Advertisement

ಕೊರೊನಾ ಸೋಂಕು: 31 ಮಂದಿ ವರದಿ ನೆಗೆಟಿವ್‌

11:32 PM Mar 08, 2020 | Lakshmi GovindaRaj |

ಬೆಂಗಳೂರು: ಇತ್ತೀಚೆಗೆ ಕೊರೊನಾ ಸೋಂಕು ಪರೀಕ್ಷೆಗೊಳಗಾಗಿದ್ದ 31 ಮಂದಿಯ ವರದಿ ನೆಗೆಟಿವ್‌ ಬಂದಿದ್ದು, ಭಾನುವಾರ ಮತ್ತೆ 16 ಮಂದಿ ಶಂಕಿತರಿಂದ ಸೋಂಕು ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಗಿದೆ. ಆರಂಭದಿಂದ ಮನೆಯಲ್ಲಿಯೇ ನಿಗಾವಹಿಸಿದ್ದ 890 ಮಂದಿ ಶಂಕಿತರ ಪೈಕಿ 258 ಮಂದಿ 28 ದಿನಗಳ ಅವಲೋಕನಾ ಅವಧಿಯನ್ನು ಮುಗಿಸಿದ್ದು, ಸೋಂಕು ಭೀತಿಯಿಂದ ಹೊರಬಂದಿದ್ದಾರೆ.

Advertisement

ಒಟ್ಟಾರೆ ಜ.21 ರಿಂದ ಮಾರ್ಚ್‌ 8 ರವರೆಗೂ 416 ಮಂದಿಯನ್ನು ಶಂಕಿತರು ಎಂದು ಗುರುತಿಸಿ ಸೋಂಕು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 357 ಮಂದಿ ವರದಿಗಳು ನೆಗೆಟಿವ್‌ ಬಂದಿವೆ. ಬಾಕಿ 59 ಮಂದಿ ಶಂಕಿತರ ವರದಿಗಳು ಬರಬೇಕಿದೆ. ಇನ್ನು ಬೆಂಗಳೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಹಾಸನ, ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬ ಕೊರೊನಾ ಶಂಕಿತರನ್ನು ಆಸ್ಪತ್ರೆಯ ಒಳರೋಗಿಗಳಾಗಿ ದಾಖಲಿಸಿಕೊಂಡು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3,725 ಮಂದಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ 616 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಜತೆಗೆ ಮಂಗಳೂರು, ಕಾರವಾರ ಬಂದರಿನಲ್ಲಿ ತಪಾಸಣೆ ಮುಂದುವರಿದಿದೆ. ಶನಿವಾರ ಒಟ್ಟು 104 ಮಂದಿ ಮನೆಯಲ್ಲಿ ನಿಗಾಕ್ಕೆ ನೋಂದಣಿಯಾಗಿದ್ದಾರೆ. ಈ ಮೂಲಕ ರಾಜ್ಯಾದಂತ ಒಟ್ಟು 622 ಮಂದಿ ಮನೆಯಲ್ಲಿಯೇ ನಿಗಾದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next