Advertisement

Pema:ಹಣ ಪಡೆದು ಮತ ಚಲಾಯಿಸುವ ಸಂಸ್ಕೃತಿ ಕೊನೆಗೊಳ್ಳಬೇಕು…ಹೋರಾಟಕ್ಕೆ ಸಿಎಂ ಖಂಡು ಕರೆ

04:49 PM Sep 21, 2023 | Team Udayavani |

ಇಟಾನಗರ್‌ (ಅರುಣಾಚಲಪ್ರದೇಶ): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು “ಹಣ ಪಡೆದು ಮತ ಚಲಾಯಿಸುವ” ಸಂಸ್ಕೃತಿಯ ವಿರುದ್ಧದ ಪ್ರಚಾರಾಂದೋಲನಕ್ಕೆ ಕೈಜೋಡಿಸಬೇಕೆಂದು ಅರುಣಾಚಲಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ತಮಿಳುನಾಡಿನ ಜತೆ ರಾಜಕೀಯ ಹಿತಾಸಕ್ತಿ; ರಾಜ್ಯದ ಕಾವೇರಿ ಹಿತ ಬಲಿ ಕೊಟ್ಟ ಕಾಂಗ್ರೆಸ್: HDK

ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲಲು ಕೋಟಿಗಟ್ಟಲೇ ಹಣ ವ್ಯಯಿಸುತ್ತಿರುವುದು ಮುಂದಿನ ಐದು ವರ್ಷಗಳಲ್ಲಿ ಆ ಹಣವನ್ನು ಗಳಿಸುವುದೇ ಅವರ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಖಂಡು ಆರೋಪಿಸಿದ್ದಾರೆ.

ಎಲೆಕ್ಷನ್‌ ವಾಚ್‌ ಡಾಗ್‌ ನ ಅಸೋಸಿಯೇಶನ್‌  ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಅಂಕಿಅಂಶದ ಪ್ರಕಾರ, ಬಿಜೆಪಿ ಮುಖಂಡ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಭಾರತದ ಎರಡನೇ ಅತೀ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ದೇಶದ ಯುವ ಮುಖ್ಯಮಂತ್ರಿಯಾಗಿರುವ ಫೆಮಾ (44 ವರ್ಷ) ಚುನಾವಣಾ ಅಫಿಡವಿತ್‌ ನಲ್ಲಿ ಸಲ್ಲಿಸಿರುವ ಮಾಹಿತಿ ಪ್ರಕಾರ ಒಟ್ಟು 163 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.

ಸುಬನ್ಸಿರಿ ಜಿಲ್ಲೆಯ ಯಾಚುಲಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖಂಡು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಅಭಿವೃದ್ಧಿ ಆಧಾರದ ಮೇಲೆ ಮತ ಚಲಾಯಿಸಬೇಕೆ ವಿನಃ ಹಣ ಪಡೆದು ಮತ ಚಲಾಯಿಸದಂತೆ ನೆರವು ನೀಡಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.

Advertisement

ನಾವು ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುತ್ತೇವೆ. ಆದರೆ ನಾವು ಈ ಭ್ರಷ್ಟಾಚಾರ ಎಲ್ಲಿಂದ ಆರಂಭವಾಗುತ್ತದೆ ಎಂಬುದನ್ನು ಯಾವಾಗಲಾದರೂ ಆಲೋಚಿಸಿದ್ದೇವಾ? ಇದು ಆಕೆ ಅಥವಾ ಆತ ಹಣ ಪಡೆದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಆರಂಭಗೊಳ್ಳುತ್ತದೆ ಎಂದು ಪೆಮಾ ಖಂಡು ವಿಶ್ಲೇಷಿಸಿದರು.

60 ಶಾಸಕರ ಬಲ ಹೊಂದಿರುವ ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಅದಕ್ಕೂ ಮೊದಲು ಭ್ರಷ್ಟಾಚಾರದ ವಿರುದ್ಧದ ಪ್ರಚಾರಾಂದೋಲನ ಆರಂಭಿಸಬೇಕಾಗಿದೆ ಎಂದು ಖಂಡು ಹೇಳಿದರು.

ದುರಾದೃಷ್ಟ ಎಂಬಂತೆ ನಮ್ಮ ರಾಜ್ಯದಲ್ಲಿ ಚುನಾವಣೆಯಲ್ಲಿ ಹಣ ವಿತರಿಸಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಆ ನಿಟ್ಟಿನಲ್ಲಿ ಹಣ ತಗೊಂಡು ಮತ ಚಲಾಯಿಸುವ ಸಂಸ್ಕೃತಿ ಕೊನೆಯಾಗಬೇಕು. ಹಣ ಪಡೆದು ಮತ ಚಲಾಯಿಸುವ ಮೂಲಕ ಅರ್ಹ, ಪ್ರಾಮಾಣಿಕ ಜನರು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಖಂಡು ತಿಳಿಸಿದ್ದಾರೆ.

ಪೆಮಾ ಖಂಡು ಅರುಣಾಚಲ ಪ್ರದೇಶದ ಮಾಜಿ ಸಿಎಂ ದೋರ್ಜಿ ಖಂಡು ಅವರ ಪುತ್ರ. ಪೆಮಾ ಅವರು ಕಾಂಗ್ರೆಸ್‌ ಮುಖಂಡರಾಗಿದ್ದು, 2016ರಲ್ಲಿ ಸಿಎಂ ಆಗಿದ್ದಾಗ ಕಾಂಗ್ರೆಸ್‌ ನಿಂದ ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಪಕ್ಷಕ್ಕೆ , ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next