Advertisement

Conversion; ದೇಶದಲ್ಲಿ ಮೂರು ಸಾವಿರ ಕಾನೂನು ಬಾಹಿರ ಚರ್ಚ್ ಗಳಿವೆ: ಮುತಾಲಿಕ್

12:51 AM Feb 20, 2024 | Team Udayavani |

ಕೊಪ್ಪಳ : ದೇಶದಲ್ಲಿ ಮೂರು ಸಾವಿರ್ ಚರ್ಚ್ ಗಳು ಕಾನೂನು ಬಾಹಿರವಾಗಿದ್ದುಅನಧಿಕೃತ ಚರ್ಚ್ ಗಳನ್ನು ಬುಲ್ಡೋಜರ್ ಬಳಸಿ ಒಡೆಯಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೋಮವಾರ ಕಿಡಿ ಕಾರಿದ್ದಾರೆ.

Advertisement

ಲಂಬಾಣಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಯತ್ನ ನಡೆಯುತ್ತಿದೆ. ಅವರ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮತಾಂತರ ಅನ್ನೋದು ದೇಶಕ್ಕೆ ಅಂಟಿಕೊಂಡಿರುವ ದೊಡ್ಡ ವೈರಸ್ ಮತ್ತು ಕ್ಯಾನ್ಸರ್ ಆಗಿದ್ದು , ಮತಾಂತರ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂದರು.

ವಸತಿ ಶಾಲೆಗಳ ಬರಹ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ನವರು ಬಾಬರ್ ಪರವಾಗಿ ನಿಂತರೇ ವಿನಃ ರಾಮನ ಪರವಾಗಿ ನಿಲ್ಲಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದೆ. ಕೈ ಮುಗಿದು ಒಳಗೆ ಬಾ ಅಂದರೆ ಕಾಂಗ್ರೆಸ್ ನವರಿಗೆ ಏನು ತೊಂದರೆ? ಗಣೇಶ ಹಬ್ಬ ಮಾಡಿದರೆ, ಸರಸ್ವತಿ ಪೂಜೆ ಮಾಡಿದರೆ ನಿಮಗೇನು ತೊಂದರೆ? ಎಂದು ಪ್ರಶ್ನಿಸಿದರು.

ಮುಸ್ಲಿರ ಓಲೈಕೆಗಾಗಿ ಈ ರೀತಿ ‌ಸರ್ಕಾರ ಮಾಡುತ್ತಿದ್ದು, ಹೇಗೆ ಬೇಕೋ ಹಾಗೆ ಬದಲಾಯಿಸುತ್ತಿದೆ. ಸಿಎಂಗಂತೂ ಕುಂಕುಮ ಕಂಡರೆ ಆಗುವುದಿಲ್ಲ ಆದರೆ ದರ್ಗಾಕ್ಕೆ ಹೋಗುತ್ತಾರೆ. ನೂರು ರಾಮ ಮಂದಿರ ಅಭಿವೃದ್ಧಿ ಮಾಡ್ತೇವೆ ಅಂತ ಹೇಳಿದ್ದರು ಬಜೆಟ್ ನಲ್ಲಿ ಅನುದಾನ ನೀಡಲಿಲ್ಲ. ಮುಸ್ಲಿಮರಿಗೆ ಅನೇಕ ರೀತಿಯ ಅನುದಾನ ನೀಡಿದ್ದಾರೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಆನಂದ ತಡೆದುಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದರು.

ಸುಪ್ರೀಂ ಕೋರ್ಟ್ 63 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ಅಂತ ಹೇಳಿದೆ. ಇಂತಲ್ಲಿಯೇ ಗುದ್ದಲಿ ಇಟ್ಟು ನಿರ್ಮಾಣ ಮಾಡಿ ಅಂತ ಹೇಳಿಲ್ಲ. ರಾಮನ ಬಗ್ಗೆ ಏನಾದರೂ ಮಾತನಾಡಿದರೆ ರಾಮನ ಶಾಪ ತಟ್ಟುತ್ತೆ ಎಂದು ಕಿಡಿ ಕಾರಿದರು.

Advertisement

2024ರ ಬಳಿಕ ಭಾರತ ಹಿಂದೂರಾಷ್ಟ್ರ
2024ರ ಬಳಿಕ ಭಾರತ ಹಿಂದೂ ರಾಷ್ಟ್ರವಾಗಿ ಘೋಷಣೆಯಾಗಲಿದೆ ಎಂದು ಮುತಾಲಿಕ್‌ ಹೇಳಿದರು. ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ರಾಷ್ಟ್ರದ ಆಲೋಚನೆ ಮಾಡಲೇಬೇಕು. ಚುನಾವಣೆ ಬಂದಾಗ ಮಾತ್ರ ಅಲ್ಲ, ಪ್ರಧಾನಿ ಮೋದಿ ಹಿಂದೂ ರಾಷ್ಟ್ರದ ಕಡೆ ಹೆಜ್ಜೆ ಇಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ 400 ಸ್ಥಾನಗಳನ್ನು ಗೆಲ್ಲುತ್ತಾರೆ. ಬಳಿಕ ಹಿಂದೂ ರಾಷ್ಟ್ರ ಘೋಷಣೆಯಾಗುತ್ತದೆ. 2014ರ ಹಿಂದಿನ ಪ್ರಧಾನಿಗಳು ಒಂದು ದೇವಸ್ಥಾನಕ್ಕೂ ಹೋಗಿರಲಿಕ್ಕಿಲ್ಲ, ಆದರೆ ಮದ್ರಸಾಗಳಿಗೆ ಹೋಗುತ್ತಿದ್ದರು. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾಕರು. ಮುಸ್ಲಿಂ, ಕ್ರಿಶ್ಚಿಯನ್ನರು ನಮ್ಮ ಸಂಸ್ಕೃತಿಯನ್ನು ಒಪ್ಪಿ ಜತೆಯಾಗಿ ಬದುಕು ನಡೆಸಬಹುದು ಎಂದ

Advertisement

Udayavani is now on Telegram. Click here to join our channel and stay updated with the latest news.

Next