Advertisement

ಕೋವಿಡ್ ಸಾವಿನ ಸಂಖ್ಯೆ ; ಇಟಲಿಯನ್ನೇ ಮೀರಿಸಿದ ಭಾರತ!

09:07 AM Aug 01, 2020 | mahesh |

ಹೊಸದಿಲ್ಲಿ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಈಗ ಭಾರತವು ಇಟಲಿಯನ್ನೇ ಮೀರಿಸಿದೆ. ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 36 ಸಾವಿರ ದಾಟಿದೆ. ಹೀಗಾಗಿ, ಜಗತ್ತಿನಲ್ಲೇ ಅತಿ ಹೆಚ್ಚು ಸಾವನ್ನು ಕಂಡಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೆ ತಲುಪಿದೆ. ಇಟಲಿಯಲ್ಲಿ ಕೋವಿಡ್ ಗೆ ಈವರೆಗೆ 35,132 ಮಂದಿ ಬಲಿಯಾಗಿದ್ದಾರೆ. 1.52 ಲಕ್ಷ ಸಾವನ್ನು ಕಂಡಿರುವ ಅಮೆರಿಕವು ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್‌, ಯು.ಕೆ. ಮತ್ತು ಮೆಕ್ಸಿಕೋ ಕ್ರಮವಾಗಿ ಅನಂತರದ ಸ್ಥಾನಗಳಲ್ಲಿವೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿವಿ ಹೇಳಿದೆ. ಆದರೆ, ಭಾರತದ ಮರಣ ಪ್ರಮಾಣವು ಇನ್ನೂ ಶೇ.2.21ರಷ್ಟಿದ್ದು, ಇತರೆ ಅನೇಕ ದೇಶಗಳಿಗೆ ಹೋಲಿಸಿದರೆ ಇದು ಕನಿಷ್ಠ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Advertisement

24 ಗಂಟೆಗಳಲ್ಲಿ ಸೋಂಕಿನ ದಾಖಲೆ: ಒಂದೇ ದಿನ ದೇಶದಲ್ಲಿ ದಾಖಲೆಯ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಗಳ ಅವಧಿಯಲ್ಲಿ 55,078 ಮಂದಿಗೆ ಸೋಂಕು ದೃಢಪಟ್ಟಿದ್ದು, 779 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ 15 ಲಕ್ಷ ದಾಟಿದ ಎರಡೇ ದಿನಗಳಲ್ಲಿ 16 ಲಕ್ಷಕ್ಕೇರಿದೆ. ಗುಣಮುಖ ಪ್ರಮಾಣವೂ ಶೇ.64.54ಕ್ಕೆ ತಲುಪಿದ್ದು, 10.57 ಲಕ್ಷಕ್ಕೂ ಅಧಿಕ ಮಂದಿ ವಾಸಿಯಾಗಿ ಮನೆಗೆ ಮರಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next