ಸಿಂದಗಿ: ಕೊರೊನಾ 2ನೇ ಹಂತದಲ್ಲಿ ಕಾರ್ಮಿಕರು, ರೈತರು, ಬಡ ಜನತೆ ಸೇರಿದಂತೆ ಆಟೋ ಚಾಲಕರಿಗೆ ದುಡಿಮೆಯಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಹೀಗಾಗಿ ಪಟ್ಟಣದ ಆಟೋ ಚಾಲಕರ ಕಷ್ಟಕರ ಜೀವನ ಕಂಡು ಅವರಿಗೆ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಮನಗೂಳಿ ಸ್ವಗೃಹದ ಎದುರು ಪಟ್ಟಣದ ಆಟೋ ಚಾಲಕರಿಗೆ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. ಬೆಳಗ್ಗೆ10 ರಿಂದ ಅವಶ್ಯಕ ಚಟುವಟಿಕೆ ಬಿಟ್ಟು ಯಾವುದೇ ವ್ಯವಹಾರ-ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಆಟೋಗಳಿಗೆ ಬಾಡಿಗೆ ಸಿಗುವುದಿಲ್ಲ. ಹೀಗಾಗಿ ಜೀವನ ನಿರ್ವಹಣೆ ಆಟೋ ಚಾಲಕರಿಗೆ ಕಷ್ಟವಾಗಿದೆ.
ಇದನ್ನರಿತು ಉಚಿತ ಆಹಾರ ಧಾನ್ಯಗಳ ಕಿಟ್ ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಮಾತನಾಡಿ, ಕೊರೊನಾ 2ನೇ ಹಂತ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬಡಜನತೆ, ನಿರ್ಗತಿಕರು, ಕಾರ್ಮಿಕರು, ರೈತರು ಹೀಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಮಾಡಲಾಗುತ್ತಿದೆ. ಸಮಾಜ ಸೇವೆ ಮಾಡುವುದು, ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು ನಮ್ಮ ತಂದೆ ಶಾಸಕ ದಿ. ಎಂ.ಸಿ. ಮನಗೂಳಿ ಅವರಿಂದ ಬಂದ ಬಳುವಳಿ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ.
ಆದ್ದರಿಂದ ನಾನು ಮತ್ತು ಪತ್ನಿ ಡಾ| ಸಂಧ್ಯಾ ಸೋಂಕಿತರ ಸೇವೆ ಮಾಡುತ್ತಿದೇವೆ. ಆಸ್ಪತ್ರೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿಸಿದ್ದೇವೆ ಎಂದರು. ನಂತರ ಪಟ್ಟಣದ ಆಟೋ ಚಾಲಕರಿಗೆ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಈ ವೇಳೆ ಪುರಸಭೆ ಉಪಾಧ್ಯಕ್ಷ ಹಾಸಿಂರ ಆಳಂದ, ಸದಸ್ಯರಾದ ಬಸವರಾಜ ಯರನಾಳ, ಪ್ರತಿಭಾ ಕಲ್ಲೂರ, ಪಾರ್ವತಿ ದುರ್ಗಿ, ಮಹಾದೇವಿ ನಾಯೊRàಡಿ, ಶಾಂತುಗೌಡ ಬಿರಾದಾರ, ಶರಣಪ್ಪ ವಾರದ, ಯೋಗಪ್ಪಗೌಡ ಪಾಟೀಲ, ಇರ್ಫಾನ್ ಆಳಂದ್, ಮಾಜಿ ಸದಸ್ಯ ಇಕ್ಬಾಲ ತಲಕಾರಿ, ಮಂಜುನಾಥ ಬಿಜಾಪುರ, ಜಿಲಾನಿ ನಾಟಿಕಾರ್, ಭೀಮನಗೌಡ ಬಿರಾದಾರ, ಪರಶುರಾಮ್ ಕಾಂಬಳೆ, ಇಮಾಮುದ್ದೀನ್ ಚಾಂದಕವಟೆ, ಅಶೋಕ ಯಡ್ರಾಮಿ, ಮಂಜುನಾಥ ಬಿರಾದಾರ, ಸೀನು ದುರ್ಗಿ, ಅಂಬು ತಿವಾರಿ, ರಾಜು ಯಡ್ರಾಮಿ, ಆಟೋ ಸಂಘದ ಅಧ್ಯಕ್ಷರಾದ ಅಯೂಬ್ ಪಡೆಕನೂರ್, ಜಬ್ಟಾರ್ ಮರ್ತುರ ಇದ್ದರು.