ಮುಂಬಯಿ: ವಾಣಿಜ್ಯ ನಗರಿಯಲ್ಲಿ ಸುಮಾರು ಶತಮಾನದ ಸೇವೆಯಲ್ಲಿ ನಿರತಗೊಂಡಿರುವ ಕೂರ್ಗ್ ಅಸೋಸಿಯೇಶನ್ ಮುಂಬಯಿ ಇದರ 97 ನೇ ವಾರ್ಷಿಕ ಸಂಪ್ರದಾ ಯಿಕ “ಪುಥರಿ ಉತ್ಸವ -2018′ (ತೆನೆಹಬ್ಬ) ಸಂಭ್ರಮವು ಜ. 7ರಂದು ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ನಡೆಯಿತು.
ಉಪನಗರ ಐರೋಲಿಯ ಅಸೋಸಿಯೇಶನಿನ ಕೂರ್ಗ್ ಭವದಲ್ಲಿ ಪೂರ್ವಾಹ್ನ ಸಮುದಾಯದ ಹಿರಿಯ ಮುಂದಾಳುಗಳನ್ನೊಳಗೊಂಡು ಅಧ್ಯಕ್ಷ ಬೊಪ್ಪಂಡ ಅಪ್ಪಾಜಿ ಅವರು ಕುಲ ಆರಾಧ್ಯ ದೇವರಾದ ಇಗ್ಗುತ್ತಪ್ಪ ಮತ್ತು ಕಾವೇರಿ ದೇವತೆಗೆ ಪೂಜೆ ನೆರವೇರಿಸಿ, ಪೂಜೆ, ಪ್ರಾರ್ಥನೆಗಳೊಂದಿಗೆ ಐತಿಹ್ಯ “ಪುಥರಿ ಉತ್ಸವ’ಕ್ಕೆ ಚಾಲನೆ ನೀಡಿದರು. ಬಳಿಕ ಗೇಮ್ಸ್ ಸಂಗೀತ, ನೃತ್ಯಾವಳಿ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಪುರುಷರು ಪರಂಪರಿಕಾ ಕುಪಿಯಾ ಛಾಲೆ ಹಾಗೂ ಮಹಿಳೆಯರು ಸಾಂಪ್ರದಾಯಿಕ ಕೊಡಗು ಉಡುಪು ಧರಿಸಿ ಗದ್ದೆಯಲ್ಲಿನ ಭತ್ತದ ತೆನೆಯನ್ನು ಪೂಜಿಸಿ ಬಳಿಕ ಸಂಭ್ರಮಾಚರಣೆಯನ್ನು ನಾಡಿಗೆ ಸಾರುವ ಪದ್ಧತಿ ಅನುಸಾರ ಗುಂಡು ಹಾರಿಸಿ, ಕೋಲಾಟ, ಕತ್ತಿವರಸೆ ಮೂಲಕ ದೇವರನ್ನು ಕರೆಯುತ್ತಾ ಕದಿರನ್ನು ತಂದು ದೇವರಿಗೆ ಸಮರ್ಪಿಸಿ ಮನೆ ಬೆಳಗಿಸಲಾಯಿತು. ಊರಿನ ಹಾಗೂ ಕುಂಟುಂಬದ ಹಿರಿಯರಿಗೆ ನಮಿಸಿ, ಉಮ್ಮತ್ ಆಟ (ಮಹಿಳಾ ನೃತ್ಯ), ಹೊಸ ಬೆಳೆಯೊಂದಿಗೆ ಉಟೋಪಚಾರಗೈದು “ಪುಥರಿ ಉತ್ಸವ’ವನ್ನು ಆಚರಿಸಿದರು.
ವಿಶ್ವಸ್ಥ ಸದಸ್ಯರುಗಳಾದ ಪಂಡಂಡ ರಮೇಶ್, ಬಿದ್ದಂಡ್ಡ ಜಗ್‌ದೀಪ್ ನಂಜಪ್ಪ, ಕುಪ್ಪಂಡ್ಡ ಮುದ್ದಯ್ಯ, ನಪಂಡ ರಮೇಶ್, ಬಿದ್ದಂಡ ಲೇಖ ನಂಜಪ್ಪ, ಕಲ್ಲಿಚಂಡ ಐಯ್ಯಣಾ, ಮನೆಪಂಡ ಸೋಮಯ್ಯ, ಅಧ್ಯಕ್ಷ ಬೊಪ್ಪಂಡ ಅಪ್ಪಾಜಿ, ಉಪಾಧ್ಯಕ್ಷರುಗಳಾದ ಪಂಡಂಡ ಪುಷ್ಪಾ ಮತ್ತು ಕುಪ್ಪಂಡ ಕವಿತಾ, ಗೌರವ ಕಾರ್ಯದರ್ಶಿ ಬೊಲ್ಲಚೆಟ್ಟಿರ ಮಂದಣ್ಣ, ಕೋಶಾಧಿಕಾರಿ ಅರೆಡ ರಾಜ, ಜೊತೆ ಕಾರ್ಯದರ್ಶಿ ಮುಕ್ಕಟಿರ ಸೋಮಯ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಚಿತ್ರಾ ಸುಬ್ಬಯ್ಯ, ಬಿದ್ದಂಡ ಮಾದಯ್ಯ, ಕಲಿಮಾಡ ಕ್ಯಾ| ರಾಮ ನಂಜಪ್ಪ, ಮೆಚಂಡ ಕರುಂಬಯ್ಯ, ಮೇಜರ್ ಜನರಲ್ ಬಚಿಮಡ ಕರಿಯಪ್ಪ, ಪಿ. ಕೆ. ಕರುಂಬಯ್ಯ, ಪಟ್ಟಂಡ ಜಯ್‌ಕುಮಾರ್ ಮತ್ತಿತರ ಗಣ್ಯರು ಸಂದಭೋìಜಿತವಾಗಿ ಮಾತನಾಡಿ ಹಬ್ಬದ ಸಂದೇಶವನ್ನಿತ್ತು ಎಲ್ಲರಿಗೂ ಶುಭಹಾರೈಸಿದರು.
ಪ್ರಿಯಾ ಎಂ. ಪೂವಯ್ಯಗ್ ಮತ್ತು ಕಾವ್ಯಾ ಎಂ. ಪೂವಯ್ಯಗ್ ಪ್ರಾರ್ಥನೆಯನ್ನಾಡಿದರು. ಬೊಪ್ಪಂಡ ಅಪ್ಪಾಜಿ ಸ್ವಾಗತಿಸಿದರು. ಪುಥರಿ ಪ್ರಾಮುಖ್ಯತೆ ಬಗ್ಗೆ ಕಿರಿಯಮಡ ತಮ್ಮಯ್ಯ ವಿವರಿಸಿದರು. ಪಂಡಂಡ ರಮೇಶ್ ಹಾಗೂ ನಪಂಡ ರಮೇಶ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಜಗ್ಗಿ ಮಂಜಯ್ಯ ಕು| ಅಕ್ಷಯ ಚೆಂಗಯ್ಯ, ಮುಕತಿರ ಸೋಮಯ್ಯ, ಲೇಖಾ ನಂಜಪ್ಪ ಮತ್ತು ಮಾ| ನಿತಿನ್ ಚೆಂಗಯ್ಯ ಅತಿಥಿಗಳನ್ನು ಪರಿಚಯಿಸಿದರು. ಕು| ಬಾಲ್ಯ ಮೆಡಿರಿರ ಕೊಡವ ಹಾಡುಗಳನ್ನಾಡಿದರು. ಸಾಂಸ್ಕೃತಿಕ ನೃತ್ಯಾವಳಿ ಸದಸ್ಯ ಬಾಂಧವರಿಂದ ನಡೆಯಿತು. ಗೌರವ ಕಾರ್ಯದರ್ಶಿ ಬೊಲ್ಲಚೆಟ್ಟಿರ ಮಂದಣ್ಣ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್