Advertisement

Corona: ಮತ್ತೆ ಮರುಕಳಿಸಲಿದೆ ಕೊರೊನಾ!

10:21 PM Sep 25, 2023 | Team Udayavani |

ಬೀಜಿಂಗ್‌: “ಬ್ಯಾಟ್‌ವುಮನ್‌” ಎಂದೇ ಖ್ಯಾತರಾದ ಚೀನಾದ ಪ್ರಸಿದ್ಧ ವೈರಾಲಜಿಸ್ಟ್‌ ಶೀ ಜೆಂಗ್ಲಿ ಅವರು ಕೊರೊನಾ ತರಹದ ಮತೊಂದು ಭೀಕರ ಸೋಂಕು ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಅಲ್ಲದೇ, ಏಕಾಏಕಿ ಅಪ್ಪಳಿಸುವ ಸೋಂಕು ನಿಗ್ರಹಿಸಲು ವಿಶ್ವ ಸಜ್ಜುಗೊಳ್ಳಬೇಕು ಎಂದಿದ್ದಾರೆ. ಶೀ ನೇತೃತ್ವದಲ್ಲಿ ವುಹಾನ್‌ನ ವೈರಾಲಜಿಸ್ಟ್‌ಗಳ ತಂಡವು ಕೊರೊನಾ ವೈರಸ್‌ನ 40 ವಿವಿಧ ಪ್ರಭೇದಗಳನ್ನು ಪತ್ತೆಹಚ್ಚಿದ್ದು, ಈ ವೈರಾಣುಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತವೆ ಎನ್ನಲಾಗಿದೆ. ಈ ಪೈಕಿ ಅರ್ಧದಷ್ಟು ವೈರಾಣುಗಳು ಅಪಾಯಕಾರಿ ಆಗಿದ್ದು, ಅದರಲ್ಲಿ ಈಗಾಗಲೇ 6 ವೈರಾಣುಗಳು ಮನುಷ್ಯರಿಗೆ ರೋಗ ಉಂಟು ಮಾಡಿವೆ. ಇನ್ನೂ 3 ವೈರಾಣುಗಳು ಪ್ರಾಣಿಗಳಿಂದ ಹರಡಿ ರೋಗ ತರಲಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next