Advertisement

ಕೊರೊನಾ ಮುಕ್ತ ತಾಲೂಕು ನಮ್ಮ ಗುರಿ

05:16 PM May 29, 2021 | Team Udayavani |

ಅನೇಕ ಸಭೆಗಳನ್ನು ಮಾಡಿ ತಾಲೂಕ ಅನ್ನು ಕೊರೊನಾಮುಕ್ತ ತಾಲೂಕು ಮಾಡುವುದೇ ನಮ್ಮ ಗುರಿಯಾಗಿದೆ.ಇದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ,ಪಂಚಾಯಿತಿ ಅಧಿಕಾರಿಗಳ ಸಭೆ ಕರೆದು ಕೊರೊನಾಕಡಿವಾಣಕ್ಕೆ ಸಭೆ ನಡೆಸಲಾಗುತ್ತಿದೆ.

Advertisement

ತಾನುಸೋಂಕಿತನಾಗಿದ್ದಾಗಲೂ ವರ್ಚುಯಲ್‌ ಸಭೆಗಳಮೂಲಕ ಸೋಂಕಿತರ ರಕ್ಷಣೆ ಶ್ರಮಿಸಲಾಗಿದೆ ಎಂದುಶಾಸಕ ಎಲ್‌. ಎನ್‌. ನಾರಾಯಣಸ್ವಾಮಿ ಉಯವಾಣಿಕಿರು ಸಂದರ್ಶನದಲ್ಲಿ ಹಂಚಿಕೊಂಡರು.

ಕೊರೊನಾ ಪರಿಸ್ಥಿತಿ ನಿಮ್ಮ ಕ್ಷೇತ್ರದಲ್ಲಿ ಹೇಗಿದೆ?

ದೇವನಹಳ್ಳಿ ಕ್ಷೇತ್ರದಲ್ಲಿ ಬೆಂಗಳೂರಿಗೆಹತ್ತಿರವಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿಇರುವವರಿಗೆ ಹೆಚ್ಚಿನ ಹಾಸಿಗೆಗಳು ಆಕಾಶ್‌ ಇನ್ನಿತರೆಆಸ್ಪತ್ರೆಗಳಲ್ಲಿ ದೊರೆಯುತ್ತಿದೆ. ಆದರೂ ಜನರುದೂರವಾಣಿ ಮೂಲಕ ಹಾಸಿಗೆಗಳನ್ನು ಕೊಡಿಸಿಎಂದಾಗ ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆ ಕೊಡಿಸುವಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ಕೊರೊನಾಪ್ರಕರಣಗಳು ಹೆಚ್ಚಾಗಿತ್ತು. ತಕ್ಷಣ ಅಧಿಕಾರಿಗಳ ಸಭೆಕರೆದು ಎಲ್ಲಿ ಎಡವಿದ್ದೇವೆಂದು ಮಾಹಿತಿ ಪಡೆದುಅಗತ್ಯ ಕ್ರಮಗಳನ್ನು ರೂಪಿಸಲಾಗಿದೆ.

ಕೋವಿಡ್‌ ವಿಚಾರದಲ್ಲಿ ನಿಮ್ಮ ಕೊಡಿಗೆ ಏನು ?

Advertisement

ಶಾಸಕರಾಗಿ ಸೋಂಕಿತರಿಗೆ ಅಗತ್ಯವಾದ ಸೌಲಭ್ಯಗಳನ್ನುಕಲ್ಪಿಸುವುದು ನಮ್ಮ ಜವಾಬ್ದಾರಿ ಯಾಗಿದೆ. ಕೋವಿಡ್‌ನಿರ್ವಹಣೆಗೆ ಶಾಸಕರ ನಿಧಿಯಿಂದ 50 ಲಕ್ಷ ವನ್ನುನೀಡಲಾಗುತ್ತಿದೆ. ಈಗಾಗಲೇ ಸಂಘ ಸಂಸ್ಥೆಗಳುಒಂದಲ್ಲ ಒಂದು ರೀತಿ ಸಹಕಾರ ನೀಡುತ್ತಿದ್ದಾರೆ.ವೈದ್ಯರು ಸಲಹೆ ಸ್ವೀಕರಿಸಿ ಗುಣಮುಖರಾಗಬೇಕು.

 ಸೋಂಕಿಗೆ ತತ್ತಾಗಿ ಕೊರೊನಾ ನಿರ್ವಹಿಸಿದ್ದು ಹೇಗೆ ?

– ಕೊವಿಡ್‌ನಿಂದ ನಾನು, ಮನೆ ಪೂರ್ತಿಸೋಂಕಿತರಾಗಿದ್ದೆವು, ಆರೋಗ್ಯದಲ್ಲಿ ಏರುಪೇರಾದಾಗವೈದ್ಯರು ಸಮಯಕ್ಕೆ ಸರಿಯಾಗಿ ನೆರವಾದರು. ಅಗತ್ಯಚಿಕಿತ್ಸೆ ಮೂಲಕ ಮನೆ ಮಂದಿಯೆಲ್ಲರೂ ಚೇತರಿಕೆಕಂಡು ಹೊರಬಂದೆವು. ಆಸ್ಪತ್ರೆಯಲ್ಲಿದ್ದರೂ ಸಹಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿರೋಗಿಗಳಿಗೆ ತೊಂದರೆ ಆಗದಂತೆನೋಡಿಕೊಳ್ಳಲಾಗಿತ್ತು.

ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಾ?

ಬೈರಾಪುರ ಮತ್ತು ಕುಂದಾಣ ಗಳಲ್ಲಿ ಕೋವಿಡ್‌ಕೇರ್‌ ಸೆಂಟರ್‌ ಪ್ರಾರಂಭವಾಗಿದೆ. ಪ್ರತಿ ದಿನಅಧಿಕಾರಿಗಳ ಜೊತೆ ಸಂಪರ್ಕವಿದ್ದು ಕೊರೊನಾಕಡಿವಾಣ ಹಾಕಲು ಸಲಹೆ ಮಾರ್ಗದರ್ಶವನ್ನುನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಹಳ್ಳಿಗಳಲ್ಲಿಕೊರೊನಾ ಪರೀಕ್ಷೆ ಮಾಡಿಸುತ್ತಿರುವುದರಿಂದಗ್ರಾಮಗಳಲ್ಲಿ ಸೋಂಕು ತಡೆಗಟ್ಟಲು ಸಾಧ್ಯವಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನಲ್ಲಿರುವರೋಗಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಗೆ ಮನಒದಲಿಸುವಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳಿಗೆ ಸೂಚಿಸಲಾಗಿದೆ.

ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next