Advertisement

ಕೊರೊನಾ ಎಫೆಕ್ಟ್: ಅಮ್ಮನ ನಿತ್ಯ ದರ್ಶನ ರದ್ದು

11:09 PM Mar 20, 2020 | Hari Prasad |

ತಿರುವನಂತಪುರಂ: ಮಮತೆಯ ಆಲಿಂಗನದ ಮೂಲಕ ತನ್ನ ಭಕ್ತರಿಗೆ ಸಾಂತ್ವನ ಮತ್ತು ಆತ್ಮವಿಶ್ವಾಸವನ್ನು ತುಂಬುವ ‘ಅಮ್ಮ’ ಎಂದೇ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಮಾತಾ ಅಮೃತಾನಂದಮಯಿ ಅವರ ಭಕ್ತರಿಗೂ ಇದೀಗ ಕೊರೋನಾ ವೈರಸ್ ನ ಬಿಸಿ ತಟ್ಟಿದೆ.

Advertisement

ಸ್ಪರ್ಶ ಸಂಪರ್ಕದಿಂದ ದೂರವಿರಬೇಕಾದ ಮತ್ತು ಜನಜಂಗುಳಿ ಸೇರಲಾಗದ ಸ್ಥಿತಿಯನ್ನು ನಿರ್ಮಾಣ ಮಾಡಿರುವ ಈ ಮಾರಕ ವೈರಸ್ ನ ಭೀತಿಯಿಂದಾಗಿ ತಿರುವನಂತಪುರಂನ ಕೊಲ್ಲಂನಲ್ಲಿರುವ ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ನಿತ್ಯ ದರ್ಶನವನ್ನು ರದ್ದುಗೊಳಿಸಲಾಗಿದೆ.

‘ಅಮ್ಮ’ ಎಂದೇ ಕರೆಯಲ್ಪಡುವ ಅಮೃತಾನಂದಮಯಿ ಅವರು ತಮ್ಮ ಭಕ್ತರಿಗೆ ಅಪ್ಪುಗೆಯ ಮೂಲಕ ಹರಸುತ್ತಾರೆ. ಇದೀಗ ಅಮ್ಮನ ಮಠ ಅಮೃತಾಪುರಿ ಆಶ್ರಮಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಲಾಗಿದೆ ಎಂದು ಮಠದ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next