Advertisement

‘2008 ಬಾಟ್ಲಾ ಹೌಸ್’ ಎನ್‍ಕೌಂಟರ್ : ಉಗ್ರ ಅರಿಜ್ ಖಾನ್ ಮೇಲಿನ ಆರೋಪ ಸಾಬೀತು

07:25 PM Mar 08, 2021 | Team Udayavani |

ನವದೆಹಲಿ :  2008ರ ಬಾಟ್ಲಾ ಹೌಸ್ ಎನ್‍ಕೌಂಟರ್ ಘಟನೆಯ ಆರೋಪಿ ಅರಿಜ್ ಖಾನ್ ಮೇಲಿನ ಆರೋಪ ಸಾಬೀತಾಗಿದೆ. ಇಂದು (ಮಾರ್ಚ್ 8) ವಿಚಾರಣೆ ಪೂರ್ಣಗೊಳಿಸಿದ ಸ್ಥಳೀಯ ನ್ಯಾಯಾಲಯ ಮುಂದಿನ ಸೋಮವಾರ ( ಮಾರ್ಚ್ 15) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

Advertisement

2008 ರಲ್ಲಿ ದೆಹಲಿಯ ಒಕ್ಲಾ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಭಯೋತ್ಪಾದಕರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಪ್ರಾಣ ಕಳೆದುಕೊಂಡಿದ್ದರು, ಮತ್ತೀಬ್ಬರು ಪೊಲೀಸರು ಗಾಯಗೊಂಡಿದ್ದರು.

ಉತ್ತರ ಪ್ರದೇಶದ ಅಜಮ್ಗರ್ ತಲೆ ಮರೆಸಿಕೊಂಡಿದ್ದ ಉಗ್ರ ಅರಿಜ್ ಖಾನ್‍ ನನ್ನು ದೆಹಲಿಯ ಪೊಲೀಸರು 2018 ರ ಫೆಬ್ರವರಿಯಲ್ಲಿ ಬಂಧಿಸಿ ಕೋರ್ಟ್ ಎದುರು ಹಾಜರು ಪಡಿಸಿದ್ದರು. ಇದೀಗ ವಿಚಾರಣೆ ಮುಕ್ತಾಯಗೊಂಡಿದ್ದು ಅರಿಜ್ ಖಾನ್ ಆರೋಪಿ ಎಂದು ನ್ಯಾಯಾಲಯ ಘೋಷಿಸಿದೆ. ದೆಹಲಿ , ರಾಜಸ್ಥಾನ ಗುಜರಾತ್  ಹಾಗೂ ಉತ್ತರ ಪ್ರದೇಶಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಈತನ ಕೈವಾಡ ಇದೆ ಎಂದು ಆರೋಪ ಇತ್ತು.

ಇನ್ನು ಬಾಟ್ಲಾ ಹೌಸ್ ಘಟನೆಯ ಪ್ರಮುಖ ಉಗ್ರರ ಪೈಕಿ ಶಾಹದ್ ಅಹ್ಮದ್ 2015 ರಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಅತಿಫ್ ಅಮಿನ್ ಹಾಗೂ ಮೊಹಮ್ಮದ ಸಾಜಿದ್ ಹೆಸರಿನ ಉಗ್ರರು ಎನ್ ಕೌಂಟರ್ ವೇಳೆ ಹತರಾಗಿದ್ದರು. ಮತ್ತೊಮ್ಮ ಉಗ್ರ ಮೊಹಮ್ಮದ ಶಫಿ ಸ್ಥಳೀಯ ಪೊಲೀಸರಿಂದ ಬಂಧನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next