Advertisement

ಅಪ್ಪನ ಜಾತ್ರೆಗೆ ಜನರ ಗುಂಪು ಸೇರದಂತೆ ಜಿಲ್ಲಾಡಳಿತದ ಕ್ರಮ

12:24 PM Mar 13, 2020 | Suhan S |

ಕಲಬುರಗಿ: ಕೊರೊನಾ ಸೋಂಕು ಹರಡವಿಕೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ನಡೆಯುವ ಐತಿಹಾಸಿಕ ಶರಣಬಸವೇಶ್ವರ ಜಾತ್ರೆಗೆ ಜನರು ಒಟ್ಟಾಗಿ ಸೇರದಂತೆ ಕಲಬುರಗಿ ಜಿಲ್ಲಾಡಳಿತ ವಹಿಸಲಾಗುತ್ತಿದೆ. ಎಂದು ಜಿಲ್ಲಾಧಿಕಾರಿ ಶರತ್ ಬಿ‌. ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೊರೊನಾ ಸೋಂಕಿಗೆ ದೇಶದಲ್ಲೇ ಮೊದಲು ಕಲಬುರಗಿ ವ್ಯಕ್ತಿ ಮೃತಪಟ್ಟಿದ್ದರಿಂದ ಒಟ್ಟಾಗಿ ಜನರು ಸೇರದಂತೆ ನೋಡಿಕೊಳ್ಳಲಾಗುತ್ತಿದೆ. ಅದರಂತೆ ಶುಕ್ರವಾರ ಸಂಜೆ ರಥೋತ್ಸವ ನಡೆಯಬೇಕಿದ್ದು, ಗುರುವಾರ ರಾತ್ರಿ ತಡರಾತ್ರಿ ಶರಣ ಬಸವೇಶ್ವರ ಸಂಸ್ಥಾನದೊಂದಿಗೆ ಮಾತುಕತೆ ನಡೆಸಿ, ರದ್ದು ಮಾಡುವ ಬಗ್ಗೆ ಮನವಿ ಮಾಡಲಾಗಿದೆ. ಅದಕ್ಕೆ ಸಂಸ್ಥಾನದ ಪೀಠಾಧಿಪತಿಗಳು ಸಮ್ಮತಿ ಸೂಚಿಸಿದ್ದಾರೆ. ಅದರೂ, ಬೆಳಿಗ್ಗೆ ಭಕ್ತಾದಿಗಳು ಬರುತ್ತಿದ್ದಾರೆ. ಅವರನ್ನು ಮರಳಿ ಕಳುಹಿಸುವ ಯತ್ನ ನಡೆಯಲಾಗುತ್ತಿದೆ ಎಂದು ತಿಳಿಸಿದರು.

ವಿವಿಧ ತಾಲೂಕುಗಳಿಂದ ಜನರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಜಾತ್ರೆಗೆ ಬರದಂತೆ ನೋಡಿ ಕೊಳ್ಳಲಾಗುತ್ತಿದೆ. ಚಿತ್ರಮಂದಿರಗಳು, ಮಾಲ್ ಗಳನ್ನು ಮುಚ್ಚಿಸುವಂತೆ ಸೂಚಿಸಲಾಗಿದೆ. ಜತೆಗೆ ಸಭೆ, ಸಮ್ಮೇಳನ, ಸಮಾವೇಶ ಹಾಗೂ ಪ್ರತಿಭಟನೆಗಳು ನಡೆಸದಂತೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next