ಜಗಳೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಎಸ್‌ಇಪಿಟಿಎಸ್‌ಪಿ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿಯಲ್ಲಿ 4 ಕೋಟಿ ರೂ. ಅನುದಾನದುರುಪಯೋಗವಾಗಿದೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಹೈಮಾಸ್ಟ್ ದೀಪ ಅಳವಡಿಕೆಗೆಸರ್ಕಾರಿ ಅಂದಾಜು ವೆಚ್ಚ 1.25 ಲಕ್ಷ ರೂ.ಇದೆ. ಆದರೆ ಇಲ್ಲಿನ ಶಾಸಕರು 2.20 ಲಕ್ಷ ರೂ. ವರೆಗೆ ಅಂದಾಜು ಮೊತ್ತ ಹೆಚ್ಚಿಸಿದ್ದಾರೆ. ಹೆಚ್ಚೆಂದರೆ ಸುಮಾರು 2 ಕೋಟಿ ರೂ.ಖರ್ಚಾಗಿರಬಹುದು. 4 ಕೋಟಿ ರೂ. ಅನುದಾನ ದುರುಪಯೋಗವಾಗಿದೆ. ಅಲ್ಲದೆ12 ಕೋಟಿ ರೂ. ವೆಚ್ಚದ ಕೆರೆ ಹೂಳೆತ್ತುವ ಯೋಜನೆಯಲ್ಲೂ ಹಗರಣ ನಡೆದಿದೆ. ಈಹಗರಣದ ಸಮಗ್ರ ತನಿಖೆ ನಡೆಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಗಮನಕ್ಕೆ ತಂದಿದ್ದೇವೆ. ವಿಧಾನಸಭೆಯಲ್ಲಿ ಪ್ರಸ್ತಾಪಿಸುವಂತೆ ಪತ್ರ ಬರೆಯಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಜಲ ಆಯೋಗದ ವ್ಯಾಪ್ತಿಗೆ ಸೇರಿಸಿದಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇವೆ. ಈಯೋಜನೆಯನ್ನು ಕೇಂದ್ರ ಜಲ ಆಯೋಗದವ್ಯಾಪ್ತಿಗೆ ಸೇರಿಸುವಂತೆ ಮಾಜಿ ಮುಖ್ಯಮಂತ್ರಿದಿ| ಎಸ್. ನಿಜಲಿಂಗಪ್ಪ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಹೋರಾಟ ಸಮಿತಿಯಿಂದ ಸಾಕಷ್ಟು ಹೋರಾಟ ಮಾಡಿ ಒತ್ತಡ ಹೇರಲಾಗಿತ್ತು. ಇದೀಗ ಅದಕ್ಕೆ ಮನ್ನಣೆ ಸಿಕ್ಕಿದೆ. ಈ ಯೋಜನೆ ಸುಮಾರು ಮೂರ್‍ನಾಲ್ಕುಜಿಲ್ಲೆಗಳಿಗೆ ಅನುಕೂಲ ಆಗಲಿದೆ. ಆದರೆ ಜಲ ಆಯೋಗದ ಶಿಫಾರಸು ಪತ್ರ ತಂದು ದೊಡ್ಡಸಾಧನೆ ಎಂಬಂತೆ ಶಾಸಕ ರಾಮಚಂದ್ರಸುದ್ದಿಗೋಷ್ಠಿಯಲ್ಲಿ ಬಿಂಬಿಸಿಕೊಂಡಿದ್ದಾರೆ. ಇದು ಗ್ರಾಪಂ ಚುನಾವಣಾ ಸಮಯದಲ್ಲಿ ಗಿಮಿಕ್ ಮಾಡುವ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಕಿಡಿ ಕಾರಿದರು.
57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಶಾಸಕರ ಪಾತ್ರ ಶೂನ್ಯ. ಸಿರಿಗೆರೆ ಶ್ರೀಗಳ ಕೃಪಾಕಟಾಕ್ಷದಿಂದ ಈ ಯೋಜನೆ ಜಾರಿಯಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಯೋಜನೆಗೆ 250 ಕೋಟಿ ರೂ. ಮೀಸಲಿಡಲಾಗಿತ್ತು. ಸಮ್ಮಿಶ್ರ ಸರಕಾರ 650 ಕೋಟಿ ರೂ.ಗಳಿಗೆ ಹೆಚ್ಚಿಸಿತು. ಬಿಜೆಪಿ ಸರಕಾರ ಅನುದಾನ ಬಿಡುಗಡೆ ಮಾಡಿದೆಯಷ್ಟೇ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ. ಈಗಾಗಲೇ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದಿಂದನಡೆಯುವಂತೆ ನಿಗಾ ವಹಿಸಬೇಕಾಗಿದೆ ಎಂದರು.
ತುಂಗಭದ್ರಾ ಹಿನ್ನೀರು ಯೋಜನೆ ತಾಲೂಕಿನಲ್ಲಿ ಹಾದು ಹೋಗುತ್ತಿದೆ. ಈ ಯೋಜನೆಯಲ್ಲಿ ತಾಲೂಕನ್ನು ಸೇರಿಸಲು ನಾನು ವಿಫಲನಾಗಿದ್ದೇನೆ ಎಂದು ಶಾಸಕರು ಪದೇ ಪದೇ ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಈ ಯೋಜನೆ ಸೇರ್ಪಡೆಗೆ ಬಹಳಷ್ಟು ಶ್ರಮಹಾಕಿದ್ದೆ. ಆದರೆ ನಿಮ್ಮ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ,ಇದರಲ್ಲಿ ಬೇಡ ಎಂದು ಅಧಿಕಾರಿಗಳು ಹೇಳಿದ್ದರು ಎಂದು ಸ್ಪಷ್ಟಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಜಗಳೂರು ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ರಾಜೀವ್ ಗಾಂ ಧಿ ಸಬ್ ಮಿಷನ್ ಯೋಜನೆಯಡಿ ಕಾಂಗ್ರೆಸ್ ಸರ್ಕಾರ ಇದ್ದಾಗ350 ಕೋಟಿ ರೂ. ಅನುದಾನ ನಿಗದಿಪಡಿಸಿ ಸಚಿವ ಸಂಪುಟದ ಮುಂದೆ ತರಲಾಗಿತ್ತು. ಆದರೆ ಸರ್ಕಾರದ ಅವಧಿ ಮುಗಿದ ಕಾರಣ ನನೆಗುದಿಗೆ ಬಿದ್ದಿದೆ. ಇನ್ನು ಆರು ತಿಂಗಳ ಒಳಗಾಗಿ ಇದಕ್ಕೆ ಸಂಬಂಧಿಸಿದ ಕಡತ ಕೈಗೆತ್ತಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷದಿಂದ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಗುಡುಗಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಪಲ್ಲಾಗಟ್ಟೆ ಶೇಖರಪ್ಪ, ಎಸ್ಟಿ ಘಟಕದತಾಲೂಕು ಅಧ್ಯಕ್ಷ ಬಿ. ಲೋಕೇಶ್, ಮಹಿಳಾಘಟಕದ ಅಧ್ಯಕ್ಷೆ ಕೆಂಚಮ್ಮ ಧನ್ಯಕುಮಾರ್, ಪ್ರಧಾನ ಕಾರ್ಯದರ್ಶಿ ಸಾವಿತ್ರಮ್ಮ, ಪಪಂಸದಸ್ಯರಾದ ರವಿಕುಮಾರ್ ಅಹಮ್ಮದ್ ಅಲಿ, ಮುಖಂಡ ಎಲ್.ಬಿ. ಬೈರೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.