Advertisement

ಭ್ರಷ್ಟಾಚಾರ ರಹಿತ ಸರ್ಕಾರ ನಮ್ಮ ಧ್ಯೇಯ

12:49 AM Apr 15, 2019 | Team Udayavani |

ಬೆಂಗಳೂರು: ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಜನರಿಗಾಗಿ 24 ಗಂಟೆ ದುಡಿಯುವ ಸರ್ಕಾರವೇ ನಮ್ಮ ಗುರಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಜತೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಷೇತ್ರದಲ್ಲಿ ಭಾನುವಾರ ಮನೆ ಮನೆ ಪ್ರಚಾರ ಕೈಗೊಂಡಿದ್ದರು.

ಬೆಂಗಳೂರಿನ ಜೆಪಿ ನಗರದ ರಂಗ ಶಂಕರದ ಬಳಿ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದ ಸಚಿವೆ, ಮತ್ತೂಮ್ಮೆ ಮೋದಿಯವರ ಆಯ್ಕೆಗಾಗಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಅವರು ಬಿಜೆಪಿ ಪ್ರಚಾರದ ಕರಪತ್ರವನ್ನು ನಾಗರಿಕರಿಗೆ ನೀಡಿ ಮತ ಕೇಳಿದರು. “ಸಾರ್ವಜನಿಕರ ಸ್ಪಂದನೆ ನೋಡಿ ಅಚ್ಚರಿಯಾಗಿದೆ’ ಎಂದ ಸಚಿವೆ, ಜನರ ಸ್ಪಂದನೆಗೆ ಧನ್ಯವಾದ ತಿಳಿದರು.

“ಬಿಜೆಪಿ ಮತ್ತು ಮತ್ತೂಮ್ಮೆ ಮೋದಿ ಸರ್ಕಾರಕ್ಕಾಗಿ ಅಭ್ಯರ್ಥಿಯ ಜತೆ ಮನೆ ಮನೆ ಪ್ರಚಾರ ಮಾಡುತ್ತಿದ್ದೇನೆ. ಈಗ ದೇಶದಲ್ಲಿ ಉತ್ತಮ ಕೆಲಸಗಳಿಗಾಗಿ ವಿಶ್ವಾಸಾರ್ಹ ಸರ್ಕಾರ ರಚನೆಯಾಗಬೇಕಿದೆ.

Advertisement

ಕರ್ನಾಟಕದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಸಾರ್ವಜನಿಕರ ಹಿತಾಸಕ್ತಿಗಳಿಗಾಗಿ ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕಿದೆ.

ನಮಗೆ ಇಲ್ಲಿ ಸಕಾರಾತ್ಮಕ ಬೆಂಬಲ ದೊರೆಯುತ್ತಿದೆ. ತೇಜಸ್ವಿ ಸೂರ್ಯ ಯುವಕನಾಗಿದ್ದು, ಪ್ರಧಾನಿಯವರಂತೆ 24 ಗಂಟೆ ಜನರಿಗಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಅವರಿಗೆ ಬೆಂಬಲ ನೀಡಬೇಕು’ ಎಂದು ಸಚಿವೆ ಮನವಿ ಮಾಡಿದರು.

ಮನೆ ಮನೆ ಪ್ರಚಾರಕ್ಕೂ ಮೊದಲು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಅಭ್ಯರ್ಥಿ ತೇಜಸ್ವಿ ಸೂರ್ಯ, ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಸ್ಥಾಪನೆಗೆ ನರೇಂದ್ರ ಮೋದಿ ನೇತೃತ್ವದ ಭ್ರಷ್ಟಾಚಾರರಹಿತ ಸರ್ಕಾರದಿಂದ ಮಾತ್ರ ಸಾಧ್ಯ. ಐದು ವರ್ಷಗಳಲ್ಲಿ ಬಡವರ, ದಲಿತರ ಏಳ್ಗೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next