Advertisement

ಹಳೆ ಚಿನ್ನವನ್ನು ಬದಲಾಯಿಸುವ ನೆಪದಲ್ಲಿ ನಕಲಿ ಚಿನ್ನಾಭರಣ ಕೊಟ್ಟು ವಂಚನೆ: ಇಬ್ಬರ ಬಂಧನ

05:39 PM Aug 16, 2022 | Team Udayavani |

ಪಣಜಿ: ಹಳೆ ಚಿನ್ನವನ್ನು ಬದಲಾಯಿಸುವ ನೆಪದಲ್ಲಿ ಪಣಜಿಯಲ್ಲಿ ಆಭರಣ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದ ಗುಜರಾತ್ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಶನಿವಾರ ಬೆಳಿಗ್ಗೆ 11.30 ರ ಸುಮಾರಿಗೆ ಪಣಜಿಯ ಎಂ.ಜಿ ರಸ್ತೆಯಲ್ಲಿರುವ ತನ್ನ ಅಂಗಡಿಗೆ ಅಪರಿಚಿತ ಮಹಿಳೆ ಮತ್ತು ಇಬ್ಬರು ಪುರುಷರು  ಪ್ರವೇಶಿಸಿದ್ದಾರೆ. ಗ್ರಾಹಕರಂತೆ ಬಿಂಬಿಸಿಕೊಂಡ ಮೂವರು ಸೇಲ್ಸ್ ಎಕ್ಸಿಕ್ಯೂಟಿವ್‍ಗೆ ತಮ್ಮ ಹಳೆಯ ಚಿನ್ನವನ್ನು ಮಾರಾಟ ಮಾಡಲು ಬಯಸುವುದಾಗಿ ಹೇಳಿ 12 ಲಕ್ಷ ರೂಪಾಯಿ ಮೌಲ್ಯದ ಹೊಸ ಚಿನ್ನಾಭರಣಗಳೊಂದಿಗೆ ಅಂಗಡಿಯಿಂದ ಹೊರ ಹೋದರು. ಬಳಿಕ ಹಳೆ ಚಿನ್ನಾಭರಣ ಕರಗಿಸಿ ಚಿನ್ನಾಭರಣ ವ್ಯಾಪಾರಿಗಳು ಪರಿಶೀಲನೆ ನಡೆಸಿದಾಗ ನಕಲಿ ಚಿನ್ನಾಭರಣ ಎಂಬುದು ಪತ್ತೆಯಾಗಿದೆ. ತಾನು ಮೋಸ ಹೋಗಿರುವುದಾಗಿ ಜ್ಯುವೆಲರ್ ನಿಕುಂಜ್ ಗುಪ್ತಾ  ಪಣಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಮಾಹಿತಿ ಕಲೆಹಾಕಿದ್ದು, ಆರೋಪಿಗಳಾದ ಕೇಶುಭಾಯಿ ಪರ್ಮಾರ್ (32), ಮುಕೇಶ್‍ಭಾಯ್ ಪರ್ಮಾರ್ (26) ಗುಜರಾತ್‍ನ ಪೋರ್ ಬಂದರ್ ಮೂಲದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಣಜಿ ಪೊಲೀಸ್ ಇನ್ಸ್‍ಪೆಕ್ಟರ್ ನಿಖಿಲ್ ಪಾಲೇಕರ್ ನೇತೃತ್ವದ ತಂಡ ಸುದೇಶ್ ನಾಯ್ಕ್, ರವರ ನೇತೃತ್ವದಲ್ಲಿ ಈ ಪ್ರಕರಣವನ್ನು ಬೇಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next