ಅಹ್ಮದಾಬಾದ್: ಜನಧನ್, ಆಧಾರ್ ಹಾಗೂ ಮೊಬೈಲ್ ಸೌಲಭ್ಯಗಳನ್ನು (ಜೆಎಎಂ) ಬಳಸಿಕೊಂಡು ಅನುಷ್ಠಾನಗೊಳಿಸಲಾಗುವ ಕೇಂದ್ರ ಸರ್ಕಾರಿ ಯೋಜನೆಗಳನ್ನು ತನ್ಮೂಲಕ ಜಾರಿಗೊಳಿಸಲು ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಜೆಎಎಂ ಅಡಿಯಲ್ಲಿ ಕೇಂದ್ರ ಸರ್ಕಾರದ ಅನುದಾನಗಳು ನಿರ್ದಿಷ್ಟ ಫಲಾನುಭವಿಗಳಿಗೆ ನೇರವಾಗಿ ತಲುವಂಥ ವ್ಯವಸ್ಥೆಯಿದ್ದು, ಅನುದಾನವು ಮಧ್ಯವರ್ತಿಗಳ ಪಾಲಾಗುವುದನ್ನು ತಪ್ಪಿಸಲಾಗಿದೆ.
ಇದನ್ನೂ ಓದಿ:ವಿದೇಶ ಪ್ರಯಾಣ ಮಾಡಿದವರಿಗೇ ಕೋವಿಡ್ ಸೋಂಕು ಪತ್ತೆ: ಮಾಸ್ಕ್ ಕಡ್ಡಾಯ!
ಇಂಥ ವ್ಯವಸ್ಥೆಯನ್ನು ಕೇಂದ್ರದ 52 ಇಲಾಖೆಗಳ ವ್ಯಾಪ್ತಿಯಲ್ಲಿರುವ 300 ಯೋಜನೆಗಳಿಗೆ ಅಳವಡಿಸಲಾಗಿದೆ.
ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವ ಅನುಕೂಲವನ್ನು ಸಹಕಾರಿ ಕ್ಷೇತ್ರದ ಬ್ಯಾಂಕುಗಳಿಗೂ ನೀಡಲು ನಿರ್ಧರಿಸಲಾಗಿದೆ ಎಂದು ಶಾ ಹೇಳಿದ್ದಾರೆ.