಾಯ ಹಸ್ತ ಚಾಚಿದ್ದಾರೆ. ಅಂದು ಪ್ರತಿ ಮನೆಗೆ ಭೇಟಿ ನೀಡಿ ಅಲ್ಲಿನ ಜನತೆಯ ಕಷ್ಟ ಆಲಿಸಿ ನನ್ನ ಸ್ವಂತ ದುಡಿಮೆಯಿಂದ 45 ಲಕ್ಷ ರೂ. ವರೆಗೆ ನೀಡಿದ್ದೇನೆ. ಮೊನ್ನೆ ಮಳೆಗೆ ಮನೆ ಬಿದ್ದ ಸ್ಥಳಗಳಿಗೆ ತೆರಳಿ 4ರಿಂದ 5 ಲಕ್ಷ ರೂ. ವೈಯಕ್ತಿಕ ದುಡಿಮೆಯ ಹಣ ನೀಡಿದ್ದೇನೆ. ನಿಮ್ಮ ಬೆಸ್ಟ್‌ ಫೌಂಡೇಶನ್‌ ವೇಸ್ಟ್‌ ಫೌಂಡೇಶನ್‌ ಆಗಿದೆಯಾ? ನಿಮ್ಮ ಡೋಂಗಿ ರಾಜಕೀಯ ಜನತೆಗೆ ತಿಳಿದಿದೆ ಎಂದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೀವು ನಿಮ್ಮ ಕುಟುಂಬ ಬೆಂಗಳೂರಿನ ಮಲ್ಲೇಶ್ವರಂನಿಂದ ಬಂದ ರೋಲ್‌ಕಾಲ್‌ ಸಹಿತ ಅನೇಕ ದಂಧೆಗಳಿಂದ ಬಂದ ಹಣದಿಂದ ಹಫ್ತಾ ಮಸೂಲಿ ಮಾಡಿ ನಿಮ್ಮ ರಕ್ತದಲ್ಲೇ ಭ್ರಷ್ಟತೆ ಇರುವಂತಹದು. ನಾನು ಅಂಗ ರಕ್ಷಕ ಇಟ್ಟು ತಿರುಗಾಡುತ್ತೇನೆ ಎನ್ನುವ ನೀವು ನಿಮ್ಮದೇ ಸರಕಾರವಿದೆ ತಾಕತ್ತಿದ್ದರೆ ತೆಗೆಸಿ. ಅಷ್ಟಕ್ಕೂ ನನ್ನ ಇಡೀ ಕುಟುಂಬ ಮತ್ತು ನಿಮ್ಮ ಇಡೀ ಕುಟುಂಬ ಲೋಕಾಯುಕ್ತ ತನಿಖೆಗೆ ಇರಿಸೋಣ ಇದು ನನ್ನ ನೇರ ಸವಾಲು ಭ್ರಷ್ಟಾಚಾರ ಯಾರು ಮಾಡಿದ್ದಾರೆ ಎಂದು ಸಾಬೀತು ಆಗಲಿ ಎಂದು ಸವಾಲೆಸೆದರು.

ಜಿಲ್ಲಾ ಉಪಾಧ್ಯಕ್ಷ ಜಯಂತ್‌ ಕೋಟ್ಯಾನ್‌, ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್‌, ಪ್ರ.ಕಾರ್ಯದರ್ಶಿಗಳಾದ ಪ್ರಶಾಂತ್‌ ಪಾರೆಂಕಿ, ಜಯಾನಂದ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next