Advertisement
ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕುಕ್ಕಿಂಗ್ ಕಾಸ್ಟ್ ಹಣ ನೀಡುವ ಬಗ್ಗೆ ಸರಕಾರ ಘೋಷಿಸಿತ್ತು.
Related Articles
Advertisement
ಏನು ತೊಂದರೆ?ಮಕ್ಕಳಿಗೆ ಕುಕ್ಕಿಂಗ್ ಕಾಸ್ಟ್ ನೀಡಲು ಸರಕಾರ ಹಣ ಮೀಸಲಿರಿಸಿದೆ. ಶಾಲಾ, ತಾಲೂಕು, ಜಿಲ್ಲಾ ಹಂತದಿಂದ ಮಕ್ಕಳ ಖಾತೆಗೆ ಸಂಬಂಧಿಸಿದ ಮಾಹಿತಿ ಸಂದೇಶಗಳು ತಂತ್ರಾಂಶದಲ್ಲಿ ದಾಖಲುಗೊಂಡು ರಾಜ್ಯಮಟ್ಟದ ತಂತ್ರಾಶಕ್ಕೆ ವರ್ಗಾವಣೆಯಾಗಿದೆ. ಮಕ್ಕಳ ಆಧಾರ್ ಕಾರ್ಡ್ ಅಥೆಂಟಿಕೇಶನ್ ಪರಿಶೀಲನೆ, ಅಕೌಂಟ್ಸ್ ಮತ್ತು ಅಧಾರ್ ಹೊಂದಾಣಿಕೆ ಪರಿಶೀಲನೆಗಳು ಆಗಬೇಕಿವೆ. ನೇರಾ ನಗದು ವರ್ಗಾವಣೆ ತಂತ್ರಾಂಶದಲ್ಲಿ ತಾಂತ್ರಿಕ ತೊಂದರೆಗಳಿಂದ ಇದೆಲ್ಲವೂ ನಿಧಾನಗತಿಯಲ್ಲಿ ಸಾಗಿದ್ದು, ಹಣ ಪಾವತಿ ವಿಳಂಬವಾಗುತ್ತಿದೆ. ಮಕ್ಕಳು ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 25 ಸಾವಿರ ಮಕ್ಕಳ ಖಾತೆಗಷ್ಟೇ ಜಮೆ ಆಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಆಧಾರ್ ಅಥೆಂಟಿಕೇಶನ್ ಆದ ಎಲ್ಲ ಮಕ್ಕಳದ್ದು ಪೇಮೆಂಟ್ ಮಾಡುತ್ತಿ ದ್ದೇವೆ. ಅಧಾರ್ ಮತ್ತು ಬ್ಯಾಂಕ್ ವಿವರ ಹೊಂದಾಣಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲವೂ ಸರಿ ಇದ್ದಲ್ಲಿ ಪರಿಗಣಿಸಿ, ಅವಕಾಶವಿದ್ದ ಎಲ್ಲ ಮಕ್ಕಳಿಗೂ ಸೌಲಭ್ಯ ಒದಗಿಸುತ್ತಿದ್ದೇವೆ.
– ನಾರಾಯಣ ಗೌಡ
ಜಂಟಿ ನಿರ್ದೇಶಕರು,
ಅಕ್ಷರ ದಾಸೋಹ, ಬೆಂಗಳೂರು