ಹಾಸನ: ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಬಗ್ಗೆಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ. ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳಬೇಕಾಗಿತ್ತುಎಂದು ಬಿಜೆಪಿ ರಾಷ್ಟ್ರೀಯಕಾರ್ಯದರ್ಶಿ, ಶಾಸಕಸಿ.ಟಿ.ರವಿ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆಮಾತನಾಡಿ, ಕೊರೊನಾ2ನೇ ಅಲೆ ಭೀಕರವಾಗಿರುತ್ತದೆ ಎಂಬ ನಿರೀಕ್ಷೆಯಿತ್ತು. ಈ ನಿಟ್ಟಿನಲ್ಲಿ ಸರ್ಕಾರಅಗತ್ಯ ಕ್ರಮ ಕೈಗೊಂಡು ನಿಯಂತ್ರಣ ಕ್ರಮ ಹಾಗೂಇನ್ನಷ್ಟು ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕಾಗಿತ್ತು ಎಂದರು. ಅಲ್ಲದೇ, ಸರ್ಕಾರ ಏನೂ ಮಾಡಿಯೇ ಇಲ್ಲ ಎಂದುನಾನು ಹೇಳಲಾರೆ. ಇನ್ನಷ್ಟು ಕ್ರಮ ಕೈಗೊಳ್ಳಬೇಕಿತ್ತುಎಂದರು.
ಕೊರೊನಾ ಹೆಚ್ಚಿವೆ:ರಾಜ್ಯದಲ್ಲಿ ಕೊರೊನಾವ್ಯಾಪಕವಾಗಿ ಹರಡಲು ಉಪ ಚುನಾವಣೆಗಳೂಕಾರಣ ಇರಬಹುದು. ಆದರೆ ಚುನಾವಣೆಯೇಪ್ರಮುಖ ಕಾರಣವಲ್ಲ. ಕೇರಳ, ತಮಿಳುನಾಡು,ಪಾಂಡಿಚೇರಿಯಲ್ಲೂ ಚುನಾವಣೆಗಳು ನಡೆದವು.ಆದರೆ ಅಲ್ಲಿ ಕರ್ನಾಟಕಕ್ಕಿಂತ ಕಡಿಮೆ ಕೊರೊನಾಪ್ರಕರಣಗಳಿವೆ ಎಂದರು.
ಕೊರೊನಾ ದೇಶದಲ್ಲಿ ಹರಡಿರುವುದಕ್ಕೆವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರನ್ನುಟಾರ್ಗೆಟ್ ಮಾಡಿ ಮಾತನಾಡುವುದು ಸಲ್ಲದು.ಇದೊಂದು ಮೆಡಿಕಲ್ ಎಮರ್ಜೆನ್ಸಿ ಎಂದುಪರಿಗಣಸಿ ಸಹಕರಿಸಬೇಕು. ಬಿಜೆಪಿಸರ್ಕಾರಗಳಿರುವ ರಾಜ್ಯಗಳಲ್ಲಿ ಮಾತ್ರ ಕೊರೊನಾಹರಡಿಲ್ಲ. ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್,ಛತ್ತೀಸ್‌ಘಡ, ಪಶ್ಚಿಮ ಬಂಗಾಳದಲ್ಲಿಯೂಕೊರೊನಾ ವ್ಯಾಪಕವಾಗಿ ಹರಡಿದೆ. ಆ ರಾಜ್ಯಗಳಲ್ಲಿಯಾರನ್ನು ವಿಪಕ್ಷಗಳು ಟಾರ್ಗೆಟ್ ಮಾಡುತ್ತಾರೆಎಂದು ಪ್ರಶ್ನಿಸಿದರು.ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ದೇಶಗಳಲ್ಲಿಭಾರತ ಮೊದಲ ಸ್ಥಾನದಲ್ಲಿದೆ.
2 ಸಾವಿರಪ್ರಯೋಗಾಲಯ ನಿರ್ಮಿಸಿದೆ. ಏನೇನುಮಾಡಬೇಕೋ ಅದನ್ನೆಲ್ಲಾ ಆನ್ನೂ ಕೇಂದ್ರ ಸರ್ಕಾರಮಾಡುತ್ತಿದೆ. ಮಿತ್ರ ರಾಷ್ಟ್ರಗಳಿಂದ ನೆರವನ್ನೂಪಡೆಯುತ್ತಿದೆ. ಸಂಕಷ rದ ಸಂಕ್ರಮಣ ಕಾಲದಲ್ಲಿಕಾಂಗ್ರೆಸ್ ಸಹಕಾರ ನೀಡಬೇಕೇ ಹೊರತು ಟೀಕೆಯನ್ನೇಗುರಿಯಾಗಿಸಿಕೊಳ್ಳಬಾರದು ಎಂದರು.