ಬಾಲಿ(ಇಂಡೋನೇಷ್ಯಾ): ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಕದನ ವಿರಾಮ ಮತ್ತು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಮತ್ತೊಂದೆಡೆ ರಷ್ಯಾದ ಇಂಧನ ಮತ್ತು ಅನಿಲ ಖರೀದಿಸಲು ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧವನ್ನು ವಿರೋಧಿಸುವುದಾಗಿ ಹೇಳಿದರು.
ಇದನ್ನೂ ಓದಿ:
ಸಿಗರೆಟ್‌ಗಾಗಿ ಜಗಳ: ಎದೆನೋವಿನಿಂದ ಯುವಕ ಸಾವು
ಪ್ರಧಾನಿ ಮೋದಿ ಅವರು ಮಂಗಳವಾರ(ನವೆಂಬರ್ 15) ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹವಾಮಾನ ಬದಲಾವಣೆ, ಕೋವಿಡ್ 19 ಸೋಂಕು ಮತ್ತು ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಭಾರೀ ಪ್ರಮಾಣದ ಪರಿಣಾಮ ಎದುರಿಸಲು ಕಾರಣವಾಗಿದೆ ಎಂದರು.
ಜಿ20 ಶೃಂಗದಲ್ಲಿ ಪ್ರಧಾನಿ ಮೋದಿ ಜಾಗತಿಕ ಬೆಳವಣಿಗೆ, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ , ಡಿಜಿಟಲ್ ರೂಪಾಂತರವನ್ನು ಪುನರುಜ್ಜೀವನಗೊಳಿಸುವಂತಹ ಜಾಗತಿಕ ಕಾಳಜಿಯ ಪ್ರಮುಖ ವಿಷಯಗಳ ಕುರಿತು ಜಿ20 ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಎರಡು ದಿನಗಳ ಜಿ ಶೃಂಗಸಭೆಯಲ್ಲಿ 20 ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ. ಪವಿತ್ರವಾದ ಬುದ್ಧ ಮತ್ತು ಗಾಂಧಿಯ ನಾಡಿನಲ್ಲಿ ಜಿ20 ನಾಯಕರು ಒಟ್ಟಾಗಿ ಸಭೆ ಸೇರುವ ಮೂಲಕ ಜಾಗತಿಕವಾಗಿ ಶಾಂತಿ ಸಂದೇಶವನ್ನು ಸಾರಲು ನೆರವಾಗಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಪ್ರಧಾನಿ ಮೋದಿ ಹೇಳಿದರು.