Advertisement

ಸಂಜೆ ಮಳೆಯಲ್ಲಿ ತಣ್ಣನೆಯ ಹಾಡುಗಳು

11:18 AM Feb 16, 2018 | |

ಮಳೆಗಾಲ ಶುರುವಾಗುವುದಿರಲಿ, ಇನ್ನೂ ಬೇಸಿಗೆ ಕಾಲವೇ ಶುರುವಾಗಿಲ್ಲ. ಆಗಲೇ ಅವತ್ತೂಂದು ಸಂಜೆ ಇದ್ದಿಕ್ಕಿದ್ದಂತೆ ಬೆಂಗಳೂರಿನಲ್ಲಿ ಜೋರು ಮಳೆ ಬಂದು ಬಿಟ್ಟಿತು. ಅಂಥದ್ದೊಂದು ದಿನ, ಆ ಹೊತ್ತಿನಲ್ಲಿ ಮಳೆ ಬರಬಹುದು ಎಂಬ ಕನಿಷ್ಠ ಊಹೆಯೂ ಇರದ “6 ಟು6′ ಚಿತ್ರತಂಡದವರು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭವನ್ನು ಆಯೋಜಿಸಿಬಿಟ್ಟಿದ್ದರು.

Advertisement

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪುನೀತ್‌ ರಾಜಕುಮಾರ್‌ ಬರಬೇಕಿತ್ತು. ಪುನೀತ್‌ಗಾಗಿ ಕಾಯುತ್ತಿದ್ದವರಿಗೆ, ಮಳೆ ಬಂದರೆ ಹೇಗಾಗಬೇಡ ಹೇಳಿ? ಅದೇ ಟೆನ್ಶನ್‌ ಚಿತ್ರತಂಡದವರಿಗೂ ಆಯಿತು. ಸರಿ, ಮಳೆ ನಿಲ್ಲುವಷ್ಟರಲ್ಲಿ ಮತ್ತು ಪುನೀತ್‌ ಬರುವಷ್ಟರಲ್ಲಿ ಚಿತ್ರತಂಡದವರು ಅಲ್ಲೇ ಬ್ಯಾಕ್‌ಸ್ಟೇಜ್‌ನಲ್ಲಿ ಚಿತ್ರದ ಬಗ್ಗೆ ನಾಲ್ಕು ಮಾತುಗಳನ್ನಾಡಿದರು. ಇದೊಂದು ಫ್ಯಾಮಿಲಿ ಸಿನಿಮಾ ಎಂದರೆ ತಪ್ಪಿಲ್ಲ.

ಈ ಚಿತ್ರದ ಉಸ್ತುವಾರಿಯನ್ನು “ಶಂಖನಾದ’ ಅರವಿಂದ್‌ ಅವರು ವಹಿಸಿದ್ದಾರೆ. ಅವರ ಮಗಳು ಮಾನಸ ಹೊಳ್ಳ ಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಮತ್ತೂಬ್ಬ ಮಗಳು ಕೀರ್ತನ ಚಿತ್ರಕ್ಕೆ ಹಾಡಿದ್ದಾರೆ. ಇನ್ನು ಅರವಿಂದ್‌ ಅವರ ಮೊಮ್ಮಗಳು ಲೇಖ ಹೆಸರಿನಲ್ಲಿ ಆಡಿಯೋ ಸಂಸ್ಥೆ ಪ್ರಾರಂಭಿಸಿ, ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಅಂದ ಹಾಗೆ, ಈ ಚಿತ್ರವನ್ನು ಶಿಡ್ಲಘಟ್ಟ ಶ್ರೀನಿವಾಸ್‌ ನಿರ್ದೇಶಿಸಿದ್ದಾರೆ.

ಇನ್ನು ಚಿತ್ರದಲ್ಲಿ ತಾರಕ್‌ ಪೊನ್ನಪ್ಪ, ಸಚಿನ್‌ ಮುಂತಾದವರು ಅಭಿನಯಿಸಿದ್ದಾರೆ. ರಘುನಂದನ್‌ ಮತ್ತು ಜಯಶ್ರೀ ಎನ್ನುವವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಎಲ್ಲರೂ ಎಲ್ಲರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಚಿತ್ರದ ಕುರಿತು ಮಾತನಾಡಿದ ಶಿಡ್ಲಘಟ್ಟ ಶ್ರೀನಿವಾಸ್‌, “ಇದೊಂದು ಬೆಳಿಗ್ಗೆ ಆರರಿಂದ, ಸಂಜೆ ಆರರವರೆಗಿನ ಚಿತ್ರ. ಈ 12 ಗಂಟೆ ಕಾಲಮಿತಿಯಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ.

ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಚಿತ್ರಕ್ಕಾಗಿ ಮಾನಸ ಹೊಳ್ಳ ಅವರು ನಾಲ್ಕು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಬರೀ ಹಾಡುಗಳಷ್ಟೇ ಅಲ್ಲ, ಚಿತ್ರದ ಹಿನ್ನೆಲೆ ಸಂಗೀತವನ್ನೂ ಅವರೇ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಮತ್ತು ಕೆಲಸ ಮಾಡಿರುವ ಬಹುತೇಕರು ಹೊಸಬರು. ಆದರೆ, ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದರು.

Advertisement

ಮಾತುಗಳೆಲ್ಲಾ ಮುಗಿಯುವ ಹೊತ್ತಿಗೆ ಪುನೀತ್‌ ಬಂದು ಚಿತ್ರತಂಡದವರನ್ನು ಸೇರಿಕೊಂಡರು. ಅವರ ಜೊತೆಗೆ ವಿ. ಮನೋಹರ್‌, ಕೆ. ಕಲ್ಯಾಣ್‌, ಅರ್ಜುನ್‌ ಜನ್ಯ ಸಹ ಹಾಜರಿದ್ದರು. ಎಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next