Advertisement

ಕಸ ನಿರ್ವಹಣೆಯಲ್ಲೂ ಭ್ರಷ್ಟಾಚಾರ

10:55 AM Nov 16, 2017 | Team Udayavani |

ಬೆಂಗಳೂರು: ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ಸಂಸ್ಕರಣೆ ಘಟಕಗಳ ನಿರ್ವಹಣೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಪ್ರಕರಣವನ್ನು ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪಾಲಿಕೆಯ 7 ಘಟಕಗಳನ್ನು ಗುತ್ತಿಗೆದಾರರು ನಿರ್ವಹಣೆಯ ವೇಳೆ ಪ್ರತಿ ಟನ್‌ ಗೊಬ್ಬರ ತಯಾರಿಕೆಗೆ ಕೇವಲ 465 ರಿಂದ 810 ರೂ. ಪಡೆಯುತ್ತಿದ್ದರು. ಆದರೆ, ಗುತ್ತಿಗೆ ಸಂಸ್ಥೆಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರೆಸಿ ಅವರ ಗುತ್ತಿಗೆ ರದ್ದುಪಡಿಸಿರುವ ಅಧಿಕಾರಿಗಳು, ಪಾಲಿಕೆಯಿಂದಲೇ ನೇರವಾಗಿ ಘಟಕಗಳ ನಿರ್ವಹಣೆ ವಹಿಸಿಕೊಂಡಿದ ನಂತರ ಕೋಟ್ಯಂತರ ಅವ್ಯವಹಾರ ನಡೆಸಿದೆ. ಇದಕ್ಕೆಲ್ಲ ಪಾಲಿಕೆಯ ಆರೋಗ್ಯ ವಿಭಾಗದ ಜಂಟಿ ಆಯುಕ್ತರೇ ನೇರ ಹೊಣೆ ಎಂದು ಆರೋಪಿಸಿದರು.

ಪಾಲಿಕೆಯ 7 ತ್ಯಾಜ್ಯ ಸಂಸ್ಕರಣೆ ಘಟಕಗಳು ನಿತ್ಯ 2700 ಮೆಟ್ರಿಕ್‌ ಟನ್‌ ತ್ಯಾಜ್ಯ ಸಂಸ್ಕರಣೆ ಸಾಮರ್ಥಯವನ್ನು ಹೊಂದಿವೆ. ಆದರೆ, ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 300-400 ಟನ್‌ ಮಾತ್ರ ಸಂಸ್ಕರಣೆಯಾಗುತ್ತಿದೆ.

ಪಾಲಿಕೆಯಿಂದಲೇ ನೇರವಾಗಿ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಪ್ರತಿಟನ್‌ ಗೊಬ್ಬರ ತಯಾರಿಕೆಗೆ 1467 ರಿಂದ 19,330 ರೂ. ವರೆಗೆ ವೆಚ್ಚ ಮಾಡುವ ಮೂಲಕ ಭ್ರಷ್ಟಾಚಾರವೆ ಎಗಿರುವುದು ಲೆಕ್ಕಪರಿಶೋಧನೆಯಿಂದ ಬಯಲಾಗಿದೆ. ಅಧಿಕಾರಿಗಳು ಹಣ ಮಾಡುವ ಉದ್ದೇಶದಿಂದ ಬೇಕಾದವರಿಗೆ ನೇರವಾಗಿ ಗುತ್ತಿಗೆ ನೀಡುತ್ತಿದ್ದು, ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಂಸ್ಕರಣೆಯಾಗದೆ ಉಳಿಯುವ ತ್ಯಾಜ್ಯ ಬೇಕಾಬಿಟ್ಟಿ ಬೆಳ್ಳಳ್ಳಿ, ಮಿಟಗಾನಹಳ್ಳಿ ಕ್ವಾರಿಗಳಲ್ಲಿ ಸುರಿಯಲಾಗುತ್ತಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ವರದಿಯಿಂದ ಬಯಲಾಗಿದ್ದು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next