Advertisement

ಕಂಬಳದ ಉಳಿವಿಗೆ ಕೇಂದ್ರದಿಂದ ಸಹಕಾರ: ಸಂಸದ ನಳಿನ್‌

10:56 AM Nov 27, 2017 | |

ಪುಂಜಾಲಕಟ್ಟೆ: ತುಳು ನಾಡಿನ ಜಾನಪದ ಕ್ರೀಡೆ ಕಂಬಳ ಉಳಿಸಿ ಬೆಳೆಸುವಲ್ಲಿ ಕೇಂದ್ರ ಸರಕಾರದ ವತಿಯಿಂದ ಸಂಪೂರ್ಣ ಸಹಕಾರ ದೊರಕಿಸಿಕೊಡಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬಂಟ್ವಾಳ-ಬೆಳ್ತಂಗಡಿ ತಾಲೂಕುಗಳ ಗಡಿ ಭಾಗದಲ್ಲಿರುವ ಎಲಿಯ ನಡುಗೋಡು ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡೆದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅರಣ್ಯ ಸಚಿವ ಬಿ. ರಮಾನಾಥ ರೈ ಮಾತನಾಡಿ, ರಾಜಾಶ್ರಯದಿಂದ ಜನಾಶ್ರಯ ಮೂಲಕ ಬೆಳೆದು ಬಂದಿರುವ ಕೃಷಿಕರ ನೆಚ್ಚಿನ ಗ್ರಾಮೀಣ ಕ್ರೀಡೆ ಕಂಬಳ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡ ಅಧ್ಯಾದೇಶ ಮೂಲಕ ಸ್ಪಂದಿಸಿದೆ ಎಂದರು.

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾೖಕ್‌, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಜಿಲ್ಲಾ ಕಂಬಳ ಸಮಿತಿ ಗೌರವ ಸಲಹೆಗಾರ ಗುಣಪಾಲ ಕಡಂಬ, ಮಾಜಿ ಅಧ್ಯಕ್ಷ ಬೆಳುವಾಯಿ ಸದಾನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್‌ ಕಂಗಿನಮನೆ, ಮೂಡಬಿದಿರೆ ಪುರಸಭೆ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಮೂಡ ಅಧ್ಯಕ್ಷ ಸುರೇಶ ಪ್ರಭು, ಕರಿಂಜೆ ವಿನು ವಿಶ್ವನಾಥ ಶೆಟ್ಟಿ , ಐಪಿಎಲ್‌ ಕ್ರಿಕೆಟ್‌ ಆಟಗಾರ ಕೆ.ಸಿ. ಕಾರ್ಯಪ್ಪ, ಪ್ರೊ ಕಬಡ್ಡಿ ಆಟಗಾರ ಸುಕೇಶ್‌ ಹೆಗ್ಡೆ, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲು, ಕಿರುತೆರೆ ನಟ ದಿಲೀಪ್‌ ಶೆಟ್ಟಿ, ಎಪಿಎಂಸಿ ಸದಸ್ಯ ಎಂ. ಪದ್ಮರಾಜ ಬಲ್ಲಾಳ್‌, ಬಂಟ್ವಾಳ ರೋಟರಿ ಕ್ಲಬ್‌ ಅಧ್ಯಕ್ಷ ಸಂಜೀವ ಪೂಜಾರಿ, ಲೊರೆಟ್ಟೊ ರೋಟರಿ ಕ್ಲಬ್‌ ಅಧ್ಯಕ್ಷ ಅವಿಲ್‌ ಮಿನೇಜಸ್‌, ಗವರ್ನರ್‌ ಪ್ರತಿನಿಧಿ ಎನ್‌. ಪ್ರಕಾಶ ಕಾರಂತ, ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್‌, ಅಜ್ಜಿಬೆಟ್ಟು ಪದವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು, ಕುಕ್ಕಿಪಾಡಿ ಗ್ರಾ. ಪಂ. ಅಧ್ಯಕ್ಷ ದಿನೇಶ ಸುಂದರ ಶಾಂತಿ, ಗುತ್ತಿಗೆದಾರ ಉದಯ ಕುಮಾರ್‌ ರಾವ್‌, ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಕ್ಯಾ| ಬ್ರಿಜೇಶ್‌ ಚೌಟ, ಹರೀಶ ಪೂಂಜ, ಟಿ.ರಂಜನ್‌ ಗೌಡ, ಜೋಯ್ಲಸ್‌ ಡಿ’ಸೋಜಾ, ಬದ್ರಿನಾಥ್‌ ಕಾಮತ್‌, ಜೆಡಿಎಸ್‌ ಮುಖಂಡ ಅಶ್ವಿ‌ನ್‌ ಜೆ.ಪಿರೇರ, ಪ್ರಮುಖರಾದ ಜಗನ್ನಾಥ ಶೆಟ್ಟಿ ಚಾವಡಿಮನೆ, ಕೆ. ಮಹಾಬಲ ಆಳ್ವ, ಹೇಮಚಂದ್ರ ಗೌಡ, ತಾ.ಪಂ. ಮಾಜಿ ಸದಸ್ಯ ವಸಂತ ಕುಮಾರ್‌ ಅಣ್ಣಳಿಕೆ, ದುರ್ಗಾದಾಸ್‌ ಶೆಟ್ಟಿ ಮಾವಂತೂರು, ನವೀನ್‌ಚಂದ್ರ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.

ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಪ್ರಧಾನ ಕಾರ್ಯದರ್ಶಿ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ತಾ| ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಕಾರ್ಯದರ್ಶಿ ಸಂದೇಶ ಶೆಟ್ಟಿ ಪೊಡುಂಬ, ಕೋಶಾಧಿಕಾರಿ ರಾಘವೇಂದ್ರ ಭಟ್‌ ಹೊಕ್ಕಾಡಿಗೋಳಿ, ಜತೆ ಕಾರ್ಯದರ್ಶಿ ಪುಷ್ಪರಾಜ ಜೈನ್‌ ನಡ್ಯೋಡಿ, ಪುಂಜಾಲಕಟ್ಟೆ ಠಾಣಾಧಿಕಾರಿ ರಾಮ ನಾಯ್ಕ ಉಪಸ್ಥಿತರಿದ್ದರು.

Advertisement

ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್‌ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ವಂದಿಸಿದರು. ಸಮಿತಿ ಗೌರವ ಸಲಹೆಗಾರ, ನ್ಯಾಯವಾದಿ ಸುರೇಶ್‌ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಮೋಹನ್‌ ಕೆ. ಶ್ರೀಯಾನ್‌ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಕಂಬಳ ಕ್ರೀಡೆ ಕೃಷಿ ಚಟುವಟಿಕೆಯ ಭಾಗ
ಕಂಬಳ ಕ್ರೀಡೆ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು ಕೃಷಿಕರ ಜೀವನದ ಭಾಗವಾಗಿದೆ. ತುಳು ನಾಡಿನಲ್ಲಿ ಗ್ರಾಮೀಣ ಜನತೆಯ ಕೃಷಿ ಚಟುವಟಿಕೆಯ ಭಾಗವಾಗಿರುವ ಕಂಬಳದಿಂದ ಜನರು ಸಂತಸ ಪಡೆಯುತ್ತಿದ್ದು ಕಾನೂನಿನ ಚೌಕಟ್ಟಿನಲ್ಲಿ ಕಂಬಳವು ವಿಜೃಂಭಿಸಲಿ.
 – ನಳಿನ್‌ ಕುಮಾರ್‌ ಕಟೀಲು

Advertisement

Udayavani is now on Telegram. Click here to join our channel and stay updated with the latest news.

Next