Advertisement

ಟೋಕ್ಯೊ ಒಲಿಂಪಿಕ್ಸ್‌ ಮೇಲೆ ಕೊರೊನಾ ಕರಿನೆರಳು

08:28 PM Mar 06, 2020 | Lakshmi GovindaRaj |

ಇಡೀ ವಿಶ್ವವನ್ನೇ ನಡುಗಿಸಿರುವ ಕೊರೊನಾ ಮುಂಬರುವ ಟೋಕ್ಯೊ ಒಲಿಂಪಿಕ್ಸ್‌ ಮೇಲೂ ತನ್ನ ಕರಿನೆರಳು ಬಿದ್ದಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಈ ಮಹಾಮಾರಿ ಇದೀಗ ಕ್ಷಿಪ್ರ ವೇಗದಲ್ಲಿ ಜಾಗತಿಕವಾಗಿ ಹಬ್ಬುತ್ತಿದೆ. ಒಟ್ಟಾರೆ 70ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಪತ್ತೆಯಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ಆತಂಕವಿರುವುದು ಜಪಾನ್‌ ಆತಿಥ್ಯದಲ್ಲಿರುವ ಟೋಕ್ಯೊ ಒಲಿಂಪಿಕ್ಸ್‌ ಮೇಲೆ, ಅದು ನಡೆಯುತ್ತದೆ‌? ಇಲ್ಲವೋ? ಎನ್ನುವ ಆತಂಕ ಎದುರಾಗಿದೆ.

Advertisement

ಹೌದು, ಜು.24ರಿಂದ ಆ.9ರ ತನಕ ಟೋಕ್ಯೊ ಒಲಿಂಪಿಕ್ಸ್‌ ನಡೆಯಲಿದೆ. ಆದರೆ ಈ ಕೂಟವನ್ನೇ ರದ್ದು ಮಾಡುವ ಕುರಿತಂತೆ ಸಂಘಟಕರು ಆಲೋಚಿಸಿದ್ದಾರೆ. ಅಗತ್ಯ ಬಿದ್ದರೆ ಕೂಟ ರದ್ದಾಗಲಿದೆ ಅಥವಾ ಮುಂದೂಡಿಕೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ತಿಳಿಸಿದ್ದಾರೆ. ಅವರೇ ಹೇಳುವ ಪ್ರಕಾರ, ಒಟ್ಟಾರೆ ಕೂಟಕ್ಕೆ 206 ರಾಷ್ಟ್ರಗಳಿಂದ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಬರಲಿದ್ದಾರೆ. ಇದರಿಂದ ಪರಸ್ಪರ ರೋಗ ಹರಡುವ ಸಾಧ್ಯತೆ ಹೆಚ್ಚಿದ್ದು ವಿವಿಧ ದೇಶಗಳಿಗೆ ಸಮಸ್ಯೆಯಾಗಿ ಕಾಡಬಹುದು.

ಕೊರೊನಾ ಜುಲೈ ಅಷ್ಟರೊಳಗೆ ಕಡಿಮೆ ಆಗದಿದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಂಘಟಕರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಕ್ರೀಡಾ ಸಚಿವ ಕಿರಣ್‌ ರಿಜಿಜು, “ಕೊರೊನಾ ಆತಂಕ ಸದ್ಯಕ್ಕಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಒಲಿಂಪಿಕ್ಸ್‌ ಆರಂಭಕ್ಕೆ ಇನ್ನೂ ಕೆಲವು ತಿಂಗಳು ಬಾಕಿ ಇದೆ. ಅಷ್ಟರೊಳಗೆ ರೋಗ ಹತೋಟಿಗೆ ಬರಲಿದೆ. ಒಲಿಂಪಿಕ್ಸ್‌ ನಿರಾತಂಕವಾಗಿ ಸಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next