Advertisement

ಮಹಾರಾಷ್ಟ್ರದ ನಂದುರ್ಬಾರ್ ಗೆ 94 ಕೋವಿಡ್ ಕೇರ್ ಬೋಗಿಗಳನ್ನು ನೀಡಿದ ಕೇಂದ್ರ ರೈಲ್ವೆ!

09:43 PM Apr 18, 2021 | Girisha |

ನವದೆಹಲಿ : ದೇಶಾದ್ಯಂತ ಕೋವಿಡ್ ಎರಡನೇ ಅಲೆ ಜನರನ್ನು ತಲ್ಲಣಗೊಳಿಸುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಸರ್ಕಾರ ಕೂಡ ಹೋರಾಟ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಇಲಾಖೆಯು ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ 94 ಕೋವಿಡ್ ಕೇರ್ ಕೋಚ್ ಗಳನ್ನು ನೀಡಿದೆ. ದೇಶದಲ್ಲಿ ಈಗಾಗಲೇ 4000 ಕೋವಿಡ್ ಕೇರ್ ಬೋಗಿಗಳು ಕಾರ್ಯ ನಿರ್ವಹಿಸುತ್ತಿವೆ.

Advertisement

ಈಗಾಗಲೇ  ನಂದುರ್ಬಾರ್ ಜಿಲ್ಲೆಯಿಂದ ಈ ಕೋವಿಡ್ ಕೇರ್ ಕೋಚ್ ಗಳಿಗೆ ಆರು ಮಂದಿ ದಾಖಲಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಇಲ್ಲಿಯ ವರೆಗೆ ಮೊದಲ ಬಾರಿಗೆ ಕೋವಿಡ್ ಕೇರ್ ಕೋಚ್ ಗಳ ರೈಲುಗಳನ್ನು ಕೊಡಿ ಎಂದು ಮಹಾರಾಷ್ಟ್ರ ಸರ್ಕಾರ ಮಾತ್ರ ಕೇಳಿದೆಯಂತೆ. ಈ ಕಾರಣದಿಂದ ಕೇಂದ್ರ ರೈಲ್ವೆ ಇಲಾಖೆಯು 94 ಕೋವಿಡ್ ಕೇರ್ ಕೋಚ್ ಗಳನ್ನು ನೀಡಿದೆ.

ಸದ್ಯ ನೀಡಿರುವ ಕೋಚ್ ಗಳಲ್ಲಿ ಅತೀ ಕಡಿಮೆ ಪ್ರಮಾಣ ಸೋಂಕು ತಗುಲಿರುವ ವ್ಯಕ್ಯಿಗಳನ್ನು ಮಾತ್ರ ದಾಖಲಿಸಲಾಗುತ್ತೆ ಎಂದು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇನ್ನು ಕಳೆದ ವರ್ಷ ಕೂಡ ದೆಹಲಿ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಧ್ಯ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್ ಗಳಾಗಿ ರೈಲುಗಳ ಬೋಗಿಗಳನ್ನು ಬಳಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next