Advertisement

ಮಸ್ತ್ ಐಟಂ : ನಿಮ್ಮ ಹೊಟ್ಟೆಗೆ, ಅದರ ಪ್ರೀತಿಗೆ

09:14 AM Apr 25, 2019 | Hari Prasad |

ಬೂದು ಕುಂಬಳಕಾಯಿ ಸಾಂಬಾರ್‌ನ ರುಚಿಗೆ ಮನಸೋಲದವರಿಲ್ಲ. ಅಂತೆಯೇ, ಬೂದುಗುಂಬಳ ಬಳಸಿ ಹಲ್ವ ಮಾಡುವುದು ಎಲ್ಲರಿಗೂ ಗೊತ್ತು. ಬರ್ಫಿ, ಲಡ್ಡುವನ್ನು ಕೂಡಾ ಬೂದುಗುಂಬಳದಿಂದ ತಯಾರಿಸಬಹುದು. ಅದರ ರೆಸಿಪಿ ಇಲ್ಲಿದೆ. ಜೊತೆಗೆ, ಸೋರೆಕಾಯಿಯಿಂದ ಮಾಡಬಹುದಾದ ಎರಡು ರುಚಿಕರ ರೆಸಿಪಿಗಳೂ ಇವೆ…

Advertisement

ಸೋರೆಕಾಯಿ ಪೂರಿ
ಬೇಕಾಗುವ ಸಾಮಗ್ರಿ: ಸೋರೆಕಾಯಿ ತುರಿ- 1/2 ಕಪ್‌, ಗೋಧಿ ಹಿಟ್ಟು- 1 ಕಪ್‌, ಉಪ್ಪು- 1 ಚಮಚ, ಓಮದ ಹುಡಿ- 2 ಚಿಟಿಕೆ, ಮೆಣಸಿನ ಪುಡಿ- 2 ಚಮಚ, ಅರಿಶಿನ ಹುಡಿ- 1/4, ಬಡೇ ಸೋಂಪು (ಅಜವಾನ)-1/2 ಚಮಚ, ಕೊತ್ತಂಬರಿ ಸೊಪ್ಪು, ಕರಿಯಲು ಎಣ್ಣೆ.


ಮಾಡುವ ವಿಧಾನ: ಸಿಪ್ಪೆ ತೆಗೆದ ಸೋರೆಕಾಯಿಯನ್ನು ತುರಿದು, ನೀರನ್ನು ಹಿಂಡಿ ತೆಗೆಯಿರಿ. ಅದಕ್ಕೆ ಗೋಧಿಹಿಟ್ಟು, ಉಪ್ಪು, ಓಮದ ಪುಡಿ, ಅರಿಶಿನ, ಮೆಣಸಿನ ಪುಡಿ, ಅಜವಾನ, ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ, 20 ನಿಮಿಷ ಹಾಗೇ ಬಿಡಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ, ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ.

ಬೂದು ಕುಂಬಳ ಲಡ್ಡು
ಬೇಕಾಗುವ ಸಾಮಗ್ರಿಗಳು: ಕುಂಬಳಕಾಯಿ ತುರಿ- 3 ಕಪ್‌, ಸಕ್ಕರೆ- 3 ಕಪ್‌, ತೆಂಗಿನತುರಿ- 1 ಕಪ್‌, ತುಪ್ಪ- 3 ಚಮಚ, ಏಲಕ್ಕಿ ಪುಡಿ, ಬಾದಾಮಿ ಪುಡಿ, ಗೋಡಂಬಿ ಪುಡಿ- 1/2 ಕಪ್‌, ಒಣ ದ್ರಾಕ್ಷಿ, ಫ‌ುಡ್‌ ಕಲರ್‌- 2 ಚಿಟಿಕೆ.


ಮಾಡುವ ವಿಧಾನ: ಬೂದು ಕುಂಬಳಕಾಯಿಯ ಸಿಪ್ಪೆ ತೆಗೆದು ತುರಿದುಕೊಳ್ಳಿ. ಸ್ಟೌ ಮೇಲೆ ಪಾತ್ರೆ ಇಟ್ಟು, ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಕುಂಬಳಕಾಯಿ ತುರಿ ಸೇರಿಸಿ, ಗಟ್ಟಿಯಾಗುವವರೆಗೆ ಮಗುಚಿ. ಮಿಶ್ರಣವು ಬೆಂದು ಗಟ್ಟಿಯಾದ ನಂತರ ನಂತರ ಡ್ರೈ ಫ‌ೂÅಟ್ಸ್‌ ಪುಡಿ ಸೇರಿಸಿ ಕೆಳಗಿಳಿಸಿ, ತಣ್ಣಗಾಗಲು ಬಿಡಿ. ತೆಂಗಿನ ತುರಿಯನ್ನು ಹುರಿದು ಪುಡಿ ಮಾಡಿಕೊಂಡು, ತಣ್ಣಗಾದ ಮಿಶ್ರಣಕ್ಕೆ ಸೇರಿಸಿ, ಡ್ರೈ ಫ್ರೂಟ್ಸ್‌ ಪುಡಿ ಬೆರೆಸಿ, ಒಣ ದ್ರಾಕ್ಷಿಯನ್ನು ಸೇರಿಸಿ ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿ.

ಸೋರೆಕಾಯಿ-ಟೊಮ್ಯಾಟೊ ಸ್ವೀಟ್‌ ಗ್ರೇವಿ
ಬೇಕಾಗುವ ಸಾಮಗ್ರಿ: ಸೋರೆಕಾಯಿ- 1/2 ಕೆಜಿ, ಬಟಾಣಿ – 100 ಗ್ರಾಂ, ಟೊಮ್ಯಾಟೊ- 1/4 ಕೆಜಿ, ಗರಂ ಮಸಾಲ ಪುಡಿ- 1 ಚಮಚ, ಹಸಿ ಮೆಣಸಿನಕಾಯಿ- 4, ಶುಂಠಿ- ಬೆಳ್ಳುಳ್ಳಿ ಪೇಸ್‌- 1 ಚಮಚ, ಸಾಸಿವೆ, ಅರಿಶಿನ ಪುಡಿ, ಜೀರಿಗೆ, ಮೆಂತ್ಯೆ ಪುಡಿ, ತೆಂಗಿನಕಾಯಿ ಹಾಲು- 1/2 ಕಪ್‌, ಕೊತ್ತಂಬರಿ ಸೊಪ್ಪು, ಬೆಲ್ಲ ಎಣ್ಣೆ- 3 ಚಮಚ, ಉಪ್ಪು.


ಮಾಡುವ ವಿಧಾನ: ಸೋರೆಕಾಯಿಯನ್ನು ಸಿಪ್ಪೆ ತೆಗೆದು, ಸಣ್ಣದಾಗಿ ತುಂಡು ಮಾಡಿ, 10 ನಿಮಿಷ ನೀರಿನಲ್ಲಿ ನೆನೆಸಿ. ಹಾಗೆಯೇ ಬಟಾಣಿಯನ್ನೂ ನೀರಿನಲ್ಲಿ ನೆನೆಸಿಡಿ. ಟೊಮೇಟೊವನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್‌ ಮಾಡಿ. ಈಗ ಕುಕ್ಕರ್‌ ಅನ್ನು ಗ್ಯಾಸ್‌ ಮೇಲಿಟ್ಟು ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿ ಸಿಡಿಸಿ. ನಂತರ ಜೀರಿಗೆ ಹಾಕಿ ಹುರಿದು, ಮೆಂತ್ಯೆಪುಡಿ ಸೇರಿಸಿ.

ಅದಕ್ಕೆ ಸೋರೆಕಾಯಿ ಹಾಗೂ ಬಟಾಣಿ ಸೇರಿಸಿ, ಅರಿಶಿನ, ಮೆಣಸಿನಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಗರಂ ಮಸಾಲ ಪುಡಿ ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು, ಟೊಮೇಟೊ ಪೇಸ್ಟ್‌ ಸೇರಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. ನಂತರ ತೆಂಗಿನಹಾಲು ಮತ್ತು ಉಪ್ಪು ಸೇರಿಸಿ 15 ನಿಮಿಷ ಚೆನ್ನಾಗಿ ಕುದಿಸಿ, ಕುಕ್ಕರ್‌ ಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಮತ್ತು ಒಂದು ತುಂಡು ಬೆಲ್ಲ (ಬೇಕಿದ್ದರೆ) ಸೇರಿಸಿದರೆ, ಸೋರೆಕಾಯಿ ಟೊಮೇಟೊ ಸ್ವೀಟ್‌ ಗ್ರೇವಿ ರೆಡಿ.

Advertisement

ಬೂದು ಕುಂಬಳಕಾಯಿ ಬರ್ಫಿ
ಬೇಕಾಗುವ ಸಾಮಗ್ರಿ: ಕುಂಬಳಕಾಯಿ ತುರಿ- 1 ಕಪ್‌, ಹಾಲು 2 ಕಪ್‌, ಸಕ್ಕರೆ- 1 ಕಪ್‌, ತುಪ್ಪ- 2 ಚಮಚ, ಏಲಕ್ಕಿ ಪುಡಿ, ಬಾದಾಮಿ ಪುಡಿ, ಗೋಡಂಬಿ ಪುಡಿ- 1/2 ಕಪ್‌.


ಮಾಡುವ ವಿಧಾನ: ಬೂದು ಕುಂಬಳಕಾಯಿಯ ಸಿಪ್ಪೆ ತೆಗೆದು, ತುರಿದುಕೊಳ್ಳಿ. ಒಂದು ಪಾತ್ರೆಗೆ 2 ಕಪ್‌ ಹಾಲು ಹಾಕಿ, ಅದು ಅರ್ಧ ಕಪ್‌ ಆಗುವವರೆಗೆ ಕುದಿಸಿ, ಸಕ್ಕರೆ ಹಾಗೂ ಕುಂಬಳಕಾಯಿ ತುರಿಯನ್ನು ಸೇರಿಸಿ. ಆ ಮಿಶ್ರಣ ಕುದಿಯುವಾಗ ಡ್ರೈ ಫ್ರೂಟ್ಸ್‌ ಪುಡಿ, ತುಪ್ಪ ಸೇರಿಸಿ ಮಗುಚಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ, ತುಪ್ಪ ಹಚ್ಚಿದ ಪಾತ್ರೆಗೆ ಹಾಕಿ. ಬೇಕಿದ್ದರೆ ಮತ್ತಷ್ಟು ಡ್ರೈ ಫ್ರೂಟ್ಸ್‌ ಪುಡಿ ಉದುರಿಸಿ, ತಣಿಯಲು ಬಿಡಿ. ತಣ್ಣಗಾದ ನಂತರ ತ್ರಿಕೋನಾಕಾರವಾಗಿ ಕತ್ತರಿಸಿ.

Advertisement

Udayavani is now on Telegram. Click here to join our channel and stay updated with the latest news.

Next