Advertisement
ಮಾ. 3ರಿಂದ ಜೋರ್ಡಾನ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಅರ್ಹತಾ ಕೂಟಕ್ಕಾಗಿ ಅದು ಕೇಂದ್ರ ಇಟಲಿಯ ಅಸ್ಸಿಸಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಇದೇ ವೇಳೆ ಉತ್ತರ ಇಟಲಿಯಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು 7 ಮಂದಿ ಮೃತಪಟ್ಟಿ ದ್ದಾರೆ. 229 ಮಂದಿ ಅದರಿಂದ ಬಾಧಿತ ರಾಗಿದ್ದಾರೆ. ಕೂಡಲೇ ಇಟಲಿಯಿಂದ ಜೋರ್ಡಾನಿಗೆ ತೆರಳುವಂತೆ ಸಂದೇಶ ಬಂದರೂ, ಭಾರತೀಯರು ಇಟಲಿಯಲ್ಲೇ ಮುಂದುವರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ!
ಭಾರತ ತಂಡದ ಉನ್ನತ ಪ್ರದರ್ಶನ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಹೀಗೆ ಪ್ರತಿಕ್ರಿಯಿಸಿದ್ದಾರೆ. “ನಮ್ಮ ತರಬೇತಿ ಅಸ್ಸಿಸಿಯಲ್ಲಿ ಏರ್ಪಾಡಾಗಿದೆ. ಕೊರೊನಾ ವೈರಸ್ ಹಬ್ಬಿರುವ ಸಂಗತಿ ಗೊತ್ತಾದಾಗ ತುಸು ಗಾಬರಿ ಗೊಳಗಾಗಿದ್ದೆವು. ಆದರೆ ವೈರಸ್ ಹಬ್ಬಿರುವ ಪ್ರದೇಶ ಹಾಗೂ ನಾವಿರುವ ತಾಣಕ್ಕೆ ಬಹಳ ಅಂತರವಿದೆ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವಿಲ್ಲೇ ಉಳಿಯುವ ನಿರ್ಧಾರ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ. ಆದರೆ ಭಾರತ ತಂಡದಲ್ಲಿ ಇರುವ ಬಾಕ್ಸರ್‌ಗಳು ವಿಶ್ವವಿಖ್ಯಾತರು. 6 ಬಾರಿ ವಿಶ್ವಕಪ್ ಗೆದ್ದಿರುವ ಮೇರಿ ಕೋಮ್, ಅಮಿತ್ ಪಂಘಲ್, ವಿಕಾಸ್ ಕೃಷ್ಣನ್ ಇರುವ ಪ್ರಬಲ ತಂಡ ಇಟಲಿಯಲ್ಲಿದೆ. ಇವರಿಗೆ ಅಪಾಯವೇನಾದರೂ ಎದುರಾದರೆ ಎಂಬ ಭೀತಿ ಎದುರಾಗಿದೆ.
Related Articles
ಮೂಲ ವೇಳಾಪಟ್ಟಿ ಪ್ರಕಾರ ಈ ಒಲಿಂಪಿಕ್ ಅರ್ಹತಾ ಕೂಟ ಚೀನದ ವುಹಾನ್ ಪಟ್ಟಣದಲ್ಲಿ ನಡೆ ಯಬೇಕಿತ್ತು. ಆದರೆ ಅಲ್ಲಿ ಕೊರೊನಾ ಹಾವಳಿ ತೀವ್ರಗೊಂಡ ಕಾರಣ ಒಂದು ತಿಂಗಳು ಮುಂದೂಡಲ್ಪಟ್ಟಿತು. ಅದರಂತೆ ಜೋರ್ಡಾನ್‌ನಲ್ಲಿ ಆಯೋಜನೆಯಾಗಿದೆ.
Advertisement