Advertisement

ಒಂದೇ ದಿನದಲ್ಲಿ ಭಾರೀ ಏರಿಕೆ: ಭಾರತದಲ್ಲಿ 90 ಸಾವಿರ ದಾಟಿದ ಕೋವಿಡ್ 19 ಪ್ರಕರಣ

08:38 AM May 18, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿದ್ದು ನಿನ್ನೆ ಒಂದೇ ದಿನದಲ್ಲಿ 4,987 ಪ್ರಕರಣ ದಾಖಲಾಗುವ ಮೂಲಕ ಭಾರತದಲ್ಲಿ ಕೋವಿಡ್ 19 ವೈರಸ್ ತಗುಲಿದವರ ಸಂಖ್ಯೆ 90,000 ದಾಟಿರುವುದಾಗಿ ವರದಿ ತಿಳಿಸಿದೆ. ಈವರೆಗೆ ಭಾರತದಲ್ಲಿ 2,872 ಮಂದಿ ಸಾವನ್ನಪ್ಪಿದ್ದು, 90,927 ಕೋವಿಡ್ 19 ಪ್ರಕರಣ ವರದಿಯಾಗಿದೆ.

Advertisement

ಕಳೆದ 24ಗಂಟೆಯಲ್ಲಿ 120 ಮಂದಿ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ್ದಾರೆ. 34 ಸಾವಿರಕ್ಕೂ ಅಧಿಕ ಜನರು ಗುಣಮುಖರಾಗಿದ್ದು, ಶೇ.37.51ರಷ್ಟು ಜನ ಚೇತರಿಕೆ ಕಂಡಂತಾಗಿದೆ.

ಮಹಾರಾಷ್ಟ್ರ, ದಿಲ್ಲಿ, ತಮಿಳುನಾಡು ಹಾಗೂ ಗುಜರಾತ್ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣ ದಾಖಲಾಗಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಅತೀ ಹೆಚ್ಚು ಪ್ರಕರಣ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next