Advertisement

ಜಿಲ್ಲೆಯಲ್ಲಿ ಜಲಜೀವನ್‌ ಪ್ರಗತಿಗೆ ಸಹಕಾರ ಅಗತ್ಯ

06:06 PM May 06, 2022 | Team Udayavani |

ಚಾಮರಾಜನಗರ: ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯ. ಗ್ರಾಮದ ಪ್ರತಿಯೊಂದು ಕುಟುಂಬದಿಂದ ಆಧಾರ್‌ ಕಾರ್ಡ್‌ ಸಂಗ್ರಹ ಮತ್ತು ಗ್ರಾಮ ಪಂಚಾಯಿತಿಗಳ ವಾರ್ಡಿನ ಸದಸ್ಯರೇ ಸಮುದಾಯ ವಂತಿಗೆ ಸಂಗ್ರಹಣೆ ಮಾಡುವಂತೆ ಪ್ರೇರೇಪಿಸುವುದು ಬೆಂಬಲ ಸಂಸ್ಥೆಗಳ ಬಹುಮುಖ್ಯವಾದ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಹೇಳಿದರು.

Advertisement

ಗುರುವಾರ, ನಗರದ ನಿಜಗುಣ ರೆಸಿಡೆನ್ಸಿಯ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗ ದೊಂದಿಗೆ ಜಲ ಜೀವನ್‌ ಮಿಷನ್‌ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಯೋಜನೆಗಳಡಿಯಲ್ಲಿ ಐ.ಎಸ್‌.ಆರ್‌.ಎ ಬೆಂಬಲ ಸಂಸ್ಥೆಯ ಸಿಬ್ಬಂದಿಗೆ ಆಯೋಜಿಸಲಾಗಿರುವ ಮೂರು ದಿನಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯೋಜನೆಯ ಮಾಹಿತಿ ನೀಡಿ: ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ ಯೋಜನೆಯ ಕಾಮಗಾರಿ ಗಳು ಪ್ರಗತಿಯಲ್ಲಿವೆ. ಜನಸಮುದಾಯಕ್ಕೆ ಯೋಜನೆಯ ಮಾಹಿತಿ ನೀಡುವ ಕರ್ತವ್ಯ, ಜವಾಬ್ದಾರಿಗಳು ಹೆಚ್ಚಿವೆ. ಪೈಪ್‌ಲೈನ್‌ ವ್ಯವಸ್ಥೆ, ಗುಣಮಟ್ಟದ ಬಗ್ಗೆ ಹಾಗೂ ಯೋಜನೆಯ ಕುರಿತು ಜನರಿಗೆ ಹೆಚ್ಚಿನ ತಿಳಿವಳಿಕೆ ನೀಡಬೇಕು.ಸಮುದಾಯದ ಜನರ ಸಹಭಾಗಿತ್ವ, ಜನಪ್ರತಿ ನಿಧಿಗಳ ಸಹಕಾರ ಅಗತ್ಯವಾಗಿದೆ ಎಂದರು.

ಗ್ರಾಪಂನಲ್ಲಿ ಸಮಿತಿ ರಚನೆ: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕಾಮಗಾರಿಯು ಆಯಾ ವಾರ್ಡ್‌ಗಳಲ್ಲಿ ಸರಿಯಾಗಿ ನಡೆಯುತ್ತಿದೆಯೇ?
ಕಾಮಗಾರಿಯಲ್ಲಿ ಏನಾದರೂ ಸಮಸ್ಯೆ ಇದೆಯೆ? ಎಂಬ ಬಗ್ಗೆ ಸದಸ್ಯರು ಪರಿಶೀಲಿಸುವಂತಾಗಬೇಕು.ಪ್ರತಿ ಗ್ರಾಮಗಳಲ್ಲಿ ನೀರಿನ ಮಾದರಿಯ ಗುಣಮಟ್ಟವನ್ನು ಪರೀಕ್ಷಿಸಬೇಕು ಎಂದು ಅವರು ಸಲಹೆ ಮಾಡಿದರು.

ಜನರಿಗೆ ಶುದ್ಧ ಮತ್ತು ಸುರಕ್ಷಿತವಾದ ನೀರು:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಗಂಗಾಧರಯ್ಯ ಮಾತನಾಡಿ, ಜಲಜೀವನ್‌ ಮಿಷನ್‌ ಯೋಜನೆಯನ್ನು ವೈಜ್ಞಾನಿಕವಾಗಿ ಅಳವಡಿಸುತ್ತಿರುವುದರಿಂದ ಹಲವು ಪ್ರಯೋಜನಗಳಿವೆ. ಎಲ್ಲಾ ಮನೆಗಳಿಗೂ ಸ್ಟ್ಯಾಂಡ್‌ ಪೋಸ್ಟ್‌ ಕಲ್ಪಿಸ
ಬೇಕು. ಪ್ರತಿಯೊಬ್ಬ ನಾಗರಿಕರಿಗೆ ಸಮಾನವಾಗಿ ಶುದ್ಧ ಮತ್ತು ಸುರಕ್ಷಿತವಾದ ನೀರನ್ನು ಒದಗಿ ಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

Advertisement

ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಜಗದೀಶ್‌, ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಮಾಲೋಚಕ ವಿ.ಎಚ್‌. ರಾಮಾಂಜನೇಯ, ಸಮಾಲೋಚಕರಾದ ಕಾಳಚಾರಿ ಹಾಗೂ ಜೋಸೆಫ್ ರೆಬೆಲೋ, ಜಲ ಜೀವನ್‌ ಮಿಷನ್‌ ಯೋಜನೆಯ ಹಿನ್ನಲೆ, ಉದ್ದೇಶ, ಜನರ ಭಾಗವಹಿಸುವಿಕೆ, ಜಲ ಮೂಲಗಳ ಬಲವರ್ಧನೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next