ಅಡುಗೆ ಮಾಡುವ ಪಾತ್ರೆಗಳಲ್ಲಿ ಕುಕ್ಕರ್ ಬಹಳ ಅಗತ್ಯವಾದಂತಹ ಪಾತ್ರೆಯಾಗಿದೆ. ಇಂಧನದ ಉಳಿತಾಯದಲ್ಲಿ ಕುಕ್ಕರ್‌ನ ಪಾತ್ರ ಬಹಳ ಮಹತ್ವವಾದುದು. ಇತ್ತೀಚೆಗೆ ಅಡುಗೆ ಅನಿಲ ತುಟ್ಟಿಯಾಗುತ್ತಿರುವುದರಿಂದ ಕುಕ್ಕರ್ ಬಳಸುವುದು ಅತ್ಯಂತ ಅಗತ್ಯವಾಗಿದೆ. ಈಗ ಹೆಚ್ಚಿನ ಮನೆಗಳಲ್ಲಿ ಕುಕ್ಕರ್‌ನ್ನು ಬಳಸುವುದರಿಂದ ಗೃಹಿಣಿಯರಿಗೆ, ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಅವರ ಕೆಲಸ ಹೊರೆಯನ್ನು ಕುಕ್ಕರ್ ಎಂಬ ಸಾಧನ ಅರ್ಧದಷ್ಟು ಕಡಿಮೆ ಮಾಡಿದೆ. ಕುಕ್ಕರ್ ಬಳಸುವುದರಿಂದ ಇಂಧನ ಉಳಿಸುವುದರ ಜೊತೆಗೆ ಸಮಯದ ಉಳಿತಾಯವೂ ಆಗುತ್ತದೆ. ಹಾಗಾಗಿ ಕುಕ್ಕರ್‌ನ ಸರಿಯಾದ ಬಳಕೆಯೂ ಅಷ್ಟೇ ಅಗತ್ಯ. ಕುಕ್ಕರ್ ಬಳಸುವಾಗ ಅದರ ಬಗೆಗೆ ತಿಳಿದಿರಲೇಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ:
.ಪ್ರಶರ್ ಕುಕ್ಕರ್ ಖರೀದಿ ಮಾಡುವಾಗ ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅದರ ಸಂಖ್ಯೆಯನ್ನು ಅವಲಂಬಿಸಿ ಕುಕ್ಕರ್ ಖರೀದಿ ಮಾಡಬೇಕು. ಮಾಡಬೇಕಾಗಿರುವ ಅಡುಗೆಯ ಪ್ರಮಾಣ ಕಡಿಮೆಯಿದ್ದರೆ ದೊಡ್ಡ ಕುಕ್ಕರನ್ನು ಬಳಸದೆ ಪ್ಯಾನ್ ಅಥವಾ ಕಡಿಮೆ ಸಾಮರ್ಥ್ಯದ ಕುಕ್ಕರ್‌ಗಳನ್ನು ಬಳಸಿ.
.ಕುಕ್ಕರ್‌ನ ಗ್ಯಾಸ್ಕೆಟ್ ಸಡಿಲವಾಗಿದ್ದರೆ ಅದನ್ನು ಬದಲಾಯಿಸಿ ಹೊಸದನ್ನು ಕೊಂಡುಕೊಳ್ಳಿ. ಇಲ್ಲದಿದ್ದರೆ ಮುಚ್ಚಳದಿಂದ ನೀರು ಹೊರಗೆ ಸೋರಿ ಅಧಿಕ ಇಂಧನ ವ್ಯಯವಾಗುತ್ತದೆ.
.ಕುಕ್ಕರನ್ನು ಗ್ಯಾಸ್ ಮೇಲಿಟ್ಟು ಅದರಲ್ಲಿ ಪ್ರಷರ್ ಹೋಗಲು ಶುರುವಾದ ಮೇಲಷ್ಟೇ ವೇಯrನ್ನು ಇಟ್ಟರೆ ಒಳ್ಳೆಯದು. ಜೊತೆಗೆ ಕುಕ್ಕರ್‌ನ ಮುಚ್ಚಳದ ಮಧ್ಯದಲ್ಲಿರುವ ರಂಧ್ರದ ನಡುವೆ ಆಹಾರ ಪದಾರ್ಥಗಳು ಸೇರಿ ಮುಚ್ಚಿಹೋಗದಂತೆ ಜಾಗ್ರತೆ ವಹಿಸಿ.
.ಕುಕ್ಕರ್ ಉಪಯೋಗಿಸುವ ಮೊದಲು ಅದರ ಕೆಳಗಿನ ಪಾತ್ರೆಗೆ ನೀರು ಹಾಕುವುದನ್ನು ಮರೆಯಬೇಡಿ. ಒಂದು ವೇಳೆ ಮರೆತುಬಿಟ್ಟರೆ ಕುಕ್ಕರ್‌ನ ಒಳಗಿನ ಅಧಿಕ ಒತ್ತಡದಿಂದ ಇಡೀ ಪಾತ್ರೆಯನ್ನೇ ಉಪಯೋಗಿಸದಿರುವ ಸ್ಥಿತಿ ತಲುಪಬಹುದು.
.ಕುಚ್ಚಲಕ್ಕಿ , ಮಾಂಸ, ಬೇಳೆಕಾಳುಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದರೆ ಅದು ಚೆನ್ನಾಗಿ ಬೇಯುವುದರ ಜೊತೆಗೆ ಗ್ಯಾಸ್‌ನ ಖರ್ಚೂ ಕಡಿಮೆಯಾಗುತ್ತದೆ.
.ಗ್ಯಾಸ್ಕೆಟನ್ನು ಬಳಸಿದ ನಂತರ ಅದನ್ನು ನೀರು ತುಂಬಿದ ಬಕೆಟ್‌ನಲ್ಲಿ ಹಾಕಿಡಿ.
.ಕುಕ್ಕರನ್ನು ಗ್ಯಾಸ್‌ನಲ್ಲಿಟ್ಟ ನಂತರ ಎಷ್ಟು ಹೊತ್ತಾದರೂ ಸೀಟಿ ಬಾರದಿದ್ದರೆ ಮುಚ್ಚಳವನ್ನು ತೆಗೆಯುವ ಗೋಜಿಗೆ ಹೋಗದೆ ಗ್ಯಾಸ್ ಆರಿಸಿಬಿಡಿ.
.ಕುಕ್ಕರ್‌ನ ವೇಯrನ್ನು ಕೆಳಗೆ ಬೀಳಿಸದೆ ಎಲ್ಲೆಂದರಲ್ಲಿ ಪಾತ್ರೆಗಳೊಂದಿಗೆ ಇಡದೆ ಜಾಗರೂಕತೆಯಿಂದ ಅದರ ಸ್ಥಾನದಲ್ಲಿಟ್ಟರೆ ಕೂಡಲೇ ಕೈಗೆ ಸಿಗುತ್ತದೆ.
– ಸ್ವಾತಿ