Advertisement

ಕೊರೊನಾ ವಿರುದ್ಧ ತಾಲೂಕಿನಾದ್ಯಂತ ಜಾಗೃತಿ

10:24 PM Mar 10, 2020 | mahesh |

ಕುಂದಾಪುರ: ಕೊರೊನಾ ಭೀತಿಯ ವಿರುದ್ಧ ಆತಂಕಗೊಳ್ಳಬೇಕಿಲ್ಲ. ತಾಲೂಕಿನಾದ್ಯಂತ ಜಾಗೃತಿ ಮೂಡಿಸಲಾಗು ತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿದೆ.

Advertisement

ಕಾರ್ಯಾಗಾರ
ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಅಷ್ಟೂ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರ ನಡೆಸಲಾಗಿದೆ. ಇದರಲ್ಲಿ ಸ್ಥಳೀಯವಾಗಿ ಕೈಗೊಳ್ಳಬೇಕಾದ ಎಚ್ಚರಿಕೆ, ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ. ಕೊರೊನಾ ರೋಗದ ಕುರಿತೂ ಮಾಹಿತಿ ನೀಡಲಾಗಿದೆ. ಜತೆಗೆ ಪಶುವೈದ್ಯರು, ಶಾಲೆಗಳ ಆರೋಗ್ಯ ಕ್ಲಬ್‌ಗಳ ಶಿಕ್ಷಕಿಯರು, ಎನ್ನೆಸ್ಸೆಸ್‌ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲಾಗಿದೆ.

ವೈದ್ಯರಿಗೆ ಸೂಚನೆ
ತಾಲೂಕಿನ ಎಲ್ಲ ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಸಭೆ ನಡೆಸಲಾಗಿದ್ದು ಅವರಿಗೆ ಸೂಕ್ತ ಸೂಚನೆ ನೀಡಲಾಗಿದೆ. ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ನ ಎಲ್ಲ ವೈದ್ಯರಿಗೆ ಸೂಚನೆ ನೀಡಲಾಗಿದ್ದು ಯಾವುದೇ ಶಂಕಿತ ಸೋಂಕು ತಾಗಿದ ವ್ಯಕ್ತಿ ಇದ್ದಲ್ಲಿ ತತ್‌ಕ್ಷಣ ಆರೋಗ್ಯ ಇಲಾಖೆಗೆ ಸೂಚನೆ ನೀಡಬೇಕು. ಸೋಂಕು ತಗುಲಿದ ವ್ಯಕ್ತಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಬಾರದು. ಅಥವಾ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ರೆಫ‌ರ್‌ ಮಾಡಬಾರದು. ಏಕೆಂದರೆ ಸೋಂಕು ತಗುಲಿದ ವ್ಯಕ್ತಿ ಪ್ರಯಾಣ ಮಾಡುವಂತಿಲ್ಲ. ಹಾಗೊಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲು ಸಾಧ್‌Âವೇ ಇಲ್ಲ ಎಂಬಂತಹ ಸ್ಥಿತಿ ಬಂದರೆ ಅವರಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ನಿಗಾವಹಿಸಿ ಚಿಕಿತ್ಸೆಗೆ ಒಳಪಡಿಸಲಾಗುವುದು.

ಹೆಚ್ಚುವರಿ ಹಾಸಿಗೆ
ಆರೋಗ್ಯ ಇಲಾಖೆ ಸೂಚನೆಯನ್ವಯ ಜಿಲ್ಲಾಸ್ಪತ್ರೆಗಳಲ್ಲಿ ಐದು ಹಾಸಿಗೆ, ತಾಲೂಕು ಆಸ್ಪತ್ರೆಗಳಲ್ಲಿ 3 ಹಾಸಿಗೆಗಳನ್ನು ಶಂಕಿತ ಕೊರೊನಾ ಸೋಂಕಿತರಿಗಾಗಿ ತುರ್ತು ಚಿಕಿತ್ಸೆಗೆ ಮೀಸಲಿರಿಸಲಾಗಿದೆ.

ಬಸ್‌ಗಳಿಗೆ ಸಿಂಪಡಣೆ
ದೂರದೂರುಗಳಿಗೆ ಇಲ್ಲಿಂದ ಹೋಗುವ ಸರಕಾರಿ ಬಸ್‌ಗಳಿಗೆ ಔಷಧ ಸಿಂಪಡಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಇಲ್ಲಿಂದ ಪ್ರತಿದಿನ ಬಸ್‌ ಸರ್ವಿಸ್‌ ಇದೆ. ಅಂತಹ ಎಲ್ಲ ಬಸ್‌ಗಳಿಗೆ ಸಿಂಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಡಿಪೊ ಮೆನೇಜರ್‌ ರಾಜೇಶ್‌ ತಿಳಿಸಿದ್ದಾರೆ.

Advertisement

ಜಾಥಾ
ಮಾ.14ರಂದು ಕೊಲ್ಲೂರಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಬೃಹತ್‌ ಪ್ರಮಾಣದ ಜಾಥಾ ನಡೆಯಲಿದೆ. ಇದರಲ್ಲಿ ಆಶಾ ಕಾರ್ಯಕರ್ತೆಯರು ಕೂಡಾ ಭಾಗವಹಿಸಲಿದ್ದಾರೆ. ಕೊಲ್ಲೂರಿಗೆ ದೇಶದ ನಾನಾ ಭಾಗದಿಂದ ಭಕ್ತರು ಆಗಮಿಸುವ ಕಾರಣ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರ ಆಯುಷ್‌ ವೈದ್ಯರಿಗೆ ಕೊರೊನಾ ಕುರಿತಾದ ಕಾರ್ಯಾಗಾರ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ತಿಳಿಸಿದ್ದಾರೆ. ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದರೆ ನಿಗಾ ವಹಿಸಲಾಗಿದೆ. ಎಲ್ಲೆಡೆ ಕಣ್ಗಾವಲು ಇರಿಸಲಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಸಿಬಂದಿಗೂ ಸೂಚನೆ ನೀಡಲಾಗಿದೆ.

ಮೊದಲೇ ಪರೀಕ್ಷೆ
ಶಾಲಾ ಪರೀಕ್ಷೆಗಳನ್ನು ಅವಧಿಗಿಂತ ಮೊದಲೇ ಮಾಡುವಂತೆ ಶಿಕ್ಷಣ ಇಲಾಖೆ ಈಗಾಗಲೇ ಸೂಚನೆ ರವಾನಿಸಿದೆ. 1ನೇ ತರಗತಿಯಿಂದ 9ನೇ ತರಗತಿವರೆಗೆ ಮಾ.23ರ ಮೊದಲು ಪರೀಕ್ಷೆಗಳು ಮುಗಿದು ರಜೆ ದೊರೆಯುವಂತೆ ಮಾಡಬೇಕೆಂದು ತಿಳಿಸಲಾಗಿದೆ.

ಆತಂಕ ಅನಗತ್ಯ
ಈ ವರೆಗೆ ಯಾರಲ್ಲೂ ಯಾವುದೇ ಲಕ್ಷಣ ಈ ಪ್ರದೇಶದಲ್ಲಿ ಕಂಡುಬಂದಿಲ್ಲ. ತೀವ್ರ ಕಣ್ಗಾವಲು ಇರಿಸಲಾಗಿದೆ. ಕಾರ್ಯಾಗಾರ ನಡೆಸಲಾಗಿದೆ. ಜಾಗೃತಿ ಮೂಡಿಸಲಾಗಿದೆ. ಎಲ್ಲ ವೈದ್ಯರಿಗೆ ಸೂಚನೆ ನೀಡಲಾಗಿದೆ.
– ಡಾ| ನಾಗಭೂಷಣ್‌ ಉಡುಪ, ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next