ಲಕ್ನೋ : ಭ್ರಷ್ಟರು ಕೂಡ ಗಲಭೆಕೋರರಿಗಾದ ಗತಿಯನ್ನು ಎದುರಿಸುತ್ತಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಎಚ್ಚರಿಸಿದ್ದಾರೆ.
ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು “2017 ಕ್ಕಿಂತ ಮೊದಲು ಭ್ರಷ್ಟಾಚಾರವು ಸರ್ಕಾರಗಳ ವಂಶವಾಹಿಗಳಲ್ಲಿತ್ತು. ಈ ಹಿಂದೆ, ಸ್ವಂತ ಗುತ್ತಿಗೆದಾರರು ಮತ್ತು ಸಹಾಯಕರಿಗೆ ಅನುಕೂಲವಾಗುವಂತೆ ಸರ್ಕಾರದ ಯೋಜನೆಗಳನ್ನು ಮಾಡಲಾಗಿದೆ. 2017 ಕ್ಕಿಂತ ಮೊದಲು ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳ ವಂಶವಾಹಿಗಳಲ್ಲಿ ಭ್ರಷ್ಟಾಚಾರವಿದೆ ಎಂದು ಹೇಳಿದ್ದಾರೆ.
”ಪ್ರತಿಯೊಂದು ‘ಕಾಮ್’ (ಕೆಲಸ) ದ ‘ದಾಮ್’ (ಬೆಲೆ) ಈಗಾಗಲೇ ನಿಗದಿಯಾಗಿದೆ. ದಂಧೆ (ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು) ಜೀರುಂಡೆಯಂತೆ ವರ್ತಿಸುವ ಮೂಲಕ ಇಡೀ ವ್ಯವಸ್ಥೆಯನ್ನು ಟೊಳ್ಳು ಮಾಡಿತ್ತು. ಇದರ ಫಲಿತಾಂಶವು ಎಲ್ಲರಿಗೂ ತಿಳಿದಿತ್ತು ಮತ್ತು ಯುಪಿಯ ಜನರು ಇದಕ್ಕೆ ಬೆಲೆ ತೆರಬೇಕಾಯಿತು”ಎಂದು ಅವರು ಹಿಂದಿನ ಸರಕಾರಗಳನ್ನು ಉಲ್ಲೇಖಿಸಿ ಆರೋಪಿಸಿದರು.
ಇಂದು, ಯುಪಿಯವರು ಹೊರ ರಾಜ್ಯಗಳಿಗೆ ಹೋದಾಗ, ಅವರನ್ನು ಗೌರವದಿಂದ ಕಾಣಲಾಗುತ್ತದೆ. ಆದರೆ, ಐದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಹೊರಗೆ ಹೋಗಬೇಕಾದ ಯುವಕರು ಗುರುತಿನ ಮತ್ತು ವಿಶ್ವಾಸಾರ್ಹತೆಯ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಆ ಸಮಯದಲ್ಲಿ ರಾಜ್ಯದ ಜನರು ತಮ್ಮ ಗುರುತನ್ನು ಮರೆಮಾಚಬೇಕಾಗಿತ್ತು,” ಎಂದು ಆದಿತ್ಯನಾಥ್ ಹೇಳಿದರು.
”ಉತ್ತರ ಪ್ರದೇಶ ಸರ್ಕಾರವು ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಕೆಲಸ ಮಾಡಿ ದೇಶದಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ” ಎಂದು ಅವರು ಪ್ರತಿಪಾದಿಸಿದರು.
“ಜನರು ಯುಪಿ ಮಾದರಿಯನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಅಪರಾಧ ಮತ್ತು ಅಪರಾಧಿಗಳಿಗೆ ಜಾಗವಿಲ್ಲ. ಉತ್ತರ ಪ್ರದೇಶ ಈಗ ಗಲಭೆ ಮುಕ್ತ ರಾಜ್ಯವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ದೇಶದಲ್ಲಿ ಉದಾಹರಣೆ ಆಗುತ್ತಿದೆ ಮತ್ತು ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಹೂಡಿಕೆ ಮತ್ತು ಉದ್ಯೋಗದ ಸಾಧ್ಯತೆಗಳನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿದೆ ಎಂದರು.