Advertisement

ಹಳ್ಳ ಹಿಡಿದ ಅಮೆರಿಕ-ರಷ್ಯಾ ಸ್ನೇಹ

03:50 AM Apr 14, 2017 | Team Udayavani |

ವಾಷಿಂಗ್ಟನ್‌: ರಷ್ಯಾದೊಂದಿಗೆ ಅಮೆರಿಕ ಸಂಬಂಧ ತೀರ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು   ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದರ ಹೊರತಾಗಿಯೂ ರಾಷ್ಟ್ರಗಳು, ಒಂದಾಗಿ ಹೋದರೆ ಅದು ಅದ್ಭುತವೆನಿಸಬಲ್ಲದು ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. 

Advertisement

ನ್ಯಾಟೋ ರಾಷ್ಟ್ರಗಳು, ಅಮೆರಿಕದೊಂದಿಗೆ ರಷ್ಯಾವೂ ಸೇರಿಕೊಂಡರೆ ಅದ್ಭುತವೆನಿಸಬಲ್ಲದು. ಆದರೆ ಇದೀಗ ಆ ದೇಶದೊಂದಿಗೆ ನಮ್ಮ ಸಂಬಂಧ ಕನಿಷ್ಠ ಮಟ್ಟಕ್ಕಿಳಿದಿದೆ. ಪುಟಿನ್‌ ರಷ್ಯಾದ ನಾಯಕರು. ಅದೊಂದು ಪ್ರಬಲ ದೇಶ. ನಮ್ಮದೂ ಭಾರೀ ಭಾರೀ ಪ್ರಬಲ ರಾಷ್ಟ್ರ. ಆದರೆ ಎಲ್ಲ ಸಂಗತಿಗಳು ಹೇಗಾಗುತ್ತವೆ ಎಂಬುದನ್ನು ಕಾದು ನೋಡಬೇಕು ಎಂದು ಟ್ರಂಪ್‌ ಹೇಳಿದ್ದಾರೆ. ನ್ಯಾಟೋ ಮುಖ್ಯ ಕಾರ್ಯದರ್ಶಿ ಜ.ಜೇನ್ಸ್‌ ಸ್ಟಾಲ್ಟೆನ್‌ಬರ್ಗ್‌ ರೊಂದಿಗಿನ ಸಭೆ ಬಳಿಕ ಅವರು ಮಾತನಾಡಿದರು.

ಚೀನಾ ಓಲೈಕೆ: ಅಣು ದಾಳಿ ನಡೆಸುವ ಬೆದರಿಕೆಯೊಂದಿಗೆ ಉತ್ತರ ಏಷ್ಯಾದಲ್ಲಿ ತೀವ್ರ ಆತಂಕ ಸೃಷ್ಟಿಸುತ್ತಿರುವ ಉ.ಕೊರಿಧಿಯಾವನ್ನು ಮಟ್ಟ ಹಾಕಲು ಅಮೆರಿಕ ಚೀನಾ ಓಲೈಕೆಗೆ ಇಳಿದಿದೆ. ಇದಕ್ಕಾಗಿ ಚೀನಾದೊಂದಿಗೆ ವ್ಯಾಪಾರ ವೃದ್ಧಿಗೆ ಮುಂದಾಗಿದೆ. ಉ.ಕೊರಿಯಾ ಬೆದರಿಕೆಧಿಯನ್ನು ಮಟ್ಟಹಾಕಲು ಚೀನಾ ನೆರವು ನೀಡಿದ್ದೇ ಆದಲ್ಲಿ ಚೀನಾವನ್ನು ನಾವು ಕರೆನ್ಸಿ ಬುಡಮೇಲು ಮಾಡುವ ದೇಶವೆಂದು ಪರಿಗಣಿಸದೇ ಉತ್ತಮ ವ್ಯಾಪಾರ ಸಂಬಂಧಕ್ಕೆ ಮುಂದಾಗುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next