Advertisement

ಅಡುಗೆ ತಯಾರಿ…

10:22 PM Nov 18, 2019 | Lakshmi GovindaRaj |

ಎಲ್ಲರ ಮನೆಯಂತೆ ನಮ್ಮ ಮನೆಯಲ್ಲಿ ಊಟ-ತಿಂಡಿ ನಡೆಯುವುದಿಲ್ಲ. ಯಾಕೆಂದರೆ, ಈ ದಿನ ತಯಾರಿಸಿದ ಅಡುಗೆ ಮತ್ತೂಮ್ಮೆ ನಮ್ಮ ಮನೆಯಲ್ಲಿ ತಯಾರಾಗೋದು ಇನ್ನು ಒಂದು ತಿಂಗಳ ನಂತರವೇ. ಈ ವಾರ ಚಪಾತಿ ಮಾಡಿರಬಹುದು. ಆದರೆ, ಅದಕ್ಕೆ ಈ ಬಾರಿ ಮಾಡಿದ ಕರಿಯನ್ನು ಇನ್ನೊಂದು ತಿಂಗಳು ರಿಪೀಟ್‌ ಮಾಡ­ಬಾರದು. ಬೆಳಗ್ಗೆ ಹೊತ್ತು ಚಿತ್ರಾನ್ನ, ಪುಳಿಯೊಗರೆ ಮಾಡಲೇಬಾರದು.

Advertisement

ಏನಿದ್ದರೂ ರೊಟ್ಟಿ, ಚಪಾತಿ, ದೋಸೆ ಇಂಥವನ್ನೇ ಮಾಡಬೇಕು. ಅನ್ನದ ಪದಾರ್ಥ ಗಳೇನಿದ್ದರೂ ಮಧ್ಯಾಹ್ನದ ಊಟಕ್ಕೆ ಮಾತ್ರ. ಮನೆಯವರ ಇಷ್ಟಗಳೇನೆಂದು ಅರ್ಥವಾಗಿರುವುದರಿಂದ ಕಷ್ಟ ಆಗು­ವುದಿಲ್ಲ. ನಾನು ದಿನವಿಡೀ ಮನೆಯಲ್ಲೇ ಇರುತ್ತೇನೆ. ಬೆಳಗ್ಗೆ ಐದು ಗಂಟೆಗೆ ಒಲೆ ಮುಂದೆ ನಿಂತರೆ, ಶಾಲೆ, ಕಾಲೇಜು, ಆಫೀಸ್‌ಗೆ ಹೋಗುವವರಿಗೆ ಅವರು ಕೇಳಿದ ತಿಂಡಿ ತಯಾರಿಸಿ, ಹೋಟೆಲ್‌ ತಿಂಡಿ, ಕುರುಕಲು ತಿಂಡಿಗಳಿಗೆ ಆಸೆ ಪಡದ ರೀತಿಯಲ್ಲಿ ಕುರುಕಲು ತಿಂಡಿಗ ಳ ವ್ಯವಸ್ಥೆಯನ್ನೂ ಮಾಡುತ್ತೇನೆ.

ಅವರೆಲ್ಲರ ಮೆನುವಿನ ಪ್ರಕಾರ ರುಚಿರುಚಿಯಾದ ಅಡುಗೆ ತಯಾರಿಸಿವುದೇ ನನ್ನ ಅತಿ ದೊಡ್ಡ ಕಾಯಕ ವೆಂದರೆ ತಪ್ಪಾಗಲಾರದು. ಅದಕ್ಕಾಗಿ ನಾನು ಭಾನುವಾರವೇ ಸೋಮ ವಾರದ ಮೆನುವನ್ನು ಪಟ್ಟಿ ಮಾಡಿಕೊಳ್ಳುತ್ತೇನೆ. ಭಾನುವಾರ ಬೆಳಗ್ಗಿನ ಕೆಲಸ ಮುಗಿಸಿದ ನಂತರ, ತರಕಾರಿ, ದಿನಸಿ ಸಾಮಗ್ರಿ, ಮುಂತಾ ದವನ್ನೆಲ್ಲ, ಎಲ್ಲಿ ಒಳ್ಳೆಯದು ಸಿಗುತ್ತದೋ, ಅಲ್ಲಿಗೇ ಹೋಗಿ ತರುತ್ತೇನೆ.

ತರಕಾರಿಗಳನ್ನಂತೂ ನಾನೇ ಖರೀದಿಸಬೇಕು. ಮನೆಯವರು ತಂದರೆ, ಅದರಲ್ಲಿ ಹುಳುಕೇ ಎದ್ದು ಕಾಣುತ್ತದೆ! ಭಾನುವಾರ ಸಂಜೆ ಹೊರಗೆ ಹೋಗಿದ್ದರೂ, ಸ್ವಲ್ಪ ಮುಂಚಿತ ವಾಗಿಯೇ ಮನೆ ಸೇರುತ್ತೇವೆ. ಏಕೆಂದರೆ,ತರಕಾರಿ ಹೆಚ್ಚುವುದೇ ತಲೆ ನೋವಿನ ಕೆಲಸ ನನಗೆ. ದಿನಕ್ಕೆ ಮೂರು ರೀತಿಯ ಅಡುಗೆ ಆಗ ಬೇಕೆಂದರೆ, ಕಡಿಮೆಯೆಂದರೂ ಎರಡು ಗಂಟೆ ತರಕಾರಿ ಹೆಚ್ಚಲೇ ಬೇಕು. ಆಗ ನಾನೊಬ್ಬಳೇ ತರಕಾರಿ ಹೆಚ್ಚುವುದಿಲ್ಲ.

ಯಜಮಾನರೂ ಸಹಾಯ ಮಾಡುತ್ತಾರೆ. ಸೋಮವಾರಕ್ಕೆ ಅವರಿಂದ ಸಹಾಯ ದೊರೆ ತರೂ ಮುಂದಿನ ಶನಿವಾರದವರೆಗೆ ನಾನೊಬ್ಬಳೇ ನಿಭಾಯಿಸಬೇಕು. ಹೆಂಗಸರೇನು, ತಂದಿದ್ದನ್ನು ಬೇಯಿಸಿ ಹಾಕ್ತಾರೆ ಅಷ್ಟೆ ಎಂಬ ಭಾವ ಕೆಲವರಿಗಿದೆ. ಆದರೆ, ಆ “ಬೇಯಿಸುವುದು’ ಎಷ್ಟು ಕಷ್ಟ ಎಂದು ಅವರಿಗೇನು ಗೊತ್ತು? ದಿನಾ ಬೆಳಗ್ಗೆ ಕನಿಷ್ಠ ನಾಲ್ಕು ಗಂಟೆ ಒಲೆ ಮುಂದೆ ನಿಲ್ಲುವುದು ಸಾಮಾನ್ಯ ಕೆಲಸವೇ?

Advertisement

* ವೇದಾವತಿ ಎಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next