Advertisement

ಕೇನ್‌ ರಿಚರ್ಡ್‌ ಸನ್‌ಗೆ ಕೊರೊನಾ ಇಲ್ಲ; ನಿಗಾದಲ್ಲಿ ಲ್ಯೂಕಿ ಫರ್ಗುಸನ್

10:08 AM Mar 15, 2020 | keerthan |

ಮೆಲ್ಬೋರ್ನ್: ಆಸ್ಟ್ರೇಲಿಯದ ಪೇಸ್‌ ಬೌಲರ್‌ ಕೇನ್‌ ರಿಚರ್ಡ್‌ಸನ್‌ ಕೊರೊನಾ ಭೀತಿಯಿಂದ ಪಾರಾಗಿದ್ದಾರೆ. ನ್ಯೂಜಿಲೆಂಡ್‌ ಎದುರಿನ ಶುಕ್ರವಾರದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು.

Advertisement

ಕೊರೊನಾ ಅಂಟಿಕೊಂಡಿರುವ ಸಾಧ್ಯತೆ ಬಗ್ಗೆಯೂ ಸುದ್ದಿ ಹಬ್ಬಿತ್ತು. ಆದರೆ ಅಂಥ ಯಾವುದೇ ಭೀತಿ ಇಲ್ಲ ಎಂದು ವರದಿಯಾಗಿದೆ. ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ವರದಿ ಬಂದ ಹಿನ್ನೆಲೆಯಲ್ಲಿ ಕೇನ್‌ ರಿಚರ್ಡ್‌ಸನ್‌ ರಾತ್ರಿ 8 ಗಂಟೆ ವೇಳೆ ಸಿಡ್ನಿ ಕ್ರಿಕೆಟ್‌ ಅಂಗಳದತ್ತ ತೆರಳಿದರು. ಐಪಿಎಲ್‌ನಲ್ಲಿ ರಿಚರ್ಡ್‌ಸನ್‌ ಆರ್‌ಸಿಬಿ ತಂಡದ ಸದಸ್ಯನಾಗಿದ್ದಾರೆ.

ಮತ್ತೊಂದೆಡೆ ಕಿವೀಸ್ ಆಲ್ ರೌಂಡರ್ ಲ್ಯೂಕಿ ಫರ್ಗುಸನ್ ಕೂಡಾ ಗಂಟಲು ನೋವಿನಿಂದ ಬಳಲುತ್ತಿದ್ದು, ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದೆ. ಫರ್ಗುಸನ್ ಅವರನ್ನು 24 ಗಂಟೆಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕತ್ಸೆ ನೀಡಲಾಗುತ್ತಿದೆ. ಲ್ಯೂಕಿ ಫರ್ಗುಸನ್ ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next