Advertisement

ತಮಾಷೆ ಮಾಡಿದ್ದ ಬಾಸ್ಕೆಟ್‌ ಬಾಲ್‌ ತಾರೆಗೆ ಕೊರೊನಾ: ಆಟೋಗ್ರಾಫ್ ಪಡೆದಿದ್ದ ಬಾಲಕಿಗೂ ಸೋಂಕು

04:52 PM Mar 14, 2020 | keerthan |

ಪ್ಯಾರಿಸ್: ಕೊರೊನಾ ವೈರಸ್‌ ಅನ್ನು ತಮಾಷೆ ಮಾಡಿದ್ದ ಫ್ರಾನ್ಸ್‌ನ ಖ್ಯಾತ ಬಾಸ್ಕೆಟ್‌ಬಾಲ್‌ ಆಟಗಾರ ರೂಡಿ ಗಾಬರ್ಟ್‌ ಸ್ವತಃ, ಸೋಂಕಿಗೊಳಗಾಗಿರುವ ವಿಚಿತ್ರ ಪ್ರಸಂಗ ನಡೆದಿದೆ. ಅಮೆರಿಕದ ಎನ್‌ ಬಿಎನಲ್ಲಿ ಉಟಾಹ್‌ಜಾಜ್‌ ತಂಡದ ಪರ ಆಡುತ್ತಿರುವ ಅವರು, ಮೊನ್ನೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಮೈಕ್‌, ಧ್ವನಿಮುದ್ರಣ ಉಪಕರಣಗಳನ್ನೆಲ್ಲ ಒಂದೊಂದಾಗಿ ಮುಟ್ಟಿ ನಂಗೇನು ಆಗಲ್ಲ ಎಂದಿದ್ದರು.

Advertisement

ಬುಧವಾರ ರಾತ್ರಿಯಷ್ಟೊತ್ತಿಗೆ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ! ಅದರ ಪರಿಣಾಮ ಉಟಾಹ್‌ ಮತ್ತು ಒಕ್ಲಹಾಮ ಸಿಟಿ ನಡುವಿನ ಪಂದ್ಯ ರದ್ದಾಗಿದೆ.

ಇಷ್ಟೇ ಅಲ್ಲದೆ ಕಳೆದ ವಾರ ರೂಡಿ ಗೋಬರ್ಟ್ ಬಳಿಯಲ್ಲಿ ಆಟೋಗ್ರಾಫ್ ಪಡೆದಿದ್ದ ಮಗುವಿಗೆ ಕೂಡಾ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಅಮೆರಿಕದ ಅತಿ ಪ್ರಸಿದ್ಧ ಕೂಟ ಎನ್‌ಬಿಎ ತಾತ್ಕಾಲಿಕವಾಗಿ ರದ್ದಾಗಿದೆ. ಸದ್ಯ ಗಾಬರ್ಟ್‌ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಡೊನೊವಾನ್‌ ಮಿಚೆಲ್‌ ಎಂಬ ಇನ್ನೊಬ್ಬ ಆಟಗಾರನಿಗೆ ಸೋಂಕು ತಗುಲಿದೆ!

Advertisement

Udayavani is now on Telegram. Click here to join our channel and stay updated with the latest news.

Next