Advertisement

ಕೊರೊನಾ ವೈರಸ್: ಚೀನಾದಲ್ಲಿ ಬಲಿಯಾದವರ ಸಂಖ್ಯೆ 2,236ಕ್ಕೆ ಏರಿಕೆ

10:25 PM Mar 20, 2020 | Mithun PG |

ಚೀನಾ: ವುಹಾನ್ ಹುಬೈನಲ್ಲಿ ಕೊರೊನಾ ವೈರಸ್ ಗೆ ಮತ್ತೆ 115 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 2,236ಕ್ಕೆ ತಲುಪಿದೆ. ಚೀನಾದಲ್ಲಿ  75,000 ಜನರು ಈ ಸೋಂಕುವಿಗೆ ತುತ್ತಾಗಿದ್ದು , ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

Advertisement

ಹುಬೈನ ಆರೋಗ್ಯ ಆಯೋಗ ಮತ್ತೆ 411 ಜನರಿಗೆ ಸೋಂಕು ತಗುಲಿರುವ ಮಾಹಿತಿಯನ್ನು ಖಚಿತಪಡಿಸಿದೆ. ಇತರೆ ದಿನಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ,ಹಾಗೂ ಸೋಂಕು ಪೀಡಿತರ ಪ್ರಮಾಣ ಕಡಿಮೆಯಾಗಿದ್ದು ವೈರಸ್ ನಿಯಂತ್ರಣಕ್ಕೆ ಬರುವ ಸೂಚನೆ ಸಿಕ್ಕಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಮಾತ್ರವಲ್ಲದೆ ವೈರಸ್ ನಿಂದ ಬಳಲುತ್ತಿರುವ ಸಂಖ್ಯೆಯನ್ನು ಸಮರ್ಪಕವಾಗಿ ಆಳೆಯಲು ಈ ಮೊದಲಿನ ವಿಧಾನವನ್ನು ಬಳಸದೆ ಪ್ರಯೋಗಾಲಯ ಪರೀಕ್ಷೆಯಿಂದ ಸೋಂಕು ತಗುಲಿದೆ ಎಂದು ಖಚಿತಗೊಂಡ ಮಾಹಿತಿಯನ್ನು ಮಾತ್ರ ಆರೋಗ್ಯಧಿಕಾರಿಗಳು ನೀಡುತ್ತಿದ್ದಾರೆ.

ಹಾಗಾಗಿ ವೈರಸ್ ನ ಕುರಿತು ನಿಖರ ಮಾಹಿತಿಗಳು ತಲುಪುತ್ತಿವೆ ಎಂದು ಚೀನಾ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next