Advertisement

ಮಾರಕ ಕೊರೋನಾ ವೈರಸ್’ಗೆ ಚೀನಾ ತಲ್ಲಣ: ಸಾವಿನ ಸಂಖ್ಯೆ 170ಕ್ಕೆ ಏರಿಕೆ, 1370 ಜನರು ಗಂಭೀರ

07:13 PM Mar 20, 2020 | Mithun PG |

ವುಹಾನ್: ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್ ಗೆ ಬಲಿಯಾದವರ ಸಂಖ್ಯೆ 170ಕ್ಕೆ ಏರಿದೆ. ಪ್ರತಿನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಚೀನಾದಾದ್ಯಂತ ಜನರು ಕಂಗಾಲಾಗಿದ್ದು 7700 ಮಂದಿಗೆ ಸೋಂಕು ತಗುಲಿರುವ ಅಧಿಕೃತ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೋಂಕು ತಗುಲಿರುವ 1370 ಜನರ ಸ್ಥಿತಿ ಚಿಂತಾಜನಕವಾಗಿದೆ.  ಆಘಾತಕಾರಿ ವಿಷಯವೆಂದರೇ 12,167 ಜನರಿಗೆ ವೈರಾಣು ತಗುಲಿರುವ ಶಂಕೆ ವ್ಯಕ್ತಪಡಿಸಲಾಗಿದ್ದು  ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿ ದಿನೇ ದಿನೇ ಬಿಗಾಡಿಯಿಸುತ್ತಿದ್ದು ಜನರು ಭಯಭೀತರಾಗಿರುವುದು ಮಾತ್ರವಲ್ಲದೆ ಸಾವಿನ ಸಂಖ್ಯೆಯೂ ಏರುತ್ತಿದೆ.

ಬೀಜಿಂಗ್ ಮತ್ತು ಶಾಂಘೈನಲ್ಲಿ 100ಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿರುವ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ. ಕೊರೋನಾ ವೈರಸ್ ಮೊದಲು ಕಂಡುಬಂದ ವುಹಾನ್ ಮತ್ತು ಹುಬೈ ಪ್ರಾಂತ್ಯದಲ್ಲೇ 160 ಜನರು ಮೃತರಾಗಿದ್ದು ಚೀನಾದಾದ್ಯಂತ ಆತಂಕ ಮನೆಮಾಡಿದೆ. ಮಾತ್ರವಲ್ಲದೆ ಸೋಂಕು ಪ್ರತಿನಿತ್ಯ ಹರಡುತ್ತಿದ್ದು ಜಗತ್ತಿನಾದ್ಯಂತ 16 ರಾಷ್ಟ್ರದ ಜನರಿಗೆ ಈ ವೈರಾಣು ತಗುಲಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next