Advertisement

ಆಂಧ್ರದ ಮೆಣಸಿನಕಾಯಿಯಿಂದ ಸಿಯೋಲ್ ನ ಕಾರಿನ ತನಕ.. ಕೊರೊನಾ ವೈರಸ್‌ ಎಫೆಕ್ಟ್

10:02 AM Feb 10, 2020 | keerthan |

ಹೊಸದಿಲ್ಲಿ: ಮಾರಣಾಂತಿಕ ಕೊರೊನಾ ವೈರಾಣುವನ್ನು ನಿಯಂತ್ರಣಕ್ಕೆ ತರದೇ ಇದ್ದರೆ ಚೀನ ಮಾತ್ರವಲ್ಲ, ಜಗತ್ತಿನ ಎಲ್ಲಾ ವ್ಯಾಪಾರ ಚಟುವಟಿಕೆಗಳು ಮುಖ್ಯವಾಗಿ ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಂಬಂಧಿತ ವಹಿವಾಟಿನ ಮೇಲೆ ಆಘಾತಕಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Advertisement

ಕೊರೊನಾ ವೈರಸ್‌ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವುದರರಿಂದ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.

ವಾಹನೋದ್ಯಮಕ್ಕೆ ಪೆಟ್ಟು
ಚೀನದಿಂದ ತಯಾರಾಗುವ ಯಂತ್ರಗಳ ಬಿಡಿಭಾಗಗಳು ದಕ್ಷಿಣ ಕೊರಿಯಾದ ಕಡಲ ತೀರ ತಲುಪಲು ಸಾಧ್ಯವಾಗದ ಕಾರಣ, ಸಿಯೋಲ್‌ ಮೂಲದ ಹ್ಯುಂಡೈ ಕಂಪನಿಯು ತನ್ನ ಹದಿಮೂರು ವಾಹನ ತಯಾರಿಕಾ ಘಟಕಗಳ ಪೈಕಿ ಏಳು ಘಟಕಗಳನ್ನು ಸ್ಥಗಿತಗೊಳಿಸಿದೆ.

ಆಮದು ಚಟುವಟಿಕೆಗಳ ಮೇಲೆ ನಿಷೇಧ
ಆಂಧ್ರ ಪ್ರದೇಶದಿಂದ ಮೆಣಸಿನಕಾಯಿ ಮತ್ತು ಮಹಾರಾಷ್ಟ್ರದಿಂದ ಹತ್ತಿಯಂತಹ ವಿವಿಧ ರಫ್ತು ಉತ್ಪನ್ನಗಳನ್ನು ಚೀನ ಆಮದಿಗೆ ನಿರಾಕರಿಸಿದ ಕಾರಣ ಸ್ಥಳೀಯ ರೈತರ ಮತ್ತು ಕೈಗಾರಿಕೆಗಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಚೀನ , ಮ್ಯಾನ್ಮಾರ್‌ ಮತ್ತು ಆಗ್ನೇಯ ಏಷ್ಯಾದ ದೇಶಗಳಿಂದ ಪ್ಯಾಕೇಜ್‌ ಮಾಡಲಾದ ಆಹಾರ ಪದಾರ್ಥಗಳ ಆಮದನ್ನು ಈಶಾನ್ಯ ರಾಜ್ಯ ಮಣಿಪುರ ನಿಷೇಧಿಸಿದೆ. ಈ ರಾಷ್ಟ್ರಗಳು ಎಫ್ ಎಸ್‌ ಎಸ್‌ ಎಐ ನಿಯಮಗಳು ಪಾಲಿಸದಿರುವುದೇ ನಿಷೇಧಕ್ಕೆ ಕಾರಣವೆಂದು ಸ್ಪಷ್ಟನೆ ನೀಡಿದೆ.

ಸಾರ್ಸ್‌ಗಿಂತ ಅಪಾಯಕಾರಿ
ಎಚ್‌ ಐಎಸ್‌ ಮಾರ್ಕೆಟ್‌ ವರದಿಯ ಪ್ರಕಾರ, 2003ರಲ್ಲಿನ ಸಾರ್ಸ್‌ (ತೀವ್ರ ಉಸಿರಾಟದ ಸಿಂಡ್ರೋಮ್) ವೈರಸ್‌ಗಿಂತ ಕೊರೊನಾ ಅಪಾಯಕಾರಿಯಾಗಿದೆ. ಇದು ಏಕಾಏಕಿ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಋಣಾತ್ಮಕ ಪರಿಣಾಮ ಬೀರುತ್ತಿದೆ. ಸಾರ್ಸ್‌ ಸೋಂಕು ಹಬ್ಬಿದ್ದ ಸಮಯದಲ್ಲಿ ಚೀನ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿತ್ತು. ಆಗ ವಿಶ್ವದ ಜಿಡಿಪಿಯಲ್ಲಿ ಕೇವಲ ಶೇ 4.2ರಷ್ಟು ಚೀನದ ಜಿಡಿಪಿ ಇತ್ತು. ಚೀನ ಈಗ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದ ಜಿಡಿಪಿಯ ಶೇ16.3ರಷ್ಟಿದೆ. ಆದ್ದರಿಂದ, ಚೀನದ ಆರ್ಥಿಕತೆಯ ಯಾವುದೇ ಕುಸಿತವು ಪ್ರಪಂಚದಾದ್ಯಂತ ಏರಿಳಿತದ ಅಲೆಗಳಿಗೆ ಕಾರಣವಾಗಲಿದೆ ಎಂದು ಎಚ್‌ಐಎಸ್‌ ವರದಿ ಹೇಳಿದೆ.

Advertisement

ತೈಲ ಮಾರುಕಟ್ಟೆಯೂ ಅತಂತ್ರ
ಏಷ್ಯಾದ ದೇಶಗಳಲ್ಲಿ ಹೆಚ್ಚುವರಿಯಾಗಿ ಪೆಸಿಫಿಕ್‌ ಪ್ರದೇಶ, ಮಧ್ಯಪ್ರಾಚ್ಯ ತೈಲಗಳ ಮೇಲೆ ಚೀನ ಹೆಚ್ಚು ಅವಲಂಬಿತವಾಗಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ. 2019ರಲ್ಲಿ ಚೀನದ ತೈಲ ಬೇಡಿಕೆ ನಿತ್ಯ 13.9 ಮಿಲಿಯನ್‌ ಬ್ಯಾರೆಲ್ ನಷ್ಟು ಇತ್ತು. ಇದು ಜಾಗತಿಕ ಮಾರುಕಟ್ಟೆಯ ಶೇ.14ರಷ್ಟು ಬೇಡಿಕೆಯಾಗಿದೆ. 2003ರಲ್ಲಿ ನಿತ್ಯ 5.6 ಮಿಲಿಯನ್‌ ಬ್ಯಾರೆಲ್ ನಷ್ಟು ಅಂದರೇ ಶೇ 7ರಷ್ಟಿತ್ತು. ಹೀಗಾಗಿ, ಚೀನಾದ ಪ್ರತಿಯೊಂದು ಆರ್ಥಿಕ ವಿದ್ಯಮಾನ ವಿಶ್ವದ ಯಾವುದೇ ರಾಷ್ಟ್ರದ ಮೇಲೋ ಒಂದಿಲ್ಲೊಂದು ರೀತಿಯಲ್ಲಿ ಕರಿನೆರಳು ಬೀರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next