Advertisement
ವಿದೇಶ, ಹೊರ ರಾಜ್ಯಗಳಿಂದ ತಾಲೂಕಿಗೆ ಬರುವ ಮಂದಿಗೆ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆಲವರು ಹೊಟೇಲ್ ವಸತಿ ಗೃಹಗಳನ್ನು ಬಯಸುತ್ತಾರೆ. ಅಂತಹವರಿಗೆ ಬದುಕು ಕೊಡುವ ಮಾನವೀಯ ಕೆಲಸ ನಮ್ಮಿಂದ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಹೊಟೇಲ್ ವಸತಿ ಗೃಹ ಇದ್ದವರು ಸಹಕರಿಸುವಂತೆ ಶಾಸಕರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈ ಮಾತನಾಡಿ, ವಿದೇಶ ಮತ್ತು ಹೊರರಾಜ್ಯಗಳಿಂದ ಬರು ವವರ ವೈದ್ಯಕೀಯ ತಪಾಸಣೆ ನಡೆಸುತ್ತೇವೆ. 14 ದಿನ ಕ್ವಾರಂಟೈನ್ ಮುಗಿದ ಬಳಿಕವೂ ಗಂಟಲ ದ್ರವ ಪರೀಕ್ಷೆ ನಡೆಯಲಿದೆ. ಪ್ರತಿ ರೂಮ್‌ಗಳನ್ನು ಸ್ಯಾನಿಟೈಸ್ ಮಾಡಲಾಗು ತ್ತದೆ ಎಂದರು. ಹೊಟೇಲ್, ವಸತಿಗೃಹದ ಮಾಲಕರು ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿಬಂದಿ ಊರಿಗೆ ಹೋಗಿದ್ದಾರೆ. ಅವರಿಗೆ ಬರಲು ವ್ಯವಸ್ಥೆಯೂ ಇಲ್ಲ. ಈ ನಿಟ್ಟಿನಲ್ಲಿ ಸ್ವತ್ಛತೆ, ಇತರ ಸೇವೆ ನೀಡಲು ಕಷ್ಟ ಆಗುತ್ತದೆ. ಜತೆಗೆ ರೂಮ್‌ಗಳ ಬಟ್ಟೆಗಳ ಸ್ವತ್ಛತೆಯನ್ನು ಖಾಸಗಿ ಸಂಸ್ಥೆಗೆ ವಹಿಸಿ ದ್ದರಿಂದ ತೊಂದರೆಯಾಗುತ್ತದೆ ಎಂದರು.
Related Articles
Advertisement
ದರ ನಿಗದಿಪಡಿಸಿಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್ ಮಾತನಾಡಿ, ಪುತ್ತೂರಿನ ಹೊಟೇಲ್ ವಸತಿ ಗೃಹದಲ್ಲಿರುವವರು 14 ದಿನ ಉಳಿದು ಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭ ಬಾಡಿಗೆ ದುಬಾರಿಯಾದರೆ ಕಷ್ಟ. ಹಾಗಾಗಿ ಲಾಡ್ಜ್ನಲ್ಲಿ ಪ್ಯಾಕೇಜ್ ದರ ನಿಗದಿ ಮಾಡಿ. ಪ್ರತಿ ರೂಂಗೂ ಸಿ.ಸಿ. ಟಿ.ವಿ., ಹೌಸ್ ಕೀಪಿಂಗ್, ಸ್ಟಾಫ್ನ ವ್ಯವಸ್ಥೆ ಮಾಡಿಸಿಕೊಳ್ಳಿ. ಅವರು ಆರೋಗ್ಯವಂತರಾಗಿದ್ದಾರೆಯೇ ಎಂದು ತಪಾಸಣೆ ಮಾಡಿಯೇ ಕಳಿಸುತ್ತೇವೆ ಎಂದು ಹೇಳಿದರು.