Advertisement

ಭ್ರಷ್ಟಾಚಾರ ನಿವಾರಣೆ ನಮ್ಮ ಹೊಣೆ

11:29 AM Jan 05, 2018 | |

ಯಲಹಂಕ: ಭ್ರಷ್ಟಾಚಾರ, ಅನೈತಿಕತೆ, ತಾಂಡವವಾಡುತ್ತಿದೆ ಎಂದು ಎಲ್ಲರೂ ಆರೋಪಿಸುತ್ತಾರೆ. ಆದರೆ ಈ ಸ್ಥಿತಿಗೆ ನಾವೇ ಕಾರಣರಾಗಿದ್ದು, ಪರಿಸ್ಥಿತಿ ಸುಧಾರಿಸುವ ಹೊಣೆಗಾರಿಕೆಯನ್ನು ಕೂಡ ನಾವೇ ಹೊರಬೇಕು ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.

Advertisement

ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ಕಟ್ಟುವ ಕೆಲಸ ಇಂದಿನ ತುರ್ತು ಅಗತ್ಯವಾಗಿದೆ. ಇದರೊಂದಿಗೆ ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಸಂಘಟನೆಯ ಕಾರ್ಯಕರ್ತರು ಸಕ್ರಿಯರಾಗಿ ಕಾರ್ಯೋನ್ಮುಖರಾದಾಗ ಮಾತ್ರ ಸಂಘಟನೆ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದರು.

ಹಿರಿಯ ಪತ್ರಕರ್ತ ಹರಿಶ್ಚಂದ್ರ ಮಾತನಾಡಿ, ರಾಜಕೀಯ ಪಕ್ಷಗಳು ತಿದ್ದಲು ಸಾದ್ಯವಾಗದಂತಹ ಭ್ರಷ್ಟ ವ್ಯವಸ್ಥೆಯನ್ನು ಲೇಖನಿಯಿಂದ ತಿದ್ದುವ ಕೆಲಸವಾಗಬೇಕು. ಇತ್ತೀಚೆಗೆ  ಮಾಧ್ಯಮಗಳು ಸಂವೇದನೆ ಬದಲಿಗೆ ಸಂಪಾದನೆಯ ಉದ್ದಿಮೆಗಳಾಗಿದ್ದು, ಮನುಷ್ಯನ ಮನೋಧರ್ಮದ ಮೇಲೂ ಗಂಭೀರ ಪರಿಣಾಮ ಬೀರಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಸಂಘಟನೆ ಉಪಾಧ್ಯಕ್ಷ ಎಂ.ಡಿ.ಪುಟ್ಟೇಗೌಡ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ  ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next