Advertisement
ಇಡೀ ಜಗತ್ತೇ ವಿಶ್ವ ಮಹಿಳಾ ದಿನದ ಸಂಭ್ರಮದಲ್ಲಿದ್ದರೆ ಕೊರೊನಾ ವೈರಸ್ ಎಂಬ ಮಹಾಮಾರಿಯ ಹೊಡೆತ ದಿಂದ ಕಂಗಾಲಾಗಿರುವ ಚೀನದಲ್ಲಿ ಮಹಿಳಾ ವೈದ್ಯರು ಮತ್ತು ನರ್ಸ್‌ಗಳು ಪಡುತ್ತಿರುವ ಕಷ್ಟಗಳ ಸರಮಾಲೆಯಿದು.
Related Articles
Advertisement
ನೈರ್ಮಲ್ಯದ ಸಮಸ್ಯೆಯೂ ಕಾಡುತ್ತಿದ್ದು, ಸ್ನಾನ ಮಾಡಲು, ತಲೆಗೂದಲನ್ನು ಬಾಚಿಕೊಳ್ಳಲು ಸಮಯವಿ ರದ ಕಾರಣ, ಕೆಲವರು ತಲೆಗಳನ್ನು ಬೋಳಿಸಿಕೊಳ್ಳುತ್ತಿ ದ್ದಾರೆ. ಆರಂಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳೂ ಇರಲಿಲ್ಲ, ಅದನ್ನು ಮುಂದಕ್ಕೆ ಹಾಕುವ ಔಷಧಗಳೂ ಇರಲಿಲ್ಲ. ಬೆರಳೆಣಿಕೆಯ ಮಂದಿ ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ, ಕೆಲವು ಸಂಘಸಂಸ್ಥೆಗಳು ಮುಂದೆ ಬಂದು ಮಹಿಳಾ ನರ್ಸ್‌ಗಳು ಹಾಗೂ ವೈದ್ಯರ ಮಾಸಿಕ ಋತುಚಕ್ರವನ್ನು ಮುಂದಕ್ಕೆ ಹಾಕಲು 200 ಬಾಟಲಿಗಳಷ್ಟು ಮಾತ್ರೆಗಳನ್ನು ದೇಣಿಗೆ ರೂಪದಲ್ಲಿ ನೀಡಿವೆ.
ಇರಾನ್ ಸಂಸದೆ ಸಾವು: ಸೋಂಕು ತಗುಲಿದ್ದ ಇರಾನ್‌ನ ಸಂಸದೆ ಫತೇಮೇಹ್ ರಹ್‌ಬರ್(55) ಶನಿವಾರ ಕೊನೆಯುಸಿರೆಳೆದಿದ್ದಾರೆ. ಇವರು ಇತ್ತೀಚೆಗಷ್ಟೇ ಟೆಹ್ರಾ ನ್ ನಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ಈವರೆಗೆ ಇರಾನ್‌ನ 7 ಮಂದಿ ರಾಜಕಾರಣಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿ ಶನಿವಾರ 21 ಮಂದಿ ಮೃತಪಟ್ಟು, ಒಟ್ಟು ಸಾವಿನ ಸಂಖ್ಯೆ 145ಕ್ಕೇರಿಕೆ ಯಾಗಿದೆ. 5,823 ಪ್ರಕರಣಗಳು ದೃಢಪಟ್ಟಿದ್ದರೆ, 16 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಶಂಕೆಯಿಂದ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.
ರಜೆ ಘೋಷಣೆ: ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 4 ಜಿಲ್ಲೆಗಳಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳಿಗೂ ಶನಿವಾರದಿಂದ ರಜೆ ಘೋಷಿಸಲಾಗಿದೆ. ಶ್ರೀನಗರ, ಬಂಡಿಪೋರಾ, ಬದ್ಗಾಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎಲ್ಲ ಶಾಲೆಗಳೂ ಮುಂದಿನ ಆದೇಶದವರೆಗೆ ಮುಚ್ಚಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಮಾ.12ರಿಂದ 31ರ ಅವಧಿಯಲ್ಲಿ ಕಾಯ್ದಿರಿಸಲಾಗುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಅವಧಿ ಬದಲಾವಣೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನ ಸಂಚಾರ ಸ್ಥಗಿತ: ಕುವೈಟ್ ಸರಕಾರವು ಶನಿವಾರ ಭಾರತ ಸೇರಿದಂತೆ 6 ದೇಶಗಳಿಂದ ಬರುವ ಹಾಗೂ ಆ ದೇಶಗಳಿಗೆ ಹೋಗುವ ಎಲ್ಲ ವಿಮಾನಗಳ ಸಂಚಾರವನ್ನೂ ರದ್ದು ಮಾಡಿದೆ.
ಕಾಬಾ ಸುತ್ತಲಿನ ಪ್ರದೇಶಕ್ಕೆ ಪ್ರವೇಶಾವಕಾಶಮೆಕ್ಕಾ ಮಸೀದಿಯ ಪವಿತ್ರ ಕಾಬಾ ಸುತ್ತಲಿನ ಪ್ರದೇಶಕ್ಕೆ ಪ್ರವೇಶಾವಕಾಶವನ್ನು ಸೌದಿ ಅರೇಬಿಯಾ ಶನಿವಾರ ಕಲ್ಪಿಸಿದೆ. ಇತ್ತೀಚೆಗಷ್ಟೇ ಮೆಕ್ಕಾ-ಮದೀನಾ ಹಾಗೂ ಉಮ್ರಾ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ಸೌದಿಯ ಭಾವಿ ದೊರೆ ಸಲ್ಮಾನ್‌ರ ಆದೇಶದಂತೆ ಕಾಬಾ ಸುತ್ತಲಿನ ಪ್ರದೇಶಕ್ಕೆ ತೆರಳಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಉಮ್ರಾ ಪೂರ್ಣಗೊಳಿಸಲು ಯಾತ್ರಿಗಳು 7 ಬಾರಿ ಸಂಚರಿಸುವಂಥ ಎರಡು ಪರ್ವತಗಳ ನಡುವಿನ ಪ್ರದೇಶವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇರಿ 15 ಮಂದಿಗೆ ಸೋಂಕು
ಯುಎಇಯಲ್ಲಿ ಭಾರತೀಯ ವ್ಯಕ್ತಿ ಸೇರಿದಂತೆ ಒಟ್ಟು 15 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಶನಿವಾರ 45ಕ್ಕೇರಿದೆ. ಇನ್ನು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನಿಂತಿರುವ ಕ್ರೂಸ್ ನೌಕೆಯಲ್ಲಿ 21 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಅಮೆರಿಕ ಸರಕಾರ ತಿಳಿಸಿದೆ. ಹವಾಯಿಯಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಈ ನೌಕೆಯಲ್ಲಿ ಒಟ್ಟು 3,500 ಮಂದಿ ಇದ್ದಾರೆ.