Advertisement

ಭಾರತದಲ್ಲಿ 10 ಲಕ್ಷ ಮೀರಿದ ಕೋವಿಡ್ 19 ಪ್ರಕರಣ, 6.35 ಲಕ್ಷ ಜನರು ಗುಣಮುಖ: ಕೇಂದ್ರ

10:14 AM Jul 17, 2020 | Nagendra Trasi |

ನವದೆಹಲಿ:ಕೋವಿಡ್ 19 ಮಹಾಮಾರಿ ದೇಶಾದ್ಯಂತ ಕ್ಷಿಪ್ರವಾಗಿ ಹರಡತೊಡಗಿದ್ದು,ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹತ್ತು ಲಕ್ಷ ದಾಟಿದೆ. ಕಳೆದ 24ಗಂಟೆಯಲ್ಲಿ ದಾಖಲೆ ಎಂಬಂತೆ 34,956 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 687 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

Advertisement

ಸರ್ಕಾರದ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ದಿನದಿಂದ ಹಿಡಿದು ಈವರೆಗೆ ಒಟ್ಟು 1,003,832 ಪ್ರಕರಣಗಳು ವರದಿಯಾಗಿದ್ದು, 25,602 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ 6.35 ಲಕ್ಷ ಜನರು ಗುಣಮುಖರಾಗಿರುವುದಾಗಿ ವರದಿ ವಿವರಿಸಿದೆ.

ಕೋವಿಡ್ 19 ವೈರಸ್ ಮಿತಿಮೀರಿ ಹರಡುತ್ತಿರುವುದರಿಂದ ದೇಶದ ವಿವಿಧ ಭಾಗಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ವೈರಸ್ ಹರಡುವಿಕೆ ತಡೆಗಟ್ಟಲು ಸಾಧ್ಯವಾಗಬಹುದು ಎಂಬ ನಿರೀಕ್ಷೆ ಅಧಿಕಾರಿಗಳಾದ್ದಾಗಿದೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ತಮಿಳುನಾಡು, ದೆಹಲಿ, ಕರ್ನಾಟಕ, ಗುಜರಾತ್, ಉತ್ತರಪ್ರದೇಶ ಮತ್ತು ತೆಲಂಗಾಣ ನಂತರದ ಸ್ಥಾನಗಳಲ್ಲಿ ಇದೆ. ಜಗತ್ತಿನಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾದ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ, ಅಮೆರಿಕದಲ್ಲಿ 36.41 ಲಕ್ಷ ಪ್ರಕರಣ ಹಾಗೂ ಬ್ರೆಜಿಲ್ ನಲ್ಲಿ 19.72 ಲಕ್ಷ ಪ್ರಕರಣ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next