ಕರಾಚಿ: 40 ವರ್ಷದ ಮಹಿಳೆಯೊಬ್ಬಳು ವೃದ್ಧನೊಬ್ಬನ ಛಿದ್ರಗೊಂಡ ದೇಹದೊಂದಿಗೆ ಗಾಢವಾಗಿ ನಿದ್ದೆಗೆ ಜಾರಿದ ಘಟನೆ ಪಾಕಿಸ್ಥಾನದ ಕರಾಚಿಯ ಸದ್ದಾರ್ ಆಪಾರ್ಟ್‍ಮೆಂಟ್ ಒಂದರಲ್ಲಿ ನಡೆದಿದೆ.
ಪೊಲೀಸರು ಪ್ಲಾಟ್‍ನ ಬಾಗಿಲು ತೆರೆದಾಗ ಬೆಚ್ಚಿ ಬಿದ್ದಿದ್ದು, ಅಲ್ಲಿ 70 ವರ್ಷದ ವೃದ್ಧನ ಛಿದ್ರಗೊಂಡ ದೇಹದ ಬಳಿ 40 ವರ್ಷದ ಮಹಿಳೆಯೊಬ್ಬಳು ಗಾಢ ನಿದ್ರೆಗೆ ಜಾರಿದ್ದಳು.
ಛಿದ್ರಗೊಂಡ ದೇಹದ ಬಳಿಯಿದ್ದ ಮಹಿಳೆಯನ್ನು ಪ್ರಮುಖ ಆರೋಪಿಯಾಗಿ ವಶಕ್ಕೆ ಪಡೆದಿದ್ದು, ಈ ವಾರವೇ ಕೊಲೆ ನಡೆಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಆರಂಭದಲ್ಲಿ ವೃದ್ಧನನ್ನು ತನ್ನ ಪತ್ನಿ ಎಂದು ಅಧಿಕಾರಿಗಳಿಗೆ ಹೇಳಿದ್ದಳು. ತದನಂತರ ವೃದ್ಧ ತನ್ನ ಬಾವ ಎಂದಿದ್ದು, ಬಳಿಕ ಸಂಬಂಧವನ್ನು ಅಲ್ಲಗೆಳೆದಿದ್ಧಾಳೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಮಹಿಳೆಯು ನಶೆಯಲ್ಲಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ರಗ್ಸ್ ಸೇವಿಸಿದ್ದಳೆಂದು ಶಂಕಿಸಲಾಗಿದೆ ಎಂದು ಪಾಕಿಸ್ಥಾನದ ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.