ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ ಚಿಂಚ್ ವಾಡ್ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ 5 ತಂಡಗಳ ರಚಿಸಲಾಗಿದೆ ಎಂದು ಪುಣೆ ವಿಭಾಗಿಯ ಆಯುಕ್ತ ದೀಪಕ್ ಮೈಶೇಕರ್ ತಿಳಿಸಿದ್ದಾರೆ. ಮಾತ್ರವಲ್ಲದೆ ಪುಣೆ ದಂಪತಿಯೊಂದಿಗೆ ಆಗಮಿಸಿದ್ದ 40 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 40 ಜನರ ವೈದ್ಯಕೀಯ ಪರೀಕ್ಷೆಯ ಮಾಹಿತಿ ನೀಡುವಂತೆ ಮಹಾರಾಷ್ಟ್ರದ ಆಯಾ ಜಿಲ್ಲೆಗೆ ಮಾಹಿತಿ ರವಾನಿಸಲಾಗಿದೆ. ಅದರ ಜೊತೆಗೆ ಈ 40 ಜನರು ಗುರುತು ಮತ್ತು ಕೆಲಸದ ಸ್ಥಳದ ಗೌಪ್ಯತೆ ಕಾಪಾಡುವಂತೆ ಸೂಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ದುಬೈನಿಂದ ಆಗಮಿಸಿದ್ದ ಪುಣೆಯ ದಂಪತಿ ಓಲಾ ಕ್ಯಾಬ್ ಒಂದರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದು ಇದೀಗ ಓಲಾ ಕ್ಯಾಬ್ ಡ್ರೈವರ್ ಮತ್ತು ಅವರ ಸಂಬಂಧಿಕರೊಬ್ಬರಿಗೂ ಕೂಡ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಅದೇ ದಿನ ಆ ಕ್ಯಾಬ್ ನಲ್ಲಿ ಹಲವಾರು ಜನರು ಪ್ರಯಾಣಿಸಿದ್ದು ಅವರನ್ನು ಪತ್ತೆ ಹಚ್ಚುವ ಕೆಲಸಗಳಾಗುತ್ತಿದೆ ಎಂದು ದೀಪಕ್ ಮೈಶೇಕರ್ ಮಾಹಿತಿ ನೀಡಿದ್ದಾರೆ.
ಪುಣೆಯ ದಂಪತಿ ಸೇರಿದಂತೆ ಐವರನ್ನು ನಾಯ್ಡು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ಪರಿಸ್ಥಿತಿ ಸುಸ್ಥಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement