Advertisement

ಹಳ್ಳಿಗಳಲ್ಲಿ ಕೊರೊನಾ ಸೋಂಕು ತಡೆಗೆ ಕ್ರಮ: ಸಚಿವ

07:06 PM May 31, 2021 | Team Udayavani |

ಚಾಮರಾಜನಗರ: ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿನಪ್ರಮಾಣ ಹೆಚ್ಚು ಇರುವ ಹಿನ್ನೆಲೆಯಲ್ಲಿ ಗ್ರಾಪಂಮಟ್ಟದಲ್ಲಿ  ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸೋಂಕು ತಡೆಗೆ ವಿಶೇಷ ಗಮನವಹಿಸಿ ಕೋವಿಡ್‌ ಮುಕ್ತ ಗ್ರಾಮವನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

Advertisement

ಕೋವಿಡ್‌ ಮುಂಜಾಗ್ರತಾ ಕ್ರಮಗಳ ಸಂಬಂಧ ಯಳಂದೂರು ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಗೌಡಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ  ಟಾಸ್‌Rಪೋರ್ಸ್‌ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆಸಚಿವರು ಮಾತನಾಡಿದರು.

ಸಹಕಾರ ಬಯಸಿದ್ದೇವೆ: ಜಿಲ್ಲೆಯಲ್ಲಿ ಗ್ರಾಮೀಣಭಾಗದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.  ಈ ನಿಟ್ಟಿನಲ್ಲಿ ನಿಗಾ ವಹಿಸುವಸಲುವಾಗಿ ಗ್ರಾಮಾಂತರ ಪ್ರದೇಶಗಳಿಗೆ ವ್ಯಾಪಕವಾಗಿಭೇಟಿ ನೀಡಿ ಪರಿಶೀಲಿಸಲಾಗಿದೆ. ಕಂಟೈನ್ಮೆಂಟ್‌ಝೋನ್‌ಗಳನ್ನು ವೀಕ್ಷಿಸಲಾಗಿದೆ. ಗ್ರಾಪಂ ಟಾಸ್ಕ್ ಫೋರ್ಸ್‌ ಸಭೆಗಳನ್ನು ನಡೆಸಿ ಕೋವಿಡ್‌ ನಿಯಂತ್ರಣಕ್ಕೆವಿಶೇಷ ಆದ್ಯತೆ ನೀಡಿದ್ದು, ಕೋವಿಡ್‌ ಮುಕ್ತ ಗ್ರಾಮ,ಗ್ರಾಮ ಪಂಚಾಯ್ತಿಯನ್ನಾಗಿ ಘೋಷಿಸುವ ಸಂಬಂಧಸಹಕಾರ ಬಯಸಲಾಗಿದೆ ಎಂದರು.

ಧನ್ಯವಾದ ಅರ್ಪಿಸುವೆ: ಜಿಲ್ಲೆಯಲ್ಲಿ ಒಟ್ಟು 503 ಕಂದಾಯ ಗ್ರಾಮಗಳಿವೆ. ಇದರಲ್ಲಿ ಹಲವುಹಾಡಿಗಳೂ ಸೇರಿ 174 ಗ್ರಾಮಗಳಲ್ಲಿ ಒಂದೂಕೋವಿಡ್‌ ಪ್ರಕರಣ ವರದಿಯಾಗಿಲ್ಲ. ಮುಂದೆಯೂ ಸೋಂಕು ಕಾಣಿಸಿಕೊಳ್ಳದಿರುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ತಿಳಿಸಲಾಗಿದೆ. ಆಶಾ,ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್‌ ನಿಗ್ರಹ ಕಾರ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು,ಅವರೆಲ್ಲರಿಗೂ ಧನ್ಯವಾದ  ಅರ್ಪಿಸುವುದಾಗಿ ಸಚಿವರು ನುಡಿದರು.

ವಾರ್ಡ್ಸಿದ್ಧಪಡಿಸಲು ಕ್ರಮ: ಜಿಲ್ಲೆಯಲ್ಲಿ ಕಳೆದ 22ದಿನಗಳಲ್ಲಿ 6 ಜಿಲ್ಲಾಮಟ್ಟದ ಟಾಸ್ಕ್ಫೋರ್ಸ್‌ ಸಭೆನಡೆಸಿ ಕೋವಿಡ್‌ ನಿಯಂತ್ರಣಕ್ಕೆ ವಿಸ್ತೃತವಾಗಿಚರ್ಚಿಸಲಾಗಿದೆ. ಬ್ಲ್ಯಾಕ್‌ ಫಂಗಸ್‌ ಇತರೆ ಈಸಂಬಂಧಿ ಕಾಯಿಲೆಗೆ ಜಿಲ್ಲೆಯಲ್ಲೇ  ಚಿಕಿತ್ಸೆ ನೀಡಲುಅಗತ್ಯವಿರುವ ವೈದ್ಯಕೀಯ ಸಲಕರಣೆ ಖರೀದಿಗಾಗಿರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಿದರು.

Advertisement

ಶಾಸಕ ಎನ್‌.ಮಹೇಶ್‌, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಬೋಯರ್‌ನಾರಾಯಣರಾವ್‌, ಹೆಚ್ಚುವರಿ ಪೊಲೀಸ್‌ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next