Advertisement

ಬದುಕು ಗೆದ್ದ ಅವಳಿಂದ ಉಳಿದವರಿಗೂ ತಾಳ್ಮೆಯ ಪಾಠ

10:31 AM Apr 23, 2020 | sudhir |

ಮಣಿಪಾಲ: ಕೋವಿಡ್‌ 19ರಿಂದ 9 ದಿನಗಳ ಕಾಲ ಕೋಮಾದಲ್ಲಿದ್ದು,  ವೆಂಟಿಲೇಟರ್‌ನ ಸಹಾಯದಲ್ಲಿ ದಿನಗಳನ್ನು ಕಳೆದವರ ಕತೆ ಇದು.
ಅಮೆರಿಕದ ವಿಸ್‌ಕೋನ್ಸಿನ್‌ನ ಈ ಪ್ರಜೆಗೆ ಈಗ ಪ್ರಜ್ಞೆ ಬಂದಿದೆ. ಆದರೆ ಇನ್ನೂ 9 ದಿನಗಳನ್ನು ಐಸಿಯುನಲ್ಲಿ ಕಳೆಯಬೇಕಿದೆ ಎಂದು ವೈದ್ಯರು ಹೇಳಿದ್ದಾರೆ. ಕೋಮಾದಿಂದ ಬಂದ ಬಳಿಕ ಹೊಸ ಜೀವನ ಅವರದ್ದು. ನಡೆಯಲು ಬಿಡಿ, ಎದ್ದು ನಿಲ್ಲಲು ಶಕ್ತಿ ಇಲ್ಲ. ದಾದಿಯರ ನೆರವಿಲ್ಲದೇ ಏನೂ ಮಾಡುವುದು ಕಷ್ಟ. ಲೇಹ್‌ ಬ್ಲೋಮರ್ಗ್‌ ಎಂಬವರು ಕೋವಿಡ್ ವೈರಸ್‌ ಸೋಂಕಿಗೆ ಒಳಗಾದ ಕತೆಯಿದು.

Advertisement

ಎರಡು ವಾರಗಳ ವರೆಗೆ ಹಾಸಿಗೆ ಬಿಟ್ಟು ಎದ್ದೇಳಲೇ ಇಲ್ಲ. ಸ್ನಾಯುಗಳು ತನ್ನ ಬಲವನ್ನು ಕಳೆದುಕೊಂಡ ಪರಿಣಾಮ ಮತ್ತೆ ನಡೆಯಲು ಕಲಿಯಬೇಕಾಗಿ ಬಂದಿದೆ ಎಂದು ಸ್ವತಃ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ನಾನು ಬಹುತೇಕ ಮೃತಳಾದಂತೆ ಇದ್ದೆ. ಈಗ ಸುಧಾರಿಸಿಕೊಳ್ಳುತ್ತಿದ್ದೇನೆ ಎಂಬುದನ್ನು ದಾದಿಯರಿಂದ ಕೇಳಿ ತಿಳಿದುಕೊಂಡೆ. ಇನ್ನೂ 9 ವಾರಗಳ ಕಾಲ ಐಸಿಯುನಲ್ಲೇ ಇರಬೇಕು. ಮತ್ತೆ ಬದುಕಿ ಉಳಿಯುವಂತಾದ ನಾನೇ ನಿಜಕ್ಕೂ ಅದೃಷ್ಟವಂತೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನೀವು ಮನೆಯಲ್ಲೇ ಇರಿ
ಸಾವು ಬದುಕಿನ ಹೋರಾಟದಲ್ಲಿ ಜಯಗಳಿಸಿದ ಲೇಹ್‌ ಬ್ಲೋಮರ್ಗ್‌ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ನಿಮ್ಮ ಮನೆಯಲ್ಲಿಯೇ ಇರಿ. ಸರಕಾರಗಳು ನಿಮ್ಮಿಂದ ಅಪೇಕ್ಷೆ ಪಡುವ ಸಂಗತಿಗಳನ್ನು ಮಾತ್ರವೇ ಮಾಡಿ. ಸರಕಾರಕ್ಕೆ ಬೆಂಬಲ ನೀಡಿ. ಅದಕ್ಕಿಂತ ಹೆಚ್ಚಾಗಿ ಅವರ ಆರೋಗ್ಯವನ್ನು ಮರೆತು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸರಕಾರ ಮತ್ತು ವೈದ್ಯಕೀಯ ಕ್ಷೇತ್ರವನ್ನು ಅಭಿನಂದಿಸಿ ಎಂದು ಹೇಳಿದ್ದಾರೆ.

ಜನರಿಗೆ ಸಂದೇಶ
ರಾಜ್ಯದಲ್ಲಿ ಲಾಕ್‌ಡೌನ್‌ ಅನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಗವರ್ನರ್‌ಗಳ ನಿವಾಸದ ಮುಂಭಾಗ ಬಂದು ಪ್ರತಿಭಟಿಸುತ್ತಿದ್ದಾರೆ. ನೂರಾರು ಪ್ರತಿಭಟನಾಕಾರರು ಗಮರ್ನರ್‌ ಮನೆಯ ಮುಂಭಾಗವೇ ವಾಸ್ತವ್ಯ ಹೂಡಿದ್ದು, ಲಾಕ್‌ಡೌನ್‌ ಆದೇಶಗಳನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಇವರಿಗೆ ಲೇಹ್‌ ಬ್ಲೋಮರ್ಗ್‌ ತಾಳ್ಮೆಯ ಪಾಠ ಮಾಡಿದ್ದಾರೆ. ನೀವು ಹೀಗೆಲ್ಲಾ ಮಾಡುವುದು ಸರಿಯಲ್ಲ. ಸರಕಾರ ನಿಮ್ಮ ಪರವಾಗಿ ಕೆಲಸ ಮಾಡುತ್ತಿದೆ. ಸರಕಾರಕ್ಕೆ ನೀವು ಸಲಹೆ ನೀಡಬೇಕು ಎಂದಿದ್ದಾರೆ. ಪ್ರತಿಭಟನಾಕಾರರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಲಾಕ್‌ಡೌನ್‌ ಆದ ಪರಿಣಾಮ ಆರ್ಥಿಕ ವ್ಯವಹಾರ ಸಂಪೂರ್ಣ ಸ್ಥಗಿತವಾಗಿದೆ. ಇವರ ಮೇಲೆ ನನಗೆ ಅನುಕಂಪ ಇದೆ. ಎಲ್ಲವೂ ಸ್ವಲ್ಪ ಸಮಯದ ಬಳಿಕ ಸರಿಯಾಗಲಿದೆ ಎಂದು ಬ್ಲಾಮºರ್ಗ್‌ ಹೇಳಿದರು. ಕೋವಿಡ್‌-19 ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿಲ್ಲದ ಕಾರಣ ಲಾಕ್‌ಡೌನ್‌ ಹಿಂಪಡೆಯಲಾಗಿಲ್ಲ ಎನ್ನುವ ಸರಕಾರದ ಮಾತುಗಳಿಗೆ ಅವರು ಧ್ವನಿಗೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next