Advertisement

ಪ್ರತಿಯೊಬ್ಬರೂ ಕೊರೊನಾ ನಿಯಮ ಪಾಲಿಸಿ

08:26 PM Jun 16, 2021 | Team Udayavani |

ತುಮಕೂರು: ಇಂದು ಜಗ್ಗತ್ತನ್ನೇ ಆವರಿಸಿರುವ ಕೋವಿಡ್‌ನಿಂದ ನಮ್ಮ ಮೇಲೆ ನಮಗೇ ಸಂಶಯ ಮೂಡುವಂತಾಗಿದೆ. ಕೊರೊನಾ ರೋಗ ಮನುಷ್ಯ ಸಂಬಂಧಗಳನ್ನು ಮರೆ ಮಾಚುವ ಕೆಲಸ ಮಾಡುತ್ತಿದೆ. ಇಂತಹಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊರೊನಾ ನಿಯಮಪಾಲಿಸಬೇಕು ಎಂದು ಬೆಳ್ಳಾವಿ ಕಾರದ ಮಠಾಧ್ಯಕ್ಷ ಶ್ರೀಕಾರದ ವೀರಬಸವ ಸ್ವಾಮೀಜಿ ತಿಳಿಸಿದರು.

Advertisement

ಬೆಳ್ಳಾವಿ ಕಾರದ ಮಠದ ಶ್ರೀಕಾರದ ವೀರಬಸವಸ್ವಾಮೀಜಿ 38ನೇ ಜನ್ಮದಿನವನ್ನು ಕೋವಿಡ್‌ ಹಿನ್ನೆಲೆಪುರೋಹಿತರಿಗೆ, ಬಡವರಿಗೆ ಆಹಾರ ಪದಾರ್ಥಗಳಕಿಟ್‌, ಹಣ್ಣಿನ ಗಿಡಗಳನ್ನು ದಾನ ಹಾಗೂ ರಕ್ತದಾನಮಾಡುವ ಮೂಲಕ ವಿಶೇಷವಾಗಿ ಆಚರಿಸಿ ನಂತರಮಾತನಾಡಿದ ಅವರು, ಇಂದು ಭಕ್ತಾದಿಗಳೆಲ್ಲರೂಸೇರಿ ಅರವೊಟ್ಟಿಗೆ ದಿನಸಿ ಪದಾರ್ಥಗಳ ಕಿಟ್‌ ವಿತರಣೆಮಾಡಿ ಜೊತೆಗೆ ಹಣ್ಣಿನ ಸಸಿಗಳ ವಿತರಣೆ ಮತ್ತುರಕ್ತದಾನ ಶಿಬಿರದಂತಹ ವಿಶೇಷ ಕಾರ್ಯಕ್ರಮ ನಡೆಸುತ್ತಿ ರುವುದು ಉತ್ತಮ ಕೆಲಸ. ಜಗತ್ತಿನಲ್ಲಿ ಹರಡಿರುವಸಾಂಕ್ರಾಮಿಕ ರೋಗದಿಂದ ನನ್ನ ಜನ್ಮದಿನ ಆಚರಿಸುವುದು ಬೇಡ ಎಂದು ಭಕ್ತಾದಿಗಳಿಗೆ ತಿಳಿಸಿದ್ದೆ. ಆದರೆ,ಭಕ್ತಾದಿಗಳು ಸರಳವಾಗಿ ಆಚರಿಸುತ್ತಿದ್ದಾರೆ ಎಂದರು.

ಸೋಂಕಿತರಿಗೆ ವಿಶ್ವಾಸ ತುಂಬಿ: ಕೊರೊನಾಸೋಂಕಿತರನ್ನು ನಾವು ನೋಡುವ ರೀತಿ ಬದಲಾಗಿದೆ.ಆ ಬದಲಾವಣೆಯನ್ನು ಬಿಟ್ಟು, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದಾಗ ಮಾತ್ರಮಾನವ ಜನ್ಮ ಸಾರ್ಥಕವಾಗುತ್ತದೆ. ಇಂದು ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವಂತಹಜಗತ್ತಿನ 6 ವೈದ್ಯರನ್ನು ನೆನಪಿಸಿಕೊಳ್ಳಬೇಕಾಗಿದೆ. ಆಆರು ವೈದ್ಯರು ದುಡ್ಡು ಕೊಟ್ಟರೆ ಸಿಗುವಂತಹ ವೈದ್ಯರಲ್ಲ,ಮೊದಲನೆಯದು ಬೆಳಗಿನ ಜಾವ ಸೂರ್ಯನ ಕಿರಣನೋಡುವಂತಹದ್ದು, ನಂತರ ವಿಶ್ರಾಂತಿ ತೆಗೆದುಕೊಳ್ಳುವಂತಹದ್ದು, ಮಿತ ಆಹಾರ ಸೇವನೆ, ನಂತರ ಆತ್ಮಸ್ಥೈರ್ಯ ಅತೀ ಅವಶ್ಯಕವಾಗಿ ಬೇಕಾಗಿದೆ ಎಂದರು.

ಭಕ್ತಾದಿಗಳೆಲ್ಲರೂ ಸೇರಿ ಕೊರೊನಾ ಸಂಕಷ್ಟದಲ್ಲಿರುವವರಿಗೆ ಅರವೊಟ್ಟಿಗೆ ನೀಡಿ ಅವರ ನೆರವಿಗೆನಿಲ್ಲಬೇಕೆಂದು ತೀರ್ಮಾನಿಸಿ ಮಠದ ವತಿಯಿಂದದಿನಸಿ ಪದಾರ್ಥಗಳ ಕಿಟ್‌, ಹಣ್ಣಿನ ಗಿಡಗಳ ವಿತರಣೆಮತ್ತು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕತುಮಕೂರಿನ ಯುವಕ ಮಿತ್ರರು, ಬಸವಸೇನೆ,ವಿನಾಯಕ ಸೇವಾ ಸಮಿತಿ, ಮಠದ ಎಲ್ಲ ಸದಸ್ಯರುಸೇರಿ ಸರಳವಾಗಿ ಜನ್ಮದಿನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಎಂದು ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next