Advertisement

ಪರೀಕ್ಷೆ ಪಾಸಾದ ಕೂಲಿ

09:15 AM May 09, 2018 | Karthik A |

ಹೊಸದಿಲ್ಲಿ: ಕೂಲಿ ಕಾರ್ಮಿಕನೊಬ್ಬ ರೈಲ್ವೇ ನಿಲ್ದಾಣದಲ್ಲಿನ ಫ್ರೀ ವೈಫೈ ಬಳಸಿಕೊಂಡು ಕೆ.ಪಿ.ಎಸ್‌.ಸಿ. ಪರೀಕ್ಷೆ ಬರೆದಿದ್ದಾರೆ! ಎರ್ನಾಕುಲಂ ಜಂಕ್ಷನ್‌ನಲ್ಲಿ ಕಳೆದ ಐದು ವರ್ಷಗಳಿಂದ ಕೂಲಿ ಕಾರ್ಮಿಕನಾಗಿರುವ ಶ್ರೀನಾಥ್‌ ಕೆ., 2016ರಲ್ಲಿ ಈ ನಿಲ್ದಾಣದಲ್ಲಿ ಆರಂಭಿಸಲಾದ ವೈಫೈನಿಂದ ತಮ್ಮ ಮೊಬೈಲ್‌ ಮತ್ತು ಇಯರ್‌ ಫೋನ್‌ ಮೂಲಕ ಕೇರಳ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗೆ ತಯಾರಿಯನ್ನು ಮೊಬೈಲ್‌ ಮೂಲಕವೇ ಮಾಡಿ, ಈಗ ಅದರಲ್ಲಿ ಪಾಸ್‌ ಆಗಿದ್ದಾರೆ. ಶಿಕ್ಷಕರು ಪಾಠವನ್ನು ಇಯರ್‌ ಫೋನ್‌ನಲ್ಲಿ ಕೇಳಿಸಿಕೊಂಡೇ ತಯಾರಿ ನಡೆಸಿದ ಅವರೀಗ ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next